ಬೆಂಗಳೂರು: ದರ್ನುಮಾಸದ ವೈಕುಂಠ ಏಕಾದಶಿ ಹಿನ್ನೆಲೆಯಲ್ಲಿ ನಗರದ ವಿಷ್ಣು ದೇವಾಲಯಗಳಲ್ಲಿ ಅದ್ಧೂರಿ ಅಲಂಕಾರ ಮಾಡಲಾಗಿದೆ. ವೈಯಾಲಿಕಾವಲ್‍ನ ತಿರುಮಲ ತಿರುಪತಿ ದೇವಾಸ್ಥಾನದಲ್ಲಿ ವೆಂಕಟೇಶ್ವರನಿಗೆ ವಿಶೇಷ ಅಲಂಕಾರ ಮಾಡಲಾಗಿದೆ.
ಏಕಾಂತ ಸೇವೆ, ಶ್ರೀನಿವಾಸ ಕಲ್ಯಾಣೋತ್ಸವ, ವಿಷ್ಣು ನಾಮ ಪರಾಯಣ ಮಾಡಲಾಗುತ್ತಿದೆ. ದೇವರಿಗೆ ವಿಶೇಷ ಹೂವಿನ, ಆಭರಣಗಳಿಂದ ಸಿಂಗಾರ ಮಾಡಲಾಗಿದೆ. ಹೆಜ್ಜೆ ಹೆಜ್ಜೆಗೂ ಗೋವಿಂದ ನಾಮ ಪಸರಿಸಿದೆ. ದೇವಾಲಯವನ್ನು ವಿಶೇಷ ಅಲಂಕಾರಿಕ ಹೂವಿಗಳಿಂದ ಅಲಂಕಾರಗೊಳಿಸಲಾಗಿದೆ.
Advertisement
Advertisement
ಬೆಳಗ್ಗೆಯಿಂದಲೇ 4 ಕಿಮೀ ದೂರದಿಂದ ಸಾರ್ವಜನಿಕರು ದೇವರ ದರ್ಶನಕ್ಕೆ ಸಾಲು ಗಟ್ಟಿ ನಿಂತಿದ್ದಾರೆ. ಬರುವ ಭಕ್ತಾಧಿಗಳಿಗಾಗಿಯೇ 1 ಲಕ್ಷಕ್ಕೂ ಹೆಚ್ಚು ಲಡ್ಡು ಪ್ರಸಾದವನ್ನು ತಯಾರಿಸಲಾಗಿದೆ. ತಿರುಪತಿಯ ಲಡ್ಡುಗಳು ಸಹ ದೇವಾಲಯದಲ್ಲಿ ಮಾರಾಟಕ್ಕೆ ಇಡಲಾಗಿದೆ.
Advertisement
ಇಂದು ಬೆಳಗ್ಗೆ 5 ಗಂಟೆಯಿಂದ ಆರಂಭವಾಗಿರುವ ವೈಕುಂಠ ದ್ವಾರದ ಪ್ರವೇಶ ರಾತ್ರಿ 9 ಗಂಟೆವರೆಗೂ ತೆರೆದಿರಲಿದೆ. ಇಂದು ಶ್ರೀನಿವಾಸ ದರ್ಶನ ಪಡೆದು ವೈಕುಂಠ ದ್ವಾರ ಪ್ರವೇಶ ಮಾಡಿದರೆ ಸ್ವರ್ಗ ಪ್ರಾಪ್ತಿಯಾಗಿ ಪುಣ್ಯ ಬರಲಿದೆ ಡಂಬ ನಂಬಿಕೆಯೂ ಇದೆ.