ಕೊಲ್ಕತ್ತಾ: ದೇಶದೆಲ್ಲೆಡೆ ನವರಾತ್ರಿ ಆಚರಣೆ ಜೋರಾಗಿದ್ದು, ನವ ದುರ್ಗೆಯರಿಗೆ ಪೂಜೆ ಸಲ್ಲಿಸಿ ಭಕ್ತರು ನವರಾತ್ರಿಯನ್ನು ಆಚರಿಸುತ್ತಿದ್ದಾರೆ. ಆದರೆ ಕೋಲ್ಕತ್ತಾದಲ್ಲಿ ನಡೆಯುತ್ತಿರುವ ಅದ್ಧೂರಿ ದುರ್ಗೆ ಆರಾಧನೆ ಎಲ್ಲರ ಗಮನ ಸೆಳೆದಿದೆ. ಬರೋಬ್ಬರಿ 50 ಕೆ.ಜಿ ಚಿನ್ನಾದಲ್ಲಿ ದುರ್ಗೆಯನ್ನು ಅಲಂಕರಿಸಲಾಗಿದೆ.
Advertisement
ನವರಾತ್ರಿ ಹಿನ್ನೆಲೆ ಅನೇಕ ಕಡೆ ದುರ್ಗಾ ದೇವಿಗಾಗಿ ಪೆಂಡಾಲ್ ನಿರ್ಮಿಸಿ ಭಕ್ತರು ಪೂಜೆ ಸಲ್ಲಿಸುತ್ತಾರೆ. ದುರ್ಗಾ ಪೆಂಡಾಲ್‍ನಲ್ಲಿ ಅನೇಕ ಕಾರ್ಯಕ್ರಮಗಳು ಕೂಡ ನಡೆಯುತ್ತವೆ. ಅದರಲ್ಲೂ ಪಶ್ಚಿಮ ಬಂಗಾಳದಲ್ಲಿ ದುರ್ಗೆ ಆರಾಧನೆ ತುಸು ಜೋರಾಗಿಯೇ ಮಾಡಲಾಗುತ್ತದೆ. ಪ್ರತಿ ವರ್ಷದಂತೆ ಈ ವರ್ಷವೂ ಕೂಡ ದುರ್ಗಾ ಪೂಜೆಯನ್ನು ಅದ್ಧೂರಿಯಾಗಿ ಮಾಡಲಾಗ್ತಿದೆ. ಕೊಲ್ಕತ್ತಾದ ಸಂತೋಷ್ ಮಿತ್ರ ದುರ್ಗಾ ಉತ್ಸವ ಸಮಿತಿ ಸದಸ್ಯರು ದುರ್ಗಾ ಪೆಂಡಾಲ್ ಹಾಕಿದ್ದಾರೆ. ಈ ಪೆಂಡಲ್‍ನಲ್ಲಿ ಪ್ರತಿಷ್ಠಾಪಿರುವ ದುರ್ಗೆಗೆ ಬರೋಬ್ಬರಿ 50 ಕೆ.ಜಿ ಚಿನ್ನವನ್ನು ಹಾಕಿದ್ದಾರೆ. ದುರ್ಗಾ ದೇವಿಯ ಮೂರ್ತಿ ಹಾಗೂ ಪೆಂಡಾಲ್‍ಗೆ ಹಾಕಿರುವ ಬಂಗಾರವೆಲ್ಲಾ ಸೇರಿ ಒಟ್ಟು 20 ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ.
Advertisement
Advertisement
ಈ ಬಾರಿಯ ನವರಾತ್ರಿಯಲ್ಲಿ ಕೋಲ್ಕತ್ತಾದ ದುರ್ಗಾ ದೇವಿಯ ಪ್ರತಿಮೆ ದೇಶದ ಅತ್ಯಂತ ದುಬಾರಿ ಮೂರ್ತಿ ಎಂದು ಸಮಿತಿ ಹೇಳಿಕೊಂಡಿದೆ. ಸಂತೋಷ್ ಮಿತ್ರ ಚೌಕದಲ್ಲಿ ನಿರ್ಮಿಸಲಾದ ಪೆಂಡಾಲ್‍ನಲ್ಲಿರುವ ದುರ್ಗಾ ದೇವಿ ಪ್ರತಿಮೆ 13 ಅಡಿ ಎತ್ತರವಿದೆ. ದುರ್ಗಾ ಪ್ರತಿಮೆಗೆ ಚಿನ್ನವನ್ನು ಲೇಪಿಸಲಾಗಿದ್ದು, ದೇವಿಯ ಮೈಮೇಲೆ ಕೂಡ ಚಿನ್ನಾಭರಣವನ್ನು ಹಾಕಲಾಗಿದೆ. ಅಲ್ಲದೆ ದೇವಿಯ ವಾಹನವಾದ ಸಿಂಹದ ಪ್ರತಿಮೆಗೂ ಕೂಡ ಚಿನ್ನವನ್ನು ಲೇಪಿಸಲಾಗಿದೆ.
Advertisement
ಪೆಂಡಾಲ್ ಸುತ್ತಮುತ್ತ ಬಿಗಿ ಭದ್ರತೆ ಒದಗಿಸಲಾಗಿದ್ದು, ಈ ಚಿನ್ನದ ದುರ್ಗೆ ಈಗ ದೇಶದೆಲ್ಲೆಡೆ ಭಾರೀ ಸುದ್ದಿಯಾಗಿದ್ದಾಳೆ. ದುರ್ಗಾ ದೇವಿಯ ದುಬಾರಿ ಆಧಾರನೆ ಎಲ್ಲರ ಗಮನ ಸೆಳೆದಿದೆ.