ಹಾಸನ: ಯುದ್ಧಪೀಡಿತ ಇಸ್ರೇಲ್‌ನಲ್ಲಿ (Israel) ಹಾಸನ (Hassan) ಜಿಲ್ಲೆಯ 20 ಕ್ಕೂ ಹೆಚ್ಚು ಕನ್ನಡಿಗರು ಸಿಲುಕಿಕೊಂಡಿದ್ದಾರೆ. ಸಕಲೇಶಪುರ ತಾಲ್ಲೂಕಿನ ನವೀನ್ ಕುಟುಂಬದವರು, ನಾವು ಸುರಕ್ಷಿತವಾಗಿದ್ದೇವೆ ಎಂಬ ಸಂದೇಶವನ್ನು ತಮ್ಮ ಕುಟುಂಬಸ್ಥರಿಗೆ ರವಾನಿಸಿದ್ದಾರೆ.
ಚನ್ನರಾಯಪಟ್ಟಣ ತಾಲ್ಲೂಕಿನ ಡಿಂಕ, ಸಕಲೇಶಪುರ ತಾಲ್ಲೂಕಿನ ಲಕ್ಕುಂದ, ಅಂಕಿಹಳ್ಳಿ, ಬೆಳಗೊಡು ಗ್ರಾಮದವರು ಇಸ್ರೇಲ್‌ನಲ್ಲಿ ನೆಲೆಸಿದ್ದಾರೆ. ಜಾನ್ಸನ್, ನವೀನ್, ಡೀನಾ ಡಿಸೋಜಾ, ಎಲಿಜಾ ಪಿಂಟೋ, ಅಂತೋನಿ ಡಿಸೋಜಾ ಇವರು ಚನ್ನರಾಯಪಟ್ಟಣ ಮೂಲದವರು. ಕೃಷ್ಣೇಗೌಡ ಅವರು ಸಕಲೇಶಪುರ ತಾಲ್ಲೂಕಿನವರು. ಇದನ್ನೂ ಓದಿ: ಕಳೆದ 14 ವರ್ಷಗಳಿಂದ ಇದ್ದು, ಭಯ ಇಲ್ಲ: ಇಸ್ರೇಲಿನಲ್ಲಿದ್ದ ಕನ್ನಡಿಗನ ಮಾತು
Advertisement
Advertisement
ಇವರೆಲ್ಲ ಇಸ್ರೇಲ್‌ನಲ್ಲಿ ನರ್ಸಿಂಗ್ ಹಾಗೂ ಇತರೆ ಉದ್ಯೋಗ ಮಾಡಿಕೊಂಡಿದ್ದಾರೆ. ಜೆರುಸಲೇಮ್, ತಲ್ಹಿವಿಯಲ್ಲಿ ನೆಲೆಸಿದ್ದಾರೆ. ಚನ್ನರಾಯಪಟ್ಟಣ ತಾಲ್ಲೂಕಿನ ಡಿಂಕ ಗ್ರಾಮದ ಕೃಷ್ಣೇಗೌಡ ಸುಮಾರು 20 ವರ್ಷಗಳಿಂದ ಇಸ್ರೇಲ್‌ನಲ್ಲಿ ನೆಲೆಸಿದ್ದಾರೆ. ಹೋಟೆಲ್‌ನಲ್ಲಿ ಕೆಲಸ ಮಾಡಿಕೊಂಡಿದ್ದಾರೆ.
Advertisement
Advertisement
ತನ್ನ ಸಹೋದರ ಮಹದೇವ ಅವರ ಜೊತೆ ನಿನ್ನೆ ಫೋನ್‌ನಲ್ಲಿ ಕೃಷ್ಣೇಗೌಡ ಮಾತನಾಡಿದ್ದಾರೆ. ಯುದ್ಧ ನಡೆಯುತ್ತಿದೆ, ರಾಕೆಟ್‌ಗಳ ದಾಳಿ ಮಾಡುತ್ತಿರುವುದು ಕಾಣುತ್ತಿದೆ. ನಾನು ಸುರಕ್ಷಿತವಾಗಿದ್ದೇನೆ. ಒಂದು ವಾರ ಕಾಯುತ್ತೇನೆ ಎಂದು ಕೃಷ್ಣೇಗೌಡ ತಿಳಿಸಿದ್ದಾರೆ. ಇವರು ಆಗಾಗ್ಗೆ ಹುಟ್ಟೂರು ಡಿಂಕ ಗ್ರಾಮಕ್ಕೆ ಬಂದು ಹೋಗುತ್ತಿದ್ದರು. ಇವರ ಪೋಷಕರು ಡಿಂಕ ಗ್ರಾಮದಲ್ಲಿದ್ದಾರೆ. ಇದನ್ನೂ ಓದಿ: ಇಸ್ರೇಲ್-ಹಮಾಸ್ ಉಗ್ರರ ನಡುವೆ ವಾರ್; ತೈಲ ಬೆಲೆ ಏರಿಕೆ
Web Stories