ಚಿಕ್ಕೋಡಿ/ಬೆಳಗಾವಿ: ಸಾಮಾನ್ಯವಾಗಿ ರೈತರು ಗದ್ದೆಗೆ ನೀರು ಹಾಯಿಸಬೇಕು ಅಂದರೆ ನೀರಿನ ಮೋಟಾರ್ ಸ್ಟಾರ್ಟ್ ಮಾಡಿದಾಗ ಪೈಪ್‍ನಲ್ಲಿ ನೀರು ಬರುತ್ತದೆ. ಆದರೆ ಇಲ್ಲೊಬ್ಬರು ರೈತ ಮೋಟಾರ್ ಆನ್ ಮಾಡಿದ ತಕ್ಷಣ ಪೈಪ್ ನಲ್ಲಿ 20 ಕ್ಕೂ ಹೆಚ್ಚು ಸತ್ತ ಹಾವುಗಳು ಬಂದು ಬಿಟ್ಟಿವೆ.
ಈ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದ ಹೊರವಲಯದ ಮಹದೇವ ಜುಗುದಾರ ಎಂಬ ರೈತರ ಗದ್ದೆಯಲ್ಲಿ ನಡೆದಿದೆ. ಕೃಷ್ಣಾ ನದಿಯಿಂದ ಪಂಪ್ ಮೂಲಕ ನೀರು ಎತ್ತುತ್ತಿದ್ದ ರೈತ ಮಹದೇವ ಕಳೆದ ಒಂದು ತಿಂಗಳಿನಿಂದ ಕಬ್ಬು ಕಟಾವಿಗೆ ಬಂದಿದ್ದ ಕಾರಣ ಗದ್ದೆಗೆ ನೀರು ಹಾಯಿಸಿರಲಿಲ್ಲ.
Advertisement
Advertisement
ಶುಕ್ರವಾರ ಗದ್ದೆಗೆ ನೀರು ಹಾಯಿಸಬೇಕು ಅಂತ ಹೋಗಿ ಮೋಟಾರ್ ಆನ್ ಮಾಡಿದ್ದಾರೆ. ಆಗ ರೈತ ಮಹದೇವ್ ಗೆ ಶಾಕ್ ಆಗಿದ್ದು, ಬೇರೆ ಬೇರೆ ಜಾತಿಯ 20ಕ್ಕೂ ಹೆಚ್ಚು ಸತ್ತ ಹಾವುಗಳು ನೀರಿನ ಪೈಪ್ ಮೂಲಕ ಹೊರಬಿದ್ದಿದೆ. ಇದನ್ನು ನೋಡಿ ರೈತ ಆತಂಕಕ್ಕೊಳಗಾಗಿದ್ದಾರೆ. ತಕ್ಷಣ ಈ ಬಗ್ಗೆ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ.
Advertisement
ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ರಾಯಬಾಗ ವಲಯ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಅಂಕಲಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹಾವುಗಳ ಅಂತ್ಯ ಸಂಸ್ಕಾರ ನಡೆಸಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv