– ಬಂಡಾಯದಿಂದ ಕಾಂಗ್ರೆಸ್, ಬಿಜೆಪಿಗೆ ಹೆಚ್ಚು ನಷ್ಟ
– ಇಪ್ಪತ್ತು ಸ್ವಿಂಗ್ ಸೀಟ್‍ಗಳಲ್ಲಿ ನೆಕ್ ಟು ನೆಕ್ ಫೈಟ್
– ಮುಂದಿನವಾರ ಪಬ್ಲಿಕ್ ಫೈನಲ್ ಸಮೀಕ್ಷೆ
ಕರ್ನಾಟಕ ಕುರುಕ್ಷೇತ್ರಕ್ಕೆ ಕೆಲವೇ ದಿನಗಳಷ್ಟೇ ಬಾಕಿಯಿದೆ. ಕರ್ನಾಟಕದಲ್ಲೀಗ ಅಕ್ಷರಶಃ ಯುದ್ಧಕಾಂಡ. ರಾಜಕೀಯ ಪಕ್ಷಗಳ ಶಸ್ತ್ರಗಾರದಿಂದ ಪ್ರಬಲ ಯುದ್ಧಾಯುಧಗಳು ಒಂದೊಂದೇ ಹೊರ ಬರುತ್ತಿವೆ. ಮೂರೂ ಪಕ್ಷಗಳೂ ಯಾರಿಗೇನು ಕಮ್ಮಿ ಇಲ್ಲ ಎಂಬಂತೆ ಅಶ್ವಮೇಧ ಯಾಗಕ್ಕೆ ಹೊರಟಿವೆ. ಏನಾದರೂ ಸರಿ ಕದನ ಗೆಲ್ಲಬೇಕು, ಗೆದ್ದು ಸಿಂಹಾಸನ ಏರಬೇಕೆಂಬ ಗುರಿಯೊಂದಿಗೆ ಅಖಾಡಕ್ಕೆ ಇಳಿದಿವೆ. ಹಾಗಾದ್ರೆ ಕರ್ನಾಟಕದಲ್ಲಿ ಈ ಬಾರಿ ಯಾರ ಸರ್ಕಾರ ರಚನೆಯಾಗುತ್ತದೆ? ಸ್ವತಂತ್ರ ಸರ್ಕಾರವೋ? ಅತಂತ್ರ ಸರ್ಕಾರವೋ? ಇದಕ್ಕೆ ಉತ್ತರ ಹುಡುಕುವ ಪ್ರಮಾಣಿಕ ಪ್ರಯತ್ನವನ್ನು ಮಾಡಿದೆ ನಿಮ್ಮ ಪಬ್ಲಿಕ್ ಟಿವಿ.
ಮಾರ್ಚ್ 30 ಹಾಗೂ 31ರಂದು ಮೊದಲ ಸರ್ವೆಯ ಫಲಿತಾಂಶ ನೀಡಿದ್ದೆವು. ಆ ಸಮೀಕ್ಷೆಗೆ ವೀಕ್ಷಕರಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಗಿತ್ತು. ಅತ್ಯಂತ ವಿಶ್ವಾಸಾರ್ಹ ಸಮೀಕ್ಷೆ ಎಂದು ರಾಜಕೀಯ ವಲಯದಲ್ಲೂ ಚರ್ಚೆ ನಡೆದಿತ್ತು. ಈಗ 31 ಜಿಲ್ಲೆಗಳ 224 ಕ್ಷೇತ್ರಗಳ ಪ್ರಾಂತ್ಯವಾರು ಸಮೀಕ್ಷೆ ಫಲಿತಾಂಶ ನಿಮ್ಮ ಮುಂದೆ ಇಡುತ್ತಿದ್ದೇವೆ.
Advertisement
ಈ ಸಮೀಕ್ಷೆಯ ವಿಶೇಷತೆ ಏನೆಂದರೆ ಇದು ಟಿಕೆಟ್ ಘೋಷಣೆಯ ನಂತರ ಹಾಗೂ ಬಂಡಾಯ ಸ್ಫೋಟಿಸಿದ ವೇಳೆಯಲ್ಲಿ ಮಾಡಲಾಗಿರುವ ಸಮೀಕ್ಷೆ. 224 ಕ್ಷೇತ್ರಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಅಭ್ಯರ್ಥಿಗಳ ಹೆಸರು ಅಂತಿಮವಾದ ನಂತರ ಸಮೀಕ್ಷೆ ನಡೆಸಲಾಗಿದೆ. ರಾಜ್ಯದ ಮೂಲೆ ಮೂಲೆಯಲ್ಲಿ ನಡೆಸಿದ ಈ ಅವಲೋಕನದಲ್ಲಿ ಯಾವುದೇ ಪಕ್ಷದತ್ತ ವಿಶೇಷ ಒಲವು, ಹಾಗೂ ಪಕ್ಷಪಾತಕ್ಕೆ ಅವಕಾಶ ನೀಡಿಲ್ಲ.
Advertisement
ನೈಜತೆ, ವಿಶ್ವಾಸಾರ್ಹತೆಗಳ ಬಗ್ಗೆ ಅನುಮಾನ ಬಂದ ಕಾರಣ ಅಂಥವನ್ನು ನಾವು ಸಮೀಕ್ಷೆಯ ಫಲಿತಾಂಶಕ್ಕೆ ಪರಿಗಣಿಸಿಯೇ ಇಲ್ಲ. ಅಷ್ಟರ ಮಟ್ಟಿಗೆ ಅತ್ಯಂತ ಪ್ರಾಮಾಣಿಕ ಸರ್ವೆ ಮಾಡಿದ್ದೇವೆ ಎಂಬ ಹೆಮ್ಮೆ ನಮಗಿದೆ. ಈ ಸಮೀಕ್ಷೆಯನ್ನು ನಾವು ಸೆಮಿ ಫೈನಲ್ ಎಂದೇ ಪರಿಗಣಿಸಿದ್ದೇವೆ. ಮುಂದಿನ ವಾರ ಫೈನಲ್ ಸಮೀಕ್ಷೆ ಮಾಡಲಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಚುನಾವಣೆ ದಿನದ ಹತ್ತಿರದಲ್ಲೇ ಮಗದೊಂದು ಸಮೀಕ್ಷೆಯ ಫಲಿತಾಂಶ ನೀಡಲಿದ್ದೇವೆ. ಅದು ಮದರ್ ಆಫ್ ಆಲ್ ಸರ್ವೇಸ್. ಅಂದ್ರೆ ಮೆಗಾ ಫೈನಲ್ ಸಮೀಕ್ಷೆ.
Advertisement
ಮಾರ್ಚ್ 30-31ರಂದು ಪ್ರಕಟಗೊಂಡ ಮೊದಲ ಸರ್ವೆಯ ಫಲಿತಾಂಶ
ಸಮಗ್ರ ಕರ್ನಾಟಕ ಒಟ್ಟು ಕ್ಷೇತ್ರಗಳು 224
ಬಿಜೆಪಿ : 85 -95
ಕಾಂಗ್ರೆಸ್ : 98-108
ಜೆಎಡಿಎಸ್: 28-33
ಇತರೇ : 02
Advertisement
ಸೆಮಿಫೈನಲ್ ಸರ್ವೆ ರಿಸಲ್ಟ್
ಕಿತ್ತೂರು ಕರ್ನಾಟಕ ಒಟ್ಟು ಕ್ಷೇತ್ರಗಳು 50
ಬಿಜೆಪಿ : 21
ಕಾಂಗ್ರೆಸ್: 27
ಜೆಡಿಎಸ್ : 01
ಇತರೆ : 01
ಕಲ್ಯಾಣ ಕರ್ನಾಟಕ ಒಟ್ಟು ಕ್ಷೇತ್ರಗಳು 41
ಬಿಜೆಪಿ: 14
ಕಾಂಗ್ರೆಸ್: 22
ಜೆಡಿಎಸ್ :03
ಇತರೆ : 02
ಮಧ್ಯ ಕರ್ನಾಟಕ ಒಟ್ಟು ಕ್ಷೇತ್ರಗಳು 25
ಬಿಜೆಪಿ: 12
ಕಾಂಗ್ರೆಸ್ :11
ಜೆಡಿಎಸ್: 01
ಇತರೆ: 01
ಹಳೇ ಮೈಸೂರು ಒಟ್ಟು ಕ್ಷೇತ್ರಗಳು 57
ಬಿಜೆಪಿ: 12
ಕಾಂಗ್ರೆಸ್ : 22
ಜೆಡಿಎಸ್ :23
ಕರಾವಳಿ ಕರ್ನಾಟಕ ಒಟ್ಟು ಕ್ಷೇತ್ರಗಳು 19
ಬಿಜೆಪಿ : 16
ಕಾಂಗ್ರೆಸ್: 03
ಜೆಡಿಎಸ್: 00
ಗ್ರೇಟರ್ ಬೆಂಗಳೂರು ಒಟ್ಟು ಕ್ಷೇತ್ರಗಳು 32
ಬಿಜೆಪಿ: 15
ಕಾಂಗ್ರೆಸ್ : 15
ಜೆಡಿಎಸ್: 02
20 ಕ್ಷೇತ್ರಗಳಲ್ಲಿ ಟಫ್ ಫೈಟ್
ಸುಮಾರು 20 ಕ್ಷೇತ್ರಗಳಲ್ಲಿ ತೀವ್ರ ಹಣಾಹಣಿಯಿದ್ದು, ಈ 20 ಕ್ಷೇತ್ರಗಳೇ ಅತ್ಯಂತ ನಿರ್ಣಾಯಕ. ರಾಜ್ಯದಲ್ಲಿ ಈ ಬಾರಿ ಒಂದೇ ಪಕ್ಷ ಅಧಿಕಾಕ್ಕೆ ಏರುತ್ತಾ? ಅಥವಾ ಅತಂತ್ರ ಪರಿಸ್ಥಿತಿ ನಿರ್ಮಾಣವಾಗುತ್ತಾ ಎಂಬುದನ್ನು ನಿರ್ಧರಿಸಲಿದೆ ಈ 20 ಕ್ಷೇತ್ರಗಳು ನಿರ್ಧರಿಸಲಿದೆ. ಈ ಜಿದ್ದಾಜಿದ್ದಿ ಕ್ಷೇತ್ರಗಳಲ್ಲಿ ಮತದಾರರ ತೀರ್ಪು ಅಂತಿಮ ಫಲಿತಾಂಶದ ಮೇಲೆ ಪ್ರಭಾವ ಬೀರಲಿದೆ.
ಪ್ರಭಾವ ಬೀರಬಹುದಾದ ಅಂಶಗಳು ಯಾವುದು?
ಪ್ರಧಾನಿ ನರೇಂದ್ರ ಮೋದಿ ಇನ್ನೂ ಚುನಾವಣಾ ಪ್ರಚಾರಕ್ಕೆ ಇಳಿಯದ ಕಾರಣ ಸಮೀಕ್ಷೆಯಲ್ಲಿ ಪರಿಗಣಿಸಿಲ್ಲ. ಬಂಡಾಯಗಾರರು ಸೃಷ್ಟಿಸುವ ಲಾಭ-ನಷ್ಟದ ಲೆಕ್ಕಾಚಾರ, ಲಿಂಗಾಯತ ನಾಯಕರಾದ ಶೆಟ್ಟರ್, ಸವದಿ ಪಕ್ಷಾಂತರ, ಬಿಜೆಪಿಯಿಂದ ಲಿಂಗಾಯತ ಮುಖ್ಯಮಂತ್ರಿ ಘೋಷಣೆ, ಡಿಕೆಶಿ,ಸಿದ್ದರಾಮಯ್ಯ ಲಿಂಗಾಯತ ಹೇಳಿಕೆ ವಿವಾದ, ಚುನಾವಣೆ ಗೆಲ್ಲಲು ಬಳಸುವ ಸಂಪನ್ಮೂಲಗಳು ಆಸೆ-ಆಮಿಷ ಇತ್ಯಾದಿ.
ಸೆಮಿಫೈನಲ್ ಸರ್ವೆ ರಿಸಲ್ಟ್
ಸಮಗ್ರ ಕರ್ನಾಟಕ ಒಟ್ಟು ಕ್ಷೇತ್ರಗಳು 224
ಬಿಜೆಪಿ: 83-90
ಕಾಂಗ್ರೆಸ್ : 92-102
ಜೆಡಿಎಸ್: 29-34
ಇತರೆ: 02-04 ಇದನ್ನೂ ಓದಿ: Mood Of Karnataka – ಪಬ್ಲಿಕ್ ಟಿವಿ ಮೊದಲ ಸರ್ವೆಯಲ್ಲಿ ಯಾರಿಗೆ ಎಷ್ಟು ಸ್ಥಾನ ಸಿಗುತ್ತೆ?