ನವದೆಹಲಿ: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗುತ್ತಿದ್ದು ಹಲವು ರಾಜ್ಯಗಳು ವ್ಯಾಟ್ ತೆರಿಗೆಯನ್ನು ಇಳಿಸಿದ್ದರೂ ಪೆಟ್ರೋಲ್ ಬೆಲೆ 80 ರ ಗಡಿ ದಾಟಿದೆ. ಆದರೂ ದೇಶದ ಕೆಲವು ಕಡೆ ಪೆಟ್ರೋಲ್, ಡೀಸೆಲ್ ಕಡಿಮೆ ಬೆಲೆಯಲ್ಲಿ ಸಿಗುತ್ತಿದೆ.
ಪೆಟ್ರೋಲ್ ಬೆಲೆ ಎಲ್ಲಿ ಎಷ್ಟು?
ದೇಶದಲ್ಲಿ ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಪೆಟ್ರೋಲ್ ದರವಿದ್ದು ಅಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಗೆ 88.67 ರೂ. ಇದೆ. ಬಿಹಾರದ ಪಾಟ್ನಾದಲ್ಲಿ 87.46 ರೂ. ಇದ್ದರೆ ಮಧ್ಯಪ್ರದೇಶದ ಭೋಪಾಲ್ ನಲ್ಲಿ 87.03 ರೂ. ಇದೆ.
Advertisement
ಅಂಡಮಾನ್ ನಿಕೋಬಾರ್ ರಾಜಧಾನಿ ಪೋರ್ಟ್ ಬ್ಲೇರ್ ನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 69.97 ರೂ. ಇದ್ದರೆ, ಗೋವಾದ ರಾಜಧಾನಿ ಪಣಜಿಯಲ್ಲಿ 74.97 ರೂ., ತ್ರಿಪುರಾದ ರಾಜಧಾನಿ ಅಗರ್ತಲಾದಲ್ಲಿ 79.71 ರೂ. ಇದೆ.
Advertisement
Advertisement
ಡೀಸೆಲ್ ಬೆಲೆ ಎಲ್ಲಿ ಎಷ್ಟು?
ತೆಲಂಗಾಣದಲ್ಲಿ ಡೀಸೆಲ್ ಮೇಲೆ 26.01% ವ್ಯಾಟ್ ತೆರಿಗೆ ಹಾಕಿದೆ. ಹೀಗಾಗಿ ದೇಶದಲ್ಲೇ ಅತಿ ಹೆಚ್ಚು ಡೀಸೆಲ್ ದರ ತೆಲಂಗಾಣದಲ್ಲಿದೆ. ಹೈದರಾಬಾದಿನಲ್ಲಿ ಪ್ರತಿ ಲೀಟರ್ ಡೀಸೆಲ್ ಬೆಲೆ 79.73 ರೂ., ಅಮರಾವತಿಯಲ್ಲಿ 78.81 ರೂ., ತಿರುವನಂತಪುರಂನಲ್ಲಿ 78.47 ರೂ., ರಾಯ್ಪುರದಲ್ಲಿ 79.12 ರೂ., ಅಹಮದಾಬಾದ್ 78.66 ರೂ. ಇದೆ. ಇದನ್ನೂ ಓದಿ: ಬಜೆಟ್ ನಂತ್ರ ಪೆಟ್ರೋಲ್, ಡೀಸೆಲ್ ಆದಾಯ ಭಾರೀ ಕುಸಿತ!
Advertisement
ಅಂಡಮಾನ್ ನಿಕೋಬಾರ್ ರಾಜಧಾನಿ ಪೋರ್ಟ್ ಬ್ಲೇರ್ ನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 68.58 ರೂ., ಅರುಣಾಚಲ ಪ್ರದೇಶದ ರಾಜಧಾನಿ ಇಟನಗರ್ 70.44 ರೂ., ಮಿಜೋರಾಂ ರಾಜಧಾನಿ ಐಜ್ವಾಲ್ 70.53 ರೂ. ಇದೆ.
ಪೆಟ್ರೋಲ್ ಮೇಲೆ ಕೇಂದ್ರ ಸರ್ಕಾರ ಅಬಕಾರಿ ಸುಂಕ ಹಾಕಿದರೆ ರಾಜ್ಯ ಸರ್ಕಾರಗಳು ವ್ಯಾಟ್ ಹಾಕುತ್ತವೆ. ಕೇಂದ್ರಾಡಳಿತ ಪ್ರದೇಶವಾದ ಅಂಡಮಾನ್ ನಿಕೋಬಾರ್ ನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೆಲೆ 6% ವ್ಯಾಟ್ ಹಾಕಿದೆ. ಹೀಗಾಗಿ ದೇಶದಲ್ಲಿ ಅತಿ ಕಡಿಮೆ ಬೆಲೆಯಲ್ಲಿ ಪೆಟ್ರೋಲ್, ಡೀಸೆಲ್ ಇಲ್ಲಿ ಲಭ್ಯವಿದೆ.
ದೇಶದಲ್ಲಿರುವ ಮಹಾನಗರಗಳ ಪೈಕಿ ದೆಹಲಿಯಲ್ಲಿ ಅತಿ ಕಡಿಮೆ ಬೆಲೆ ಇದ್ದು, ಪ್ರತಿ ಲೀಟರ್ ಪೆಟ್ರೋಲ್ ಬೆಲೆ 81.28 ರೂ. ಇದ್ದರೆ, ಡೀಸೆಲ್ ಬೆಲೆ 73.30 ರೂ. ಇದೆ. ಇದನ್ನೂ ಓದಿ: ಲೀಟರ್ ಪೆಟ್ರೋಲ್ ಬೆಲೆ 55 ರೂ., ಡೀಸೆಲ್ 50 ರೂ. ಆಗುತ್ತೆ: ಗಡ್ಕರಿ