ಬೆಂಗಳೂರು: ಇತ್ತೀಚೆಗೆ ಚಂದ್ರಾಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಿಂದೂ ಯುವಕ ಹಾಗೂ ಮುಸ್ಲಿಂ ಯುವತಿ (Muslim Girl) ಮೇಲೆ ನೈತಿಕ ಪೊಲೀಸ್‌ಗಿರಿ ಎಸಗಿದ್ದ ವೀಡಿಯೋ ಒಂದು ವೈರಲ್ ಆಗಿತ್ತು. ಹಿಂದೂ ಯುವಕನ ಜೊತೆ ಬೈಕ್‌ನಲ್ಲಿ ಮಾತನಾಡುತ್ತ ಕುಳಿತಿದ್ದ ಯುವತಿಯನ್ನ ನಿಂದಿಸಿ ಹಲ್ಲೆಗೆ ಯತ್ನಿಸಿದ್ದ ಅಪ್ರಾಪ್ತ ಯುವಕ ಸೇರಿ ಐವರನ್ನ ಚಂದ್ರಾಲೇಔಟ್ ಪೊಲೀಸರು (Chandra Layout Police) ಬಂಧಿಸಿದ್ದಾರೆ.
ಮಹೀಮ್, ಅಫ್ರೀದಿ, ವಾಸೀಮ್, ಅಂಜುಮ್ ಬಂಧಿತರು. ಕಳೆದ 3 ದಿನಗಳ ಹಿಂದೆ ತನ್ನ ಸ್ನೇಹಿತನ ಜೊತೆ ಬುರ್ಖಾ ಧರಿಸಿ ಬೈಕ್‌ನಲ್ಲಿ ಯುವತಿ ಕೂತು ಮಾತನಾಡುತ್ತಿದ್ದಳು. ಈ ವೇಳೆ ಸ್ಥಳಕ್ಕೆ ಬಂದ ಐವರು ಮುಸ್ಲಿಂ ಯುವಕರ ಗುಂಪು, ಬುರ್ಖಾ ಧರಿಸಿ ಹಿಂದೂ ಯುವಕನ ಜೊತೆ ಬೈಕ್‌ನಲ್ಲಿ ಯಾಕೆ ಕೂತಿದ್ಯಾ? ನಿನಗೆ ಮಾನ ಮರ್ಯಾದೆ ಇಲ್ವಾ? ನಿಮ್ಮ ಮನೆಯವರ ಫೋನ್ ನಂಬರ್ ಕೊಡು ಎಂದು ಕ್ಯಾತೆ ತೆಗೆದಿದ್ದರು. ಇದನ್ನೂ ಓದಿ: ಅನ್ಯಕೋಮಿನ ಯುವತಿ ತನ್ನ ಗೆಳೆಯನ ಜೊತೆ ಕುಳಿತಿದ್ದಕ್ಕೆ ಕಿರಿಕ್!
ಆ ಸಂದರ್ಭದಲ್ಲಿ ಯುವತಿ, ನನ್ನ ಕ್ಲಾಸ್‌ಮೇಟ್ ಜೊತೆ ನಾನು ಮಾತನಾಡುತ್ತಿದ್ದೇನೆ. ನಮ್ಮ ಮನೆಯವರ ನಂಬರ್ ನಿಮಗ್ಯಾಕೆ ಕೊಡಬೇಕು ಎಂದು ಪ್ರತ್ಯುತ್ತರ ನೀಡಿದ್ದಳು. ಯುವತಿ ಜೊತೆಗಿದ್ದ ಯುವಕನ ಮೇಲೆ ಹಲ್ಲೆಗೆ ಯತ್ನಿಸಿದ್ದಲ್ಲದೆ, ಆರೋಪಿಗಳು ಯುವಕ ಹಾಗೂ ಯುವತಿಯು ಬೈಕ್‌ನಲ್ಲಿ ಕೂತು ಮಾತನಾಡುತ್ತಿದ್ದ ವೀಡಿಯೋ ವೈರಲ್ ಮಾಡಿದ್ದರು. ಇದನ್ನೂ ಓದಿ: ರಾಣಾ ಕರೆತಂದ ವಿಮಾನಕ್ಕೆ ನೀಡಲಾಗಿತ್ತು ಡಮ್ಮಿ ಕೋಡ್, ಮಧ್ಯೆ 11 ಗಂಟೆ ಪಿಟ್ ಸ್ಟಾಪ್!
ಸದ್ಯ ಘಟನೆ ಸಂಬಂಧ ಚಂದ್ರಾಲೇಔಟ್ ಪೊಲೀಸರು ಐವರನ್ನು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಆಕಾಶದಲ್ಲೇ ತುಂಡಾದ ಹೆಲಿಕಾಪ್ಟರ್‌ನ ಫ್ಯಾನ್ – ಐವರು ದುರ್ಮರಣ