– ಖಾಸಗಿ ಫೋಟೋ, ವಿಡಿಯೋ ಪಡೆದು 5 ಲಕ್ಷಕ್ಕೆ ಡಿಮ್ಯಾಂಡ್
ಬೆಂಗಳೂರು: ಮ್ಯಾಟ್ರಿಮೋನಿಯಲ್ಲಿ (Matrimony) ಐಎಎಸ್ (IAS) ಅಧಿಕಾರಿ ಎಂದು ಹೇಳಿಕೊಂಡು ಮಹಿಳೆಯರಿಗೆ ಹಣಕ್ಕಾಗಿ ವಂಚಿಸುತ್ತಿದ್ದ ಪ್ರಕರಣವೊಂದು ಬೆಳಕಿಗೆ ಬಂದಿದೆ.
ಮ್ಯಾಟ್ರಿಮೋನಿ ವೈಬ್‌ಸೈಟ್‌ನಲ್ಲಿ ಜೀವನ್ ಕುಮಾರ್ ಎಂಬ ವ್ಯಕ್ತಿ ಐಡಿ ಕ್ರಿಯೆಟ್ ಮಾಡಿ ಐಎಎಸ್ ಆಫೀಸರ್ ಎಂದು ಮಹಿಳೆಗೆ ವಂಚಿಸುತ್ತಿದ್ದ. ಐಎಎಸ್, ಐಪಿಎಸ್ ಆಗಿರುವುದಾಗಿ ಹೇಳುತ್ತಿದ್ದ. ಬಳಿಕ ಮದುವೆ ಆಗುವುದಾಗಿ ನಂಬಿಸಿ ಕ್ಲೋಸ್ ಆಗಿ ಮೆಸೇಜ್ ಮಾಡಿ, ಖಾಸಗಿ ಫೋಟೊ ಹಾಗೂ ವಿಡಿಯೋ ಪಡೆಯುತ್ತಿದ್ದ.ಇದನ್ನೂ ಓದಿ:ಚಾಮರಾಜನಗರ| ಬೆಟ್ಟಳ್ಳಿ ಮಾರಮ್ಮ ಜಾತ್ರಾ ಮಹೋತ್ಸವ – 18 ಅಡಿ ಉದ್ದದ ಸರಳಲ್ಲಿ ಬಾಯಿ ಬೀಗ
ಅದಾದ ಸ್ವಲ್ಪ ದಿನಗಳ ನಂತರ ತಾಯಿಗೆ ಕ್ಯಾನ್ಸರ್ ಇದೆ. ಚಿಕಿತ್ಸೆಗೆ ಹಣ ಬೇಕು ಹಾಗೂ ಟ್ರಬಲ್ ಇದೆ ಎಂದು ಹೇಳಿ ಹಣ ಪಡೆಯುತ್ತಿದ್ದ. ಮೊದಲು 3 ಲಕ್ಷ ಹಣ ಪಡೆದು, ಮತ್ತೆ 5 ಲಕ್ಷಕ್ಕೆ ಡಿಮ್ಯಾಂಡ್ ಮಾಡಿದ್ದ. ಹಣ ಕೊಡದೇ ಹೋದರೆ ಖಾಸಗಿ ಫೋಟೊ ಹಾಗೂ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದ.
ಒಂದು ವೇಳೆ ದೂರು ನೀಡಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ. ದೇಶ್ಯಾದ್ಯಂತ 20ಕ್ಕೂ ಅಧಿಕ ಮಹಿಳೆಯರಿಗೆ ಇದೇ ರೀತಿ ಮೋಸ ಮಾಡಿರುವುದಾಗಿ ತಿಳಿದುಬಂದಿದ್ದು, ಸದ್ಯ ಹೆಬ್ಬಾಳ ಪೋಲಿಸ್ ಠಾಣೆಯಲ್ಲಿ (Hebbal Police Station) ದೂರು ದಾಖಲಾಗಿದೆ.ಇದನ್ನೂ ಓದಿ:ವಿದೇಶಿ ಕಾರುಗಳ ಮೇಲೆ ಶೇ.25 ಸುಂಕ – ಟ್ರಂಪ್ ಮತ್ತೆ ಹೊಸ ಬಾಂಬ್