ಚಳಿಗಾಲ ಆರಂಭವಾಗಿದ್ದು, ನಮ್ಮ ದೇಹವನ್ನು ಬಿಸಿಯಾಗಿಡಲು ಬೆಚ್ಚನೆಯ ಆಹಾರವನ್ನು ಸೇವಿಸುವುದು ಉತ್ತಮ. ಹೆಸರುಬೇಳೆ ಹೆಚ್ಚಿನ ಫೈಬರ್ ಅಂಶವನ್ನು ಒಳಗೊಂಡಿದ್ದು, ನಮ್ಮ ದಿನನಿತ್ಯದ ಆಹಾರದಲ್ಲಿ ಇದನ್ನು ಒಳಗೂಡಿಸಿದರೆ ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಳ್ಳಬಹುದು. ಇವತ್ತಿನ ನಮ್ಮ ರೆಸಿಪಿಯಲ್ಲಿ ಚಳಿಗಾಲದಲ್ಲಿ ಬಿಸಿಬಿಸಿಯಾಗಿ ತಿನ್ನಬಹುದಾದ ಮೂಂಗ್‌ದಾಲ್ (ಹೆಸರು ಬೇಳೆ) ನಗ್ಗೆಟ್ಸ್ ಯಾವರೀತಿ ಮಾಡುವುದು ಎಂಬುದನ್ನು ತಿಳಿಸಿಕೊಡುತ್ತಿದ್ದೇವೆ. ಹಾಗಿದ್ರೆ ಇದನ್ನು ಯಾವ ರೀತಿ ತಯಾರಿಸುವುದು ಎಂಬುದನ್ನು ತಿಳಿದುಕೊಳ್ಳಿ. ಇದನ್ನೂ ಓದಿ: ಈ ಸೀಸನ್‌ನಲ್ಲಿ ಮಾಡಿ ಪೇರಳೆ ಹಣ್ಣಿನ ಚಟ್ನಿ
Advertisement
ಬೇಕಾಗುವ ಸಾಮಗ್ರಿಗಳು:
ಹಳದಿ ಮೂಂಗ್ ದಾಲ್ – 1/2 ಕಪ್
ಹಸಿರು ಮೂಂಗ್ ದಾಲ್ – 1/2 ಕಪ್
ಉಪ್ಪು – ರುಚಿಗೆ ತಕ್ಕಷ್ಟು
ಹೆಚ್ಚಿದ ಈರುಳ್ಳಿ – ಅರ್ಧ
ಹೆಚ್ಚಿದ ಹಸಿರುಮೆಣಸಿನಕಾಯಿ – 2
ಹೆಚ್ಚಿದ ಕ್ಯಾರೆಟ್ – ಕಾಲು ಕಪ್
ಕರಿಬೇವು – 6ರಿಂದ 7 ಎಲೆ
ಬ್ರೆಡ್ ತುಂಡುಗಳು – 1 ಕಪ್
ಅಚ್ಚಖಾರದ ಪುಡಿ – 1 ಚಮಚ
ಪೆಪ್ಪರ್ ಪೌಡರ್ – ಕಾಲು ಚಮಚ
ಚಾಟ್ ಮಸಾಲ – ಅರ್ಧ ಚಮಚ
ಜೀರಿಗೆ – ಅರ್ಧ ಚಮಚ
ಜೋಳದ ಹಿಟ್ಟು – 2 ಚಮಚ
ಎಣ್ಣೆ – ಅಗತ್ಯಕ್ಕೆ ತಕ್ಕಷ್ಟು
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಒಂದು ಪಾತ್ರೆಯಲ್ಲಿ ಹಳದಿ ಮತ್ತು ಹಸಿರು ಹೆಸರು ಬೇಳೆಯನ್ನು ಹಾಕಿ ಚನ್ನಾಗಿ ತೊಳೆದುಕೊಳ್ಳಿ. ಬಳಿಕ ಅದನ್ನು 2ರಿಂದ 3 ಗಂಟೆಗಳ ಕಾಲ ನೆನೆಸಿಡಿ.
* ಈಗ ನೆನೆಸಿದ ಹೆಸರು ಬೇಳೆಯನ್ನು ನೀರಿನೊಂದಿಗೆ ಅರ್ಧದಷ್ಟು ಬೇಯಿಸಿಕೊಳ್ಳಿ. ಬಳಿಕ ಅದನ್ನು ತಣ್ಣಾಗಾಗಲು ಬಿಡಿ.
* ನಂತರ 2 ಚಮಚದಷ್ಟು ಬೇಳೆಯನ್ನು ತೆಗೆದಿಟ್ಟು ಉಳಿದಿದ್ದನ್ನು ಒಂದು ಮಿಕ್ಸರ್‌ಗೆ ಹಾಕಿಕೊಂಡು ಚನ್ನಾಗಿ ರುಬ್ಬಿಕೊಳ್ಳಿ.
* ಬಳಿಕ ಒಂದು ಬೌಲ್‌ನಲ್ಲಿ ರುಬ್ಬಿದ ಮಿಶ್ರಣವನ್ನು ಹಾಕಿಕೊಂಡು ಅದಕ್ಕೆ ಹೆಚ್ಚಿದ ತರಕಾರಿಗಳು, ತೆಗೆದಿಟ್ಟ ಹೆಸರಬೇಳೆ, ಮಸಾಲೆಗಳು, ಉಪ್ಪು, ಬ್ರೆಡ್ ತುಂಡುಗಳನ್ನು ಹಾಕಿಕೊಳ್ಳಿ. ಈಗ ಅದಕ್ಕೆ ಜೋಳದ ಹಿಟ್ಟನ್ನು ಸೇರಿಸಿಕೊಂಡು ಚನ್ನಾಗಿ ಕಲಸಿಕೊಂಡು ಹಿಟ್ಟನ್ನು ತಯಾರಿಸಿಕೊಳ್ಳಿ.
* ಈಗ ಈ ಮಿಶ್ರಣವನ್ನು ಸ್ವಲ್ಪ ಸ್ವಲ್ಪವೇ ತೆಗೆದುಕೊಂಡು ನಿಮಗೆ ಬೇಕಾದ ಆಕಾರದಲ್ಲಿ ತಯಾರಿಸಿಕೊಳ್ಳಿ. ಅದೇ ರೀತಿ ಎಲ್ಲವನ್ನೂ ಮಾಡಿಕೊಳ್ಳಿ.
* ಬಳಿಕ ಏರ್‌ಫ್ರೈಯರ್ ಅನ್ನು 180 ಡಿಗ್ರಿಯಲ್ಲಿ ಮೊದಲೇ ಬಿಸಿಗಿಟ್ಟು ಬಿಸಿಯಾದ ಬಳಿಕ ಅದರಲ್ಲಿ ಈ ನಗ್ಗೆಟ್ಸ್ ಅನ್ನು ಇರಿಸಿ. ಅದಕ್ಕೂ ಮೊದಲು ತಯಾರಿಸಿದ ನಗ್ಗೆಟ್ಸ್ ಮೇಲೆ ಸ್ವಲ್ಪ ಸ್ವಲ್ಪ ಎಣ್ಣೆಯನ್ನು ಸವರಿಕೊಳ್ಳಿ. ಬಳಿಕ 15 ನಿಮಿಷಗಳ ಕಾಲ ಬೇಯಿಸಿಕೊಳ್ಳಿ.
* ಇದರ ಬದಲಿಗೆ ನಗ್ಗೆಟ್ಸ್ ಅನ್ನು ಎಣ್ಣೆಯಲ್ಲೂ ಕಾಯಿಸಿಕೊಳ್ಳಬಹುದು. ನಗ್ಗೆಟ್ಸ್ ಗೋಲ್ಡನ್ ಬಣ್ಣ ಬರುವವರೆಗೆ ಫ್ರೈ ಮಾಡಿಕೊಂಡು ಬಳಿಕ ಸರ್ವಿಂಗ್ ಪ್ಲೇಟ್‌ನಲ್ಲಿ ಹಾಕಿ ಬಿಸಿಬಿಸಿಯಾಗಿ ಸರ್ವ್ ಮಾಡಿ. ಇದನ್ನೂ ಓದಿ: ಟ್ರೈ ಮಾಡಿ ಹಲಸಿನಕಾಯಿ ಮಂಚೂರಿ
Advertisement