ಬಳ್ಳಾರಿ: ಜಿಲ್ಲೆಯ ಬಿಐಟಿಎಂ ಎಂಜಿನಿಯರಿಂಗ್ ಕಾಲೇಜಿನ ಹಾಸ್ಟೆಲ್ನಲ್ಲಿ ಊಟ ಮಾಡಿದ ನೂರಕ್ಕೂ ಅಧಿಕ ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದಾರೆ.
ಬುಧವಾರ ಮಧ್ಯಾಹ್ನದ ಊಟದ ನಂತರ ವಿಧ್ಯಾರ್ಥಿಗಳಲ್ಲಿ ಹೊಟ್ಟೆ ನೋವು, ವಾಂತಿ ಭೇದಿ ಹಾಗೂ ತಲೆ ಸುತ್ತು ಕಾಣಿಸಿಕೊಂಡಿದೆ. ಅಸ್ವಸ್ಥಗೊಂಡ ವಿದ್ಯಾರ್ಥಿಗಳಿಗೆ ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಆರು ವಿದ್ಯಾರ್ಥಿಗಳು ತೀವ್ರ ವಾಂತಿ ಭೇದಿಯಿಂದ ವಿಮ್ಸ್ ಗೆ ದಾಖಲಾಗಿದ್ದಾರೆ.
Advertisement
ಬುಧವಾರ ಬೆಳಗ್ಗೆ ವಿದ್ಯಾರ್ಥಿಗಳು ಇಡ್ಲಿ ಜೊತೆ ಚಟ್ನಿ ಸೇವಿಸಿದ್ದರು. ಇಡ್ಲಿ ಚಟ್ನಿ ಸೇವಿಸಿದವರಿಗೆ ಮಾತ್ರ ಅಸ್ವಸ್ಥಗೊಂಡಿದ್ದು, ಮಧ್ಯಾಹ್ನ ಊಟ ಮಾಡಿದವರು ಆರೋಗ್ಯವಾಗಿದ್ದಾರೆ. ಇಂದು ಪರೀಕ್ಷೆಗಳು ಇರುವುದರಿಂದ ಉಳಿದ ವಿದ್ಯಾರ್ಥಿಗಳು ಗಲಿಬಿಲಿಗೊಂಡು ಆರೋಗ್ಯ ತಪಾಸಣೆಗಾಗಿ ಹೋಗಿದ್ದರು. ಬಹುತೇಕ ವಿದ್ಯಾರ್ಥಿಗಳು ವೈದ್ಯರ ಸಲಹೆ ಮೇರೆಗೆ ಹಾಸ್ಟೆಲ್ಗೆ ತೆರಳಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv