ಬೆಂಗಳೂರು: ಮೊರಾರ್ಜಿ ದೇಸಾಯಿ ಹೆಸರು ಬದಲಿಗೆ ಇಂದಿರಾಗಾಂಧಿ ಹೆಸರು ಇಡುವ ಸರ್ಕಾರದ ನಿರ್ಧಾರಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ವಿರೋಧ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವ್ರು ಸರ್ಕಾರಕ್ಕೆ ಮಾನ ಮರ್ಯಾದೆ ಇಲ್ಲ. ಸರ್ಕಾರ ಕಿತ್ತೂರು ರಾಣಿ ಚೆನ್ನಮ್ಮ, ಮೊರಾರ್ಜಿ ದೇಸಾಯಿ ಅವ್ರ ಹೆಸರು ಬದಲಾವಣೆ ಮಾಡಿದ್ರೆ ಇದು ಅವರಿಗೆ ಮಾಡಿದ ಅಪಮಾನ ಅಂತ ಕಿಡಿಕಾರಿದ್ರು.
Advertisement
ಬೇರೆ ಕಾರ್ಯಕ್ರಮಕ್ಕೆ ಇಂದಿರಾಗಾಂಧಿ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಯಾವ ಹೆಸರಾದ್ರು ಇಟ್ಟುಕೊಳ್ಳಿ. ಆದ್ರೆ ಯಾವುದೇ ಕಾರಣಕ್ಕೂ ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ಮೊರಾರ್ಜಿ ದೇಸಾಯಿ ಹೆಸ್ರು ಬದಲಾಯಿಸಬಾರದು ಅಂತ ಆಗ್ರಹಿಸಿದ್ರು.
Advertisement
ಒಂದು ವೇಳೆ ಇಂದಿರಾಗಾಂಧಿ ಹೆಸರು ಇಟ್ರೆ ಸರ್ಕಾರದ ವಿರುದ್ದ ಉಗ್ರ ಹೋರಾಟ ಮಾಡ್ತೀವಿ ಬಿಎಸ್‍ವೈ ಎಚ್ಚರಿಕೆ ನೀಡಿದ್ರು.
Advertisement
ಇದೇ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಮಾಜಿ ಡಿಸಿಎಂ ಆರ್ ಅಶೋಕ್, ಕಿತ್ತೂರು ಚೆನ್ನಮ್ಮ ದೇಶಕ್ಕೆ ಪ್ರೇರಣೆ, ಸ್ವಾತಂತ್ರ ಹೋರಾಟಗಾರ್ತಿ. ಅಂತಹವರ ಹೆಸರು ತೆಗೆದು ನಿಮ್ಮ ಪಾರ್ಟಿ ಅಧ್ಯಕ್ಷರ ಹೆಸರು ಇಡೋದು ನಾಚಿಕೆ ಗೇಡಿನ ಕ್ರಮ. ಹಿಂದೆ ಅಟಲ್ ಬಿಹಾರಿ ವಾಜಪೇಯಿ ಅವ್ರು ರಾಷ್ಟ್ರೀಯ ಹೆದ್ದಾರಿಗಳ ಮಾಡಿದ್ರು. 140 ಕೋಟಿ ವೆಚ್ಚ ಮಾಡಿ ನೀವು ಅವ್ರ ಬೋರ್ಡ್ ತೆಗೆದ್ರಿ, ಜನ ನಿಮ್ಮನ್ನೆ ತೆಗೆದ್ರು. ಈಗ ಚೆನ್ನಮ್ಮ, ಮೋರಾರ್ಜಿ ದೇಸಾಯಿ ಹೆಸ್ರು ತೆಗೆದ್ರೆ ಜನ ಇಲ್ಲಿಂದ ನಿಮ್ಮನ್ನ ತೆಗೆಯುತ್ತಾರೆ ಅಂತ ವಾಗ್ದಾಳಿ ನಡೆಸಿದ್ರು.
Advertisement
ಕ್ಯಾಂಟೀನ್ ಆಯ್ತು, ಈಗ ರಾಜ್ಯ ಸರ್ಕಾರದಿಂದ 100 ಶಾಲೆಗಳಿಗೆ ಇಂದಿರಾ ಗಾಂಧಿ ಹೆಸರು https://t.co/JJ5vDdKC4i#Koppala #Indiracanteen #IndiraGandhi pic.twitter.com/WpzLEdI18Z
— PublicTV (@publictvnews) August 16, 2017