– 40ಕ್ಕೂ ಹೆಚ್ಚು ಜನ ಅಸ್ವಸ್ಥ
ಚಿಕ್ಕಬಳ್ಳಾಪುರ: ತಾಲೂಕಿನ ಚಿಕ್ಕಪೈಯಲಗುರ್ಕಿ ಹಾಗೂ ಎಚ್.ಕುರುಬರಹಳ್ಳಿ ಅವಳಿ ಗ್ರಾಮಗಳ ಜನ ವಾಂತಿ ಭೇದಿ, ಮೈ-ಕೈ ನೋವಿನಿಂದ ಬಳಲುತ್ತಿದ್ದಾರೆ. ಈ ನಡುವೆ ವಾಂತಿ-ಭೇದಿಯಿಂದ ಬಳಲುತ್ತಿದ್ದ ವೃದ್ದನೊರ್ವ ಸಾವನ್ನಪ್ಪಿದ್ದು ಗ್ರಾಮಸ್ಥರು ಮತ್ತಷ್ಟು ಆತಂಕಕ್ಕೊಳಗಾಗುವಂತೆ ಮಾಡಿದೆ. ಇದಕ್ಕೆಲ್ಲಾ ಗ್ರಾಮಕ್ಕೆ ಪೂರೈಕೆಯಾಗ್ತಿರೋ ನೀರು ಕಲುಷಿತ (Contaminated water) ಆಗಿರೋ ಅನುಮಾನ ಇದೆ. ಇದ್ರಿಂದ ಆರೋಗ್ಯ ಇಲಾಖೆ (Health Department) ಗ್ರಾಮಕ್ಕೆ ಎಂಟ್ರಿ ಕೊಟ್ಟಿದ್ದು ಜಿಲ್ಲಾಡಳಿತ ಅಲರ್ಟ್ ಆಗಿದೆ.
ಹೌದು ಈ ಎರಡು ಗ್ರಾಮಗಳಿಗೆ ದೊಡ್ಡಪೈಲಗುರ್ಕಿ ಗ್ರಾಮ ಪಂಚಾಯತಿ ಕುಡಿಯುವ ನೀರು ಸರಬರಾಜು ಮಾಡ್ತಿದೆ. ಅದೇ ನೀರನ್ನು ಕುಡಿಯುತ್ತಿದ್ದ ಅವಳಿ ಗ್ರಾಮಸ್ಥರಲ್ಲಿ ಕಳೆದ ಒಂದು ವಾರದಿಂದ ವಾಂತಿ ಭೇದಿ ಮೈ-ಕೈ ನೋವು ಕಾಣಿಸಿಕೊಂಡಿದೆ. ಇದ್ರಿಂದ ಗ್ರಾಮದ 40ಕ್ಕೂ ಹೆಚ್ಚು ಗ್ರಾಮಸ್ಥರು ಅಸ್ವಸ್ಥರಾಗಿದ್ದಾರೆ. ಅಸ್ವಸ್ಥರನ್ನು ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗಿದೆ. ಅದರಲ್ಲಿ ಓರ್ವ ವ್ಯಕ್ತಿಯ ಸ್ಥಿತಿ ಸಹ ಚಿಂತಾಜನಕವಾಗಿದೆ. ಇದನ್ನೂ ಓದಿ: ಕೆನಡಾ ಅಮೆರಿಕದ ಭಾಗವಾಗಲ್ಲ – ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಪ್ರಧಾನಿ ಮಾರ್ಕ್ ಕಾರ್ನಿ ಘೋಷಣೆ
ಮತ್ತೊಂದೆಡೆ ಹೆಚ್.ಕುರುಬರಹಳ್ಳಿ ನಿವಾಸಿ 67 ವರ್ಷದ ವೃದ್ಧ ಸಿದ್ದಪ್ಪ ಮೃತಪಟ್ಟಿದ್ದು, ಅವರ ಸಾವಿಗೆ ಕಲುಷಿತ ನೀರೇ ಕಾರಣ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಇದನ್ನೂ ಓದಿ: ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸದ್ದಕ್ಕೆ ಇಬ್ಬರು ಪುತ್ರರನ್ನು ನೀರಿನಲ್ಲಿ ಮುಳುಗಿಸಿ ಹತ್ಯೆಗೈದು ನೇಣಿಗೆ ಶರಣಾದ ತಂದೆ
ಇನ್ನೂ ಸುದ್ದಿ ತಿಳಿಯುತ್ತಿದ್ದಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗ್ರಾಮದಲ್ಲಿ ಆರೋಗ್ಯ ಶಿಬಿರ ಏರ್ಪಡಿಸಿದ್ದು ಮನೆ ಮನೆಗೆ ಆಶಾಕಾರ್ಯಕರ್ತೆಯರು ತೆರಳಿ ಜನರ ಆರೋಗ್ಯ ತಪಾಸಣೆ ನಡೆಸಿದ್ದಾರೆ. ಗ್ರಾಮದಲ್ಲಿ ಇತ್ತೀಚೆಗೆ ನೀರು ಸರಬರಾಜು ಮಾಡುವ ಪೈಪ್ ಲೈನ್ ಬದಲಾಯಿಸಿದ್ದು, ನೀರು ಕಲುಷಿತವಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ರೆ.
ಇತ್ತ ಸ್ವತಃ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ ಸುಧಾಕರ್, ಸ್ಪಷ್ಟನೆ ನೀಡಿ ವೃದ್ಧನ ಸಾವಿಗೆ ಅಲ್ಕೊಹಾಲ್ ಕಾರಣ ಎಂದು ವೈದ್ಯರು ತಿಳಿಸಿರುವುದಾಗಿ ಹೇಳಿದ್ದಾರೆ. ಇನ್ನೂ ನೀರಿನ ವರದಿ ಬರಬೇಕಿದೆ ಎಂದರು. ಇದನ್ನೂ ಓದಿ: 7 ದಶಕಗಳ ಕನಸು ಭಗ್ನ – ಟಾರ್ ಹಾಕುವ ಮುನ್ನವೇ ರಸ್ತೆಗೆ ಬೇಲಿ ಹಾಕಿದ ಅರಣ್ಯ ಇಲಾಖೆ