ಚಿಕ್ಕಬಳ್ಳಾಪುರ: ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ (Bengaluru Airport) ಇಂದು ಕೂಡ ವಿಮಾನಗಳ ಹಾರಾಟದಲ್ಲಿ ವ್ಯತ್ಯಯವಾಗಿದೆ. ತಡರಾತ್ರಿಯಿಂದ ಈವರೆಗೆ 60 ಕ್ಕೂ ಹೆಚ್ಚು ವಿಮಾನಗಳ ಹಾರಾಟ ರದ್ದಾಗಿದೆ.
ನೂರಾರು ವಿಮಾನಗಳ ಹಾರಾಟದ ಸಮಯದಲ್ಲಿ ಏರುಪೇರು, ವಿಳಂಬ ಉಂಟಾಗಿದೆ. ಕೆಐಎಬಿಯಿಂದ ವಿವಿಧೆಡೆಗೆ ತೆರಳಬೇಕಿದ್ದ 31 ಹಾಗೂ ಕೆಐಎಬಿಗೆ ಆಗಮಿಸಬೇಕಿದ್ದ 31 ವಿಮಾನಗಳ ಹಾರಾಟವನ್ನು ರದ್ದಗೊಳಿಸಲಾಗಿದೆ. ಇದನ್ನೂ ಓದಿ: ಕೆಂಪೇಗೌಡ ಏರ್‌ಪೋರ್ಟ್‌ನಿಂದ 42 ವಿಮಾನಗಳ ಹಾರಾಟ ರದ್ದು – ಅಗತ್ಯ ತಪಾಸಣೆಗಾಗಿ ಕ್ಯಾನ್ಸಲ್: ಇಂಡಿಗೋ ಮಾಹಿತಿ
ಏರ್‌ಬಸ್ ಸಾಫ್ಟ್‌ವೇರ್ ಹಾಗೂ ಹಾರ್ಡ್‌ವೇರ್ ಸಮಸ್ಯೆ ಹಿನ್ನೆಲೆ ಸೇವೆಯಲ್ಲಿ ವ್ಯತ್ಯಯವಾಗಿದೆ. ಕಳೆದ 3 ದಿನಗಳಿಂದಲೂ ವಿಮಾನಗಳ ಹಾರಾಟದಲ್ಲಿ ಭಾರೀ ವ್ಯತ್ಯಯ ಉಂಟಾಗಿದೆ. ಸಾಫ್ಟ್‌ವೇರ್ ಅಪ್ಡೇಟ್ ವಿಳಂಬದಿಂದಾಗಿ ಸಮಸ್ಯೆ ಮುಂದುವರಿದಿದೆ.
ಮಂಗಳವಾರ ಕೂಡ ಬೆಂಗಳೂರು ಏರ್‌ಪೋರ್ಟ್‌ನಿಂದ 20 ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿತ್ತು. ಇದನ್ನೂ ಓದಿ: ಬೆಂಗಳೂರು ಏರ್‌ಪೋರ್ಟ್‌ನಿಂದ 20 ವಿಮಾನಗಳ ಹಾರಾಟ ರದ್ದು

