ಮಂಗಳೂರು: ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳ ಮೇಲೆ ಪುಂಡರ ಗುಂಪು ಇನ್ಸ್ಪೆಕ್ಟರ್ ಎದುರಿನಲ್ಲಿಯೇ ಹಲ್ಲೆ ನಡೆಸಲು ಯತ್ನಿಸಿರುವ ಘಟನೆ ಮಂಗಳೂರು ಹೊರವಲಯದ ಸುರತ್ಕಲ್ ಬಳಿ ಭಾನುವಾರ ಸಂಜೆ ತಡವಾಗಿ ಬೆಳಕಿಗೆ ಬಂದಿದೆ.
Advertisement
ಉಡುಪಿಗೆ ಹೋಗಿ ವಾಪಸ್ ಬರುತ್ತಿದ್ದ ಅನ್ಯಕೋಮಿನ ಯುವಕ-ಯುವತಿಯ ಕಾರಿಗೆ ಅಡ್ಡ ಹಾಕಿದ ಯುವಕರ ಗುಂಪು ಹಲ್ಲೆ ನಡೆಸಲು ಮುಂದಾಗಿದ್ದಾರೆ. ಇದೇ ವೇಳೆ ಸ್ಥಳದಲ್ಲಿಯೇ ಇದ್ದ ಪೊಲೀಸ್ ಇನ್ಸ್ಪೆಕ್ಟರ್ ಶರೀಫ್ ಕಾರಿನ ಮೇಲೆ ಆಗುತ್ತಿದ್ದ ದಾಳಿಯನ್ನು ತಡೆಯಲು ಯತ್ನಿಸಿದ್ದಾರೆ. ಸದ್ಯ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ: ಈಗಲ್ಟನ್ ವಿಲೇಜ್ ಮೇಲೆ ಸಿಸಿಬಿ ದಾಳಿ- ಇಬ್ಬರು ಇರಾನಿಗಳು ಸೇರಿ ನಾಲ್ವರು ಡ್ರಗ್ಸ್ ಪೆಡ್ಲರ್ಗಳು ಅರೆಸ್ಟ್
Advertisement
Advertisement
ಉಡುಪಿಯ ಮಲ್ಪೆ ಬೀಚ್ಗೆ ತೆರಳಿ ವಾಪಸ್ ಆಗುತ್ತಿದ್ದವರು ಅನ್ಯಕೋಮಿನ ವಿದ್ಯಾರ್ಥಿಗಳು ಎಂಬ ಮಾಹಿತಿ ಹಿನ್ನೆಲೆ ಹಿಂದೂ ಕಾರ್ಯಕರ್ತರು ಗೂಂಡಾಗಿರಿ ನಡೆಸಿದ್ದಾರೆ. ಈ ವೇಳೆ ವಿದ್ಯಾರ್ಥಿಗಳು ಹೊಡಿಬೇಡಿ, ಹೊಡಿಬೇಡಿ ಎಂದು ಪೊಲೀಸರ ಮುಂದೆ ಅಂಗಲಾಚಿದರೂ ವಿದ್ಯಾರ್ಥಿಗಳಿದ್ದ ವಾಹನದ ಮೇಲೆ ಹಲ್ಲೆ ನಡೆಸಲಾಗಿದೆ. ಸದ್ಯ ಈ ವಿಡಿಯೋ ವೈರಲ್ ಆದ ಬೆನ್ನಲ್ಲೆ, ಹಲ್ಲೆ ನಡೆಸಿದ್ದ ಐವರು ಆರೋಪಿಗಳನ್ನು ಇದೀಗ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಡೋಣಿ ನದಿ ಸೇತುವೆಯಲ್ಲಿ ಬಿರುಕು – ಆಗಮಿಸಲಿದ್ದಾರೆ ದೆಹಲಿ ಎಂಜಿನಿಯರ್ಗಳು