ಚಿಕ್ಕಬಳ್ಳಾಪುರ: 12 ವರ್ಷಗಳಿಂದ ಹಗಲು ರಾತ್ರಿ ಅನ್ನದೆ ಕಷ್ಟಪಟ್ಟು ಬೆಳೆಸಿದ್ದ ಶ್ರೀಗಂಧದ ಮರಗಳಿಗೆ ರಾತ್ರೋ ರಾತ್ರಿ ಕಳ್ಳರು ಕನ್ನ ಹಾಕಿರುವ ಘಟನೆ ಜಿಲ್ಲೆಯ ಗೌರಿಬಿದನೂರು ತಾಲೂಕು ಬೇವಿನಹಳ್ಳಿ ಗ್ರಾಮದ ಬಳಿ ನಡೆದಿದೆ.
ಬೆಂಗಳೂರು ಮೂಲದ ವ್ಯಾಪಾರಿ ಸತೀಶ್ ಕುಮಾರ್ ಎಂಬವರು 65 ಎಕರೆ ಪ್ಲಾಂಟೇಷನ್ ನಲ್ಲಿ ಸರಿಸುಮಾರು 5,000 ಶ್ರೀಗಂಧದ ಮರಗಳನ್ನ ಬೆಳೆಸಿದ್ದರು. ಈ ಶ್ರೀಗಂಧದ ಮರಗಳ ಮೇಲೆ ಕಳ್ಳಕಾಕರ ಕಣ್ಣು ಬಿದ್ದಿದೆ. ಕಳೆದ ರಾತ್ರಿ ಪ್ಲಾಂಟೇಷನ್ ಗೆ ಹಾಕಲಾಗಿದ್ದ ವಿದ್ಯುತ್ ತಂತಿ ಬೇಲಿಯನ್ನೇ ಕಟಾವು ಮಾಡಿರುವ ಕಳ್ಳರು, 15 ಕ್ಕೂ ಹೆಚ್ಚು ಗಂಧದ ಮರಗಳಿಗೆ ಕೊಡಲಿಪೆಟ್ಟು ಹಾಕಿದ್ದಾರೆ. ಮರಗಳಿಗೆ ಕೊಡಲಿಪೆಟ್ಟು ಹಾಕಿರುವ ಕಳ್ಳರು ತುಂಡುಗಳನ್ನ ಕತ್ತರಿಸಿಕೊಂಡು ಕದ್ದೊಯ್ದಿದ್ದಾರೆ.
ಈ ಸಂಬಂಧ ಮಂಚೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಮಾಲೀಕ ಸತೀಶ್ ದೂರು ದಾಖಲಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv