ಬೆಂಗಳೂರು: ಎದುರಾಳಿಗಳನ್ನೆಲ್ಲಾ ನೆಲಕ್ಕೆ ಕೆಡವಿ ಪ್ರಚಂಡ ಬಹುಮತದೊಂದಿಗೆ 2014 ಮೇ 26ರಂದು ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ಸರ್ಕಾರಕ್ಕೆ ಇಂದು ಮೂರು ವರ್ಷದ ಸಂಭ್ರಮ.
ಸಬ್ಕಾ ಸಾಥ್ ಸಬ್ಕಾ ವಿಕಾಸ್ ಮಂತ್ರದೊಂದಿಗೆ, ಭಾರತವನ್ನು ವಿಶ್ವ ಗುರುವಿನ ಸ್ಥಾನಕ್ಕೆ ಏರಿಸುವ ಸಂಕಲ್ಪದೊಂದಿಗೆ, ರಾಜ ಸಿಂಹಾಸನ ಅಲಂಕರಿಸಿದ್ದ ನರೇಂದ್ರ ಮೋದಿ ದರ್ಬಾರ್ ಗೆ ಮೂರು ಸಂವತ್ಸರದ ಸಡಗರ. ನಿಮ್ಮ ಜೊತೆಗಿದ್ದೇವೆ, ವಿಶ್ವಾಸವಿದೆ, ಆಗುತ್ತಿದೆ ವಿಕಾಸ..! ಇದು ಮೂರು ವರ್ಷ ಪೂರೈಸಿದ ಸಂದರ್ಭದಲ್ಲಿ ಮೋದಿ ಸರ್ಕಾರ ಹೊರಡಿಸಿರುವ ಘೋಷ ವಾಕ್ಯ.
Advertisement
ನಮ್ಮದು ದಿಟ್ಟ ಹಾಗೂ ದೃಢ ಸರ್ಕಾರ, ನಮ್ಮದು ಪ್ರಾಮಾಣಿಕ ಮತ್ತು ಭ್ರಷ್ಟಾಚಾರ ರಹಿತ ರಾಜ್ಯಭಾರ, ನಮ್ಮದು ಪ್ರಜಾ ಕಾಳಜಿವುಳ್ಳ ಆಡಳಿತ, ನಮ್ಮ ಅವಧಿಯಲ್ಲಿ ಭಾರತ ಜಾಗತಿಕ ಮಾನ್ಯತೆ ಹೊಂದುತ್ತಿದೆ, ದೇಶದ ಅಭಿವೃದ್ಧಿ ತೀವ್ರಗತಿಯಲ್ಲಿದೆ, ಪ್ರಜೆಗಳು ಕ್ಷೇಮವಾಗಿದ್ದಾರೆ, ಅಂತೆಲ್ಲಾ ಬೆನ್ನು ತಟ್ಟಿಕೊಳ್ತಿದೆ ಮೋದಿ ಸರ್ಕಾರ.
Advertisement
ಹಾಗಾದ್ರೆ ನಿಜಕ್ಕೂ ನುಡಿದಂತೆ ನಡೆದಿದ್ದಾರಾ ನರೇಂದ್ರ ಮೋದಿ? ಮತದಾರರಿಗೆ ಕೊಟ್ಟ ಮಾತು, ಇಟ್ಟ ವಾಗ್ದಾನ ಈಡೇರಿಸಿದ್ದಾರಾ? ಮೋದಿ ಯುಗದಲ್ಲಿ ದೇಶ ಸರಿ ದಾರಿಯಲ್ಲಿ ಸಾಗಿದ್ಯಾ? ನೋಟು ಬ್ಯಾನ್, ಸರ್ಜಿಕಲ್ ದಾಳಿ, ಕಪ್ಪು ಹಣ ಬೇನಾಮಿ ಆಸ್ತಿಗೆ ಅಂಕುಶ, ಡಿಜಿಟಲ್ ಇಂಡಿಯಾ, ಜನಧನ ಯೋಜನೆ, ನಮಾಮಿ ಗಂಗಾ, ಏಕ ದೇಶ ಏಕ ತೆರಿಗೆ ವ್ಯವಸ್ಥೆ, ಸ್ವಚ್ಛ ಭಾರತ ಅಭಿಯಾನ, ಘರ್ ವಾಪಸಿ, ಗೋರಕ್ಷಣೆ ಮುಂತಾದ ಮೋದಿಯ ಮಹತ್ವದ ನಿರ್ಧಾರಗಳಿಗೆ ಜನರ ಅನಿಸಿಕೆ ಅಭಿಪ್ರಾಯವೇನು? ಈ ಮೂರು ವರ್ಷಗಳಲ್ಲಿ ದೇಶವಾಸಿಗಳ ಆಸೆ ಆಶೋತ್ತರ ತಕ್ಕಮಟ್ಟಿಗಾದರೂ ಈಡೇರಿದ್ಯೇನು? 2019ರ ಚುನಾವಣೆಯಲ್ಲೂ ಮೋದಿ ಅವರೇ ಮರು ಆಯ್ಕೆ ಆಗ್ತಾರೇನು? ಮೋದಿಯ ಅಶ್ವಮೇಧ ಕುದುರೆ ಕಟ್ಟುವ ತಾಕತ್ತು ಯಾರಿಗೂ ಇಲ್ಲವೇನು? ಹೀಗೆ ಈ ಎಲ್ಲಾ ಪ್ರಶ್ನೆಗಳಿಗೆ ಪ್ರಾಮಾಣಿಕ ಉತ್ತರ ಹುಡುಕುವ ಪ್ರಯತ್ನ ಮಾಡಿದೆ ನಿಮ್ಮ ಪಬ್ಲಿಕ್ ಟಿವಿ.
Advertisement
ಮೋದಿಯ ವರ್ಚಸ್ಸಿಗೆ ಕನ್ನಡಿ ಹಿಡಿಯಲಿದೆ ಪಬ್ಲಿಕ್ ಟಿವಿ ನಡೆಸಿರುವ ಮೆಗಾ ಸರ್ವೇಯ ಮೆಗಾ ಫಲಿತಾಂಶ. ಇದು ವಿಶ್ವಸನೀಯ, ಪ್ರಾಮಾಣಿಕ ಹಾಗೂ ನಿಷ್ಪಕ್ಷಪಾತ ಸಮೀಕ್ಷೆ ಎಂಬುದರಲ್ಲಿ ಎರಡು ಮಾತಿಲ್ಲ. ನಂಬಿಕೆಗೆ ಯೋಗ್ಯವಾದ ಸಮೀಕ್ಷೆಗಳ ಸಿದ್ಧ ಸೂತ್ರ ಹಾಗೂ ಶಿಸ್ತಿನ ಮಾನದಂಡವನ್ನು ಅನುಸರಿಸಲಾಗಿದೆ. ಕರ್ನಾಟಕದ ಮೂಲೆ ಮೂಲೆಗೂ ತೆರಳಿ ಜನ ಮನ ಅರಿಯುವ ನಿಯತ್ತಿನ ಪ್ರಯತ್ನ ಮಾಡಿದ್ದೇವೆ.
Advertisement
ನಗರ, ಪಟ್ಟಣ, ಗ್ರಾಮೀಣ ಭಾಗಗಳಲ್ಲಿ ಸರ್ವೇಕ್ಷಣಾ ಕಾರ್ಯ ಮಾಡಿದ್ದೇವೆ. ಸಮಾಜದ ಎಲ್ಲಾ ಸ್ಥರದ ಪ್ರಜೆಗಳನ್ನು ಮಾತನಾಡಿಸಿ 2,500ಕ್ಕೂ ಅಧಿಕ ಸ್ಯಾಂಪಲ್ ಗಳನ್ನು ಸಂಗ್ರಹಿಸಿದ್ದೇವೆ. ಹಾಗಾದ್ರೆ ಜನತಾ ಜನಾರ್ದನರ ಮನದಾಳ ಏನು? ಮೋದಿಯ ಹೊಗಳಿದ್ದಾರಾ ಅಥವಾ ತೆಗಳಿದ್ದಾರಾ? ಪಬ್ಲಿಕ್ ಪರೀಕ್ಷೆಯಲ್ಲಿ ಮೋದಿ ಪಡೆದಿದ್ದು ಫಸ್ಟಾ ಕ್ಲಾಸೋ, ಸೆಕೆಂಡ್ ಕ್ಲಾಸೋ, ಜಸ್ಟ್ ಪಾಸೋ ಅಥವಾ ಫೇಲೋ? ಈ ಎಲ್ಲದಕ್ಕೂ ಅಂಕಿ ಅಂಶಗಳ ಸಮೇತ ಉತ್ತರ ಕೊಡಲಿದೆ ಈ ಸಮೀಕ್ಷೆ.
ಇದನ್ನೂ ಓದಿ: ಈಗ ಕರ್ನಾಟಕದಲ್ಲಿ ಚುನಾವಣೆ ನಡೆದ್ರೆ ಯಾರಿಗೆ ಎಷ್ಟು ಸ್ಥಾನ: ಪಬ್ಲಿಕ್ ಟಿವಿ 2017ರ ಫೆಬ್ರವರಿಯಲ್ಲಿ ನಡೆಸಿದ ಮೆಗಾ ಸರ್ವೇ
1. ಮೋದಿ ಸರ್ಕಾರದ 3 ವರ್ಷಗಳ ಆಡಳಿತದ ಬಗ್ಗೆ ನಿಮ್ಮ ಅಭಿಪ್ರಾಯ?
ಸಮಗ್ರ ಕರ್ನಾಟಕ
ಕಳಪೆ – 10.65%
ಸಾಧಾರಣ – 23.66%
ಉತ್ತಮ – 37.58%
ಅತ್ಯುತ್ತಮ – 28.11%
ಬೆಂಗಳೂರು
ಕಳಪೆ – 4.71%
ಸಾಧಾರಣ – 25.29%
ಉತ್ತಮ – 40%
ಅತ್ಯುತ್ತಮ – 30%
2. ಕಳೆದ ಮೂರು ವರ್ಷಗಳಲ್ಲಿ ಮೋದಿ ಜನಪ್ರಿಯತೆ ಹೇಗಿದೆ?
ಹೆಚ್ಚಾಗಿದೆ – 62.81%
ಕಡಿಮೆಯಾಗಿದೆ – 15.43%
ಯಾವುದೇ ಬದಲಾವಣೆ ಇಲ್ಲ – 21.75%
3. ಮೋದಿ ಸರ್ಕಾರ ಕೈಗೊಂಡ ಅತ್ಯಂತ ಮಹತ್ವದ ನಿರ್ಧಾರ ಯಾವುದು?
ನೋಟ್‍ಬ್ಯಾನ್ – 40.00%
ಸರ್ಜಿಕಲ್ ದಾಳಿ – 14.21%
ಸ್ವಚ್ಛ ಭಾರತ ಅಭಿಯಾನ – 23.75%
ಮೇಕ್ ಇನ್ ಇಂಡಿಯಾ – 9.03%
ಜನಧನ ಯೋಜನೆ – 5.97%
ಜಿಎಸ್‍ಟಿ – 7.04%
4. ಕಪ್ಪು ಹಣ ನಿಯಂತ್ರಣಕ್ಕೆ ಮೋದಿ ಕೈಗೊಂಡ ಕ್ರಮಗಳು ಯಶಸ್ವಿಯಾಗಿವ್ಯಾ?
ಹೌದು – 33.80%
ತಕ್ಕ ಮಟ್ಟಿಗೆ – 44.13%
ಇಲ್ಲ – 18.91%
ಗೊತ್ತಿಲ್ಲ – 3.16%
5. ಮೋದಿ ಸರ್ಕಾರದ ಅವಧಿಯಲ್ಲಿ ನಿಮ್ಮ ಜೀವನ ಮಟ್ಟ ಬದಲಾಗಿದ್ಯಾ..?
ಪರವಾಗಿಲ್ಲ – 38.43%
ಚೆನ್ನಾಗಿದೆ – 23.87%
ಏನೂ ಬದಲಾಗಿಲ್ಲ – 27.99%
ಮತ್ತಷ್ಟು ಬಿಗಡಾಯಿಸಿದೆ – 9.71%
6. ಮೋದಿ ಸರ್ಕಾರ ಕಡಿಮೆ ಯಶಸ್ಸು ಕಂಡಿರುವುದು ಯಾವುದರಲ್ಲಿ?
ಭಯೋತ್ಪಾದನೆಗೆ ಕಡಿವಾಣ – 18.03%
ರೈತರ ಪರಿಸ್ಥಿತಿ ಸುಧಾರಣೆ – 28.26%
ಉದ್ಯೋಗ ಸೃಷ್ಟಿ – 14.62%
ಭ್ರಷ್ಟಾಚಾರ ನಿಯಂತ್ರಣ – 22.96%
ಬಡತನ ನಿರ್ಮೂಲನೆ – 16.13%
7. ಮೋದಿಯ ನೋಟ್ ಬ್ಯಾನ್ ಯಜ್ಞಕ್ಕೆ ಏನಂತೀರಿ?
ಸರಿ – 72.99%
ತಪ್ಪು – 17.13%
ಗೊತ್ತಿಲ್ಲ – 9.88%
8. ನೋಟ್ ಬ್ಯಾನ್‍ನಿಂದ ಭ್ರಷ್ಟಾಚಾರ ನಿಯಂತ್ರಣಕ್ಕೆ ಬಂದಿದ್ಯಾ?
ಹೌದು – 44.26%
ಇಲ್ಲ – 43.29%
ಗೊತ್ತಿಲ್ಲ – 12.45%
ಬೆಂಗಳೂರು
ಹೌದು – 45.51%
ಇಲ್ಲ – 41.92%
ಗೊತ್ತಿಲ್ಲ – 12.57%
9. ಮೋದಿ ಯುಗದಲ್ಲಿ ಜಾಗತಿಕವಾಗಿ ಭಾರತದ ಇಮೇಜ್ ಬದಲಾಗಿದ್ಯಾ?
ಹೌದು – 52.69%
ಪರವಾಗಿಲ್ಲ – 30.07%
ಇಲ್ಲ – 12.65%
ಗೊತ್ತಿಲ್ಲ – 4.59%
10. ಮೋದಿ ಆಡಳಿತದಲ್ಲಿ ಭಾರತ ಸದೃಢವಾಗಿದ್ಯಾ?
ಹೌದು – 66.08%
ಇಲ್ಲ – 20.34%
ಗೊತ್ತಿಲ್ಲ – 13.58%
11. ಪಾಕಿಸ್ತಾನದ ವಿರುದ್ಧ ಮೋದಿ ಸರ್ಕಾರ ಇನ್ನಷ್ಟು ಬಿಗಿ ನಿಲುವು ಹೊಂದಬೇಕಾ?
ಹೌದು – 89.93%
ಇಲ್ಲ – 5.63%
ಗೊತ್ತಿಲ್ಲ – 4.44%
12. ಭಾರತ ಯುದ್ಧದ ಮೂಲಕ ಪಾಕಿಸ್ತಾನಕ್ಕೆ ಪ್ರತ್ಯುತ್ತರ ನೀಡಬೇಕಾ?
ಯುದ್ಧ ಬೇಕು – 55.81%
ಯುದ್ಧ ಬೇಡ – 34.54%
ಗೊತ್ತಿಲ್ಲ – 9.65 %
13. ಮೋದಿ ದೇಶವಾಸಿಗಳಿಗೆ ಕೊಟ್ಟ ವಾಗ್ದಾನ ಈಡೇರಿಸಿದ್ದಾರಾ?
ಈಡೇರಿಸಿದ್ದಾರೆ – 24.43%
ಈಡೇರಿಸಿಲ್ಲ – 21.32%
ಪರವಾಗಿಲ್ಲ – 45.71%
ಗೊತ್ತಿಲ್ಲ – 8.54%
14. ಈಗ ಚುನಾವಣೆ ನಡೆದರೆ ನಿಮ್ಮ ಮತ ಯಾರಿಗೆ?
ಮೋದಿ – 66.85%
ರಾಹುಲ್ ಗಾಂಧಿ – 10.60%
ಗೊತ್ತಿಲ್ಲ – 22.55%
ಬೆಂಗಳೂರು
ಮೋದಿ – 69.94%
ರಾಹುಲ್ ಗಾಂಧಿ – 3.07%
ಗೊತ್ತಿಲ್ಲ – 26.99%
15. ರಾಜ್ಯದಲ್ಲಿ ಸಿದ್ದರಾಮಯ್ಯ ಮೋದಿ ಇಬ್ಬರಲ್ಲಿ ಯಾರು ಹೆಚ್ಚು ಜನಪ್ರಿಯರು?
ಸಿದ್ದರಾಮಯ್ಯ – 30.18%
ಮೋದಿ – 55.50%
ಗೊತ್ತಿಲ್ಲ – 14.32%
ಬೆಂಗಳೂರು
ಸಿದ್ದರಾಮಯ್ಯ – 26.38%
ಮೋದಿ – 68.56%
ಗೊತ್ತಿಲ್ಲ – 5.06%
16. ಮೋದಿ ಜನಪ್ರಿಯತೆ ರಾಜ್ಯ ಚುನಾವಣೆಯ ಮೇಲೂ ಪರಿಣಾಮ ಬೀರುತ್ತಾ?
ಹೌದು – 57.46%
ಇಲ್ಲ – 29.10%
ಗೊತ್ತಿಲ್ಲ – 13.44%
ಬೆಂಗಳೂರು
ಹೌದು – 68.90%
ಇಲ್ಲ – 17.68%
ಗೊತ್ತಿಲ್ಲ – 13.41%