– ಚೇಸ್ ಮಾಡುವಾಗ ಬೈಕ್ ಬಿದ್ದು ಬಾಲಕಿಗೆ ಗಾಯ; ಇಬ್ಬರ ಬಂಧನ
ಮಂಗಳೂರು: ಅಕ್ರಮ ಗೋಮಾಂಸ ಸಾಗಾಟ ಮಾಡುತ್ತಿದ್ದ ಬೈಕ್ ತಡೆದು ವ್ಯಕ್ತಿ ಮೇಲೆ ನೈತಿಕ ಪೊಲೀಸ್‌ಗಿರಿ (Moral Policing) ನಡೆಸಿದ ಘಟನೆ ಮಂಗಳೂರಿನ (Mangaluru) ಮಳಲಿ-ನಾರ್ಲಪದವು ರಸ್ತೆಯಲ್ಲಿ ನಡೆದಿದೆ.
ಮುಲ್ಲರಪಟ್ನ ನಿವಾಸಿ ಅಬ್ದುಲ್ ಸತ್ತಾರ್ ಎಂಬಾತ ಬೈಕ್‌ನಲ್ಲಿ ಹಿಂಬದಿಯಲ್ಲಿ ತನ್ನ 11 ವರ್ಷ ವಯಸ್ಸಿನ ಮಗಳೊಂದಿಗೆ 35 ಪ್ಯಾಕೇಟ್‌ಗಳಲ್ಲಿ 19 ಕೆ.ಜಿ ಗೋಮಾಂಸವನ್ನ ಸಾಗಾಟ ಮಾಡುತ್ತಿದ್ದ. ಇದೇ ರಸ್ತೆಯಲ್ಲಿ ಟಾಟಾಸುಮೋದಲ್ಲಿ ಬರುತ್ತಿದ್ದ ಇಬ್ಬರು ಯುವಕರು ಗೋಮಾಂಸ ಸಾಗಾಟವನ್ನ ಗಮನಿಸಿ ಚೇಜ್ ಮಾಡಿ ಬೈಕ್ ತಡೆಯಲು ಯತ್ನಿಸಿದ್ದರು. ಈ ವೇಳೆ ಬೈಕ್ ಬಿದ್ದು ಬೈಕ್‌ನಲ್ಲಿದ್ದ ಬಾಲಕಿಗೆ ಸೈಲೆನ್ಸರ್ ತಾಗಿ ಗಾಯವಾಗಿದೆ. ಇದನ್ನೂ ಓದಿ: 56 ಕೋಟಿ ರೂ. ಡ್ರಗ್ಸ್ ಮಾಹಿತಿ ಸುಳ್ಳು.. ಮಹಾರಾಷ್ಟ್ರ ಪೊಲೀಸರಿಂದ ಸುಳ್ಳು ಮಾಹಿತಿ: ಪರಮೇಶ್ವರ್ ಸ್ಪಷ್ಟನೆ
ಬೈಕ್ ಬಿದ್ದ ತಕ್ಷಣ ಬೈಕ್ ಹಾಗೂ ತನ್ನ ಮಗಳನ್ನು ಬಿಟ್ಟು ಅಬ್ದುಲ್ ಸತ್ತಾರ್ ಓಡಿ ಪರಾರಿಯಾಗಿದ್ದಾನೆ. ಬಳಿಕ ಸ್ಥಳೀಯರು ಅಬ್ದುಲ್ ಸತ್ತಾರ್‌ನ ಮಗಳನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಬೈಕ್ ತಡೆದ ಸುಮಿತ್ ಭಂಡಾರಿ ಮತ್ತು ರಜತ್ ನಾಯ್ಕ್ ಅವರು ನನ್ನ ತಂದೆಗೆ ಹಲ್ಲೆ ನಡೆಸಿ ನೈತಿಕ ಪೊಲೀಸ್‌ಗಿರಿಯಾಗಿದೆ ಎಂದು ಅಬ್ದುಲ್ ಸತ್ತಾರ್‌ನ ಮಗಳು ನೀಡಿದ ಹೇಳಿಕೆ ಆಧರಿಸಿ ಬಜಪೆ ಪೊಲೀಸರು ಪ್ರಕರಣ ದಾಖಲಿಸಿ ಇಬ್ಬರನ್ನು ಬಂಧಿಸಿದ್ದಾರೆ.
ಯಾವುದೇ ದಾಖಲೆ ಇಲ್ಲದೆ ಅನಧಿಕೃತ ಗೋಮಾಂಸ ಸಾಗಾಟ ಮಾಡಿದ ಆರೋಪದಲ್ಲಿ ಅಬ್ದುಲ್ ಸತ್ತಾರ್ ವಿರುದ್ಧ ಬಜಪೆ ಪೊಲೀಸ್ ಠಾಣೆಯಲ್ಲಿ ಸುಮೋಟೊ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಹೀಲಿಯಂ ಸಿಲಿಂಡರ್ ಬ್ಲಾಸ್ಟ್ – ಮೈಸೂರಿನ ಪ್ರವಾಸಿ ತಾಣಗಳಲ್ಲಿ ಹೈ ಅಲರ್ಟ್

