ಪುನೀತ್ ರಾಜ್ ಕುಮಾರ್ (Puneeth Rajkumar) ಕನಸಿನ ‘ಪಿ.ಆರ್.ಕೆ’ ಪ್ರೊಡಕ್ಷನ್ ಬಗ್ಗೆ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ ಅಶ್ವಿನಿ ಪುನೀತ್ ರಾಜ್ ಕುಮಾರ್ (Ashwini Puneeth Rajkumar). ತಮ್ಮ ಮುಂದಿನ ಯೋಚನೆ ಹಾಗೂ ಯೋಜನೆಗಳೇನು ಎನ್ನುವುದರ ಬಗ್ಗೆ ಸಾಕಷ್ಟು ವಿಚಾರಗಳನ್ನು ಬಹಿರಂಗೊಳಿಸಿದ್ದಾರೆ. ಅದರಲ್ಲೂ ಮಹಿಳೆಯರಿಗೆ ಹೆಚ್ಚು ಪ್ರಾಶಸ್ತ್ಯ ನೀಡುವುದಾಗಿಯೂ ಅವರು ತಿಳಿಸಿದ್ದಾರೆ. ನಿರ್ದೇಶಕಿಯರಿಗೆ ಹೆಚ್ಚು ಸಿನಿಮಾ ಮಾಡುವ ಕುರಿತು ಅವರು ಮಾತನಾಡಿದ್ದಾರೆ.
Advertisement
ಭಾರತದಲ್ಲೇ ಅತೀ ಹೆಚ್ಚು ಕಾದಂಬರಿ ಆಧರಿಸಿದ ಸಿನಿಮಾಗಳನ್ನು ಮಾಡಿದವರು ಡಾ.ರಾಜ್ ಕುಮಾರ್ (Rajkumar). ಈ ಕಾದಂಬರಿಗಳ ಆಯ್ಕೆಯಲ್ಲಿ ಪಾರ್ವತಮ್ಮ ರಾಜ್ ಕುಮಾರ್ ಶ್ರಮ ಹೆಚ್ಚಿತ್ತು. ಸ್ವತಃ ಪಾರ್ವತಮ್ಮನವರೇ ಕಾದಂಬರಿಗಳನ್ನು ಓದಿ ಸಿನಿಮಾ ಮಾಡುವಂತೆ ಪತಿ ರಾಜ್ ಕುಮಾರ್ ಅವರಿಗೆ ಸಲಹೆ ನೀಡುತ್ತಿದ್ದರು. ಕಾದಂಬರಿ ಆಧರಿಸಿದ ಸಿನಿಮಾಗಳಲ್ಲಿ ನಟಿಸುವಂತೆ ಮಕ್ಕಳಿಗೂ ಪಾರ್ವತಮ್ಮನವರು (Parvathamma) ಸಲಹೆ ನೀಡುತ್ತಿದ್ದರು.
Advertisement
Advertisement
ಇದೀಗ ಅಂಥದ್ದೇ ಹಾದಿಯಲ್ಲಿ ನಡೆಯುತ್ತಿದ್ದಾರೆ ದೊಡ್ಮನೆ ಸೊಸೆ ಅಶ್ವಿನಿ ಪುನೀತ್ ರಾಜ್ ಕುಮಾರ್. ಕಾದಂಬರಿ ಆಧರಿಸಿದ ಸಿನಿಮಾಗಳನ್ನು ನಿರ್ಮಾಣ ಮಾಡಬೇಕು ಎನ್ನುವುದು ಅವರಿಗೂ ಆಸೆಯಂತೆ. ಹಾಗಾಗಿ ಅವರು ಕೂಡ ಪುಸ್ತಕ ಓದಲು ಶುರು ಮಾಡಿದ್ದಾರೆ. ಈಗಾಗಲೇ ಒಂದು ಕಾದಂಬರಿಯನ್ನು ಅವರು ಓದುತ್ತಿದ್ದಾರಂತೆ. ಇದನ್ನೂ ಓದಿ:ಗರುಡ ಪಕ್ಷಿಗೆ ಮುತ್ತಿಟ್ಟ ನಟಿ- ಮರಳುಗಾಡಿನಲ್ಲಿ ದೀಪಿಕಾ ದಾಸ್
Advertisement
ಹೊಸ ನಿರ್ದೇಶಕರಿಗೆ, ಕಲಾವಿದರಿಗೆ ತಮ್ಮ ಬ್ಯಾನರ್ ನಲ್ಲಿ ಸಿನಿಮಾ ಮಾಡಬೇಕು ಎನ್ನುವುದು ಪುನೀತ್ ಅವರ ಗುರಿಯಾಗಿತ್ತು. ಅದನ್ನು ಅವರು ಚಾಚೂ ತಪ್ಪದೇ ಮಾಡುತ್ತಿದ್ದರು. ಪುನೀತ್ ಅವರು ಕಾಲವಾದನಂತರ ಅವರ ಕನಸನ್ನು ಪತ್ನಿ ಅಶ್ವಿನಿ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಹೊಸಬರಿಗೆ, ಅದರಲ್ಲೂ ಮಹಿಳಾ ನಿರ್ದೇಶಕಿಯರಿಗೆ ಹೆಚ್ಚು ಅವಕಾಶ ನೀಡುವುದಾಗಿ ಹೇಳಿಕೊಂಡಿದ್ದಾರೆ.
ಮೊದಲಿನಿಂದಲೂ ಪುಸ್ತಕಗಳನ್ನು ಓದುವ ಹವ್ಯಾಸವಿತ್ತು. ಇದೀಗ ಸಿನಿಮಾಗಾಗಿ ಹೊಸ ಹೊಸ ಕಾದಂಬರಿಗಳನ್ನು ಓದುತ್ತಿದ್ದೇನೆ. ಈಗ ಸಿನಿಮಾವಾಗುವಂತಹ ಒಂದು ಕಾದಂಬರಿ ಓದುತ್ತಿದ್ದೇನೆ. ಮುಂದಿನ ದಿನಗಳಲ್ಲಿ ಅದು ಯಾವುದು? ಯಾರ ಕಾದಂಬರಿ ಎನ್ನುವ ಕುರಿತು ಮಾತನಾಡುತ್ತೇನೆ ಎಂದಿದ್ದಾರೆ ಅಶ್ವಿನಿ.
Web Stories