ಇತ್ತೀಚಿನ ದಿನಗಳಲ್ಲಿ ಆಹಾರ ಪದ್ಧತಿ, ಕೆಲಸದಿಂದಾಗಿ ಹೆಚ್ಚಾಗಿ ಯುವಜನರ ಮೇಲೂ ಹೆಚ್ಚು ಒತ್ತಡ ಬೀರುತ್ತಿದೆ. ಒತ್ತಡದಿಂದಾಗಿ ಅನೇಕ ಜನರು ಮಾನಸಿಕ ಖಿನ್ನತೆಗೆ ಒಳಗಾಗುತ್ತಿದ್ದಾರೆ. ಇದರಿಂದ ಹೊರಬರಲು ಅನೇಕ ದಿನಗಳೇ ಬೇಕಾಗುತ್ತದೆ. ಈ ಮಾನಸಿಕ ಖಿನ್ನತೆಯಿಂದಾಗಿ ಜನರು ತಮ್ಮ ಸಂತೋಷವನ್ನೇ ಮರೆಯುತ್ತಿದ್ದಾರೆ. ಮಾ.19 ಅಂತಾರಾಷ್ಟ್ರೀಯ ಸಂತೋಷದ ದಿನ. ಆಹಾರ (Food) ಪದ್ಧತಿ ಮೂಲಕ ನಿಮ್ಮನ್ನು ನೀವು ಸಂತೋಷವಾಗಿಡಲು ಒಂದಿಷ್ಟು ಮಾಹಿತಿ ಇಲ್ಲಿದೆ.
ಮೀನು ತಿನ್ನಿ: ಆಲ್ಬಕೋರ್ ಹಾಗೂ ಸಾಲ್ಮನ್‍ಗಳಂತಹ ಮೀನುಗಳಲ್ಲಿ (Fish) ಒಮೆಗಾ – 3 ಕೊಬ್ಬಿನಾಮ್ಲಗಳು ಸಮೃದ್ಧವಾಗಿವೆ. ಇದನ್ನು ತಿನ್ನುವುದರಿಂದ ನಿಮ್ಮ ಖಿನ್ನತೆಯ ಮಟ್ಟ ಕಡಿಮೆಗೊಳಿಸುತ್ತದೆ. ಅಷ್ಟೇ ಅಲ್ಲದೇ ದಿನವಿಡೀ ಸಂತೋಷದಿಂದ ಕಳೆಯಹುದು. ಈ ಆಮ್ಲಗಳು ಸೆಲ್ ಸಗ್ನಲಿಂಗ್ ಮತ್ತು ಮೆದುಳಿನ ಬೆಳವಣಿಗೆಗೆ ಸಹಕಾರಿಯಾಗಿದೆ.
ಚಾಕಲೇಟ್‍ಗಳು: ಚಾಕಲೇಟಿನಲ್ಲಿ (Chocolate) ಸಕ್ಕರೆಯ ಅಂಶವಿರುವುದರಿಂದ ನಿಮ್ಮ ಮನಸ್ಸನ್ನು ಖುಷಿಯಿಂದ ಇಟ್ಟುಕೊಳ್ಳಲು ಸಹಾಯ ಮಾಡುತ್ತದೆ. ಚಾಕೊಲೇಟ್ ಅನ್ನು ಸೇವಿಸಿದಾಗ, ಇದು ಕ್ಯಾನಬಿನಾಯ್ಡ್‍ಗಳಂತೆಯೇ ಇರುವಂತಹ ಉತ್ತಮ ಸಂಯೋಜನೆಗಳ ಕ್ಯಾಸ್ಕೇಡ್ ಅನ್ನು ಬಿಡುಗಡೆ ಮಾಡುತ್ತದೆ. ಇದರಿಂದಾಗಿ ಮಾನಸಿಕ ಖಿನ್ನತೆಗೆ ಒಳಗಾಗುವುದನ್ನು ತಪ್ಪಿಸುತ್ತದೆ. ಚಾಕಲೇಟ್ ಅನ್ನು ಇತಿ ಮಿತಿಯಾಗಿ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು.
ಮೊಸರು, ಯೋಗಾರ್ಟ್ ಸೇವಿಸಿ: ಮೊಸರು, ಯೋಗಾರ್ಟ್‍ನಂತಹ ಆಹಾರಗಳನ್ನು ಸೇವಿಸುವುದರಿಂದ ನಿಮ್ಮ ಮನಸ್ಸನ್ನು ಉಲ್ಲಾಸವಾಗಿರಲು ಮಾತ್ರವಲ್ಲದೇ ಕರುಳಿನ ಆರೋಗ್ಯವನ್ನು ಸುಧಾರಿಸುತ್ತದೆ. ಅವುಗಳಲ್ಲಿರುವ ಪ್ರೋಬಯಾಟಿಕ್‍ಗಳಿಂದ ಕರುಳಿನಲ್ಲಿ ಆರೋಗ್ಯಕರ ಬ್ಯಾಕ್ಟೀರಿಯಾದ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ಜೊತೆಗೆ ಸೆರೊಟೋನಿನ್ ಎಂಬ ಭಾವನೆಯ ಹಾರ್ಮೋನ್ ಮಟ್ಟವನ್ನು ಹೆಚ್ಚಿಸುತ್ತದೆ. ಇದನ್ನೂ ಓದಿ: ಲೈಂಗಿಕ ಆಸಕ್ತಿ ಹೆಚ್ಚಾಗ್ತಿದೆಯೇ? – ಪ್ರತಿಯೊಬ್ಬರೂ ತಿಳಿದುಕೊಳ್ಳಲೇಬೇಕಾದ ವಿಷಯಗಳಿವು..
ಬಾಳೆಹಣ್ಣು: ಬಾಳೆಹಣ್ಣುಗಳು (Banana) ವಿಟಮಿನ್ ಬಿ 6 ಅನ್ನು ಹೊಂದಿರುತ್ತವೆ. ಇದು ಡೋಪಮೈನ್ ಮತ್ತು ಸಿರೊಟೋನಿನ್ ಎಂಬ ಹಾರ್ಮೋನುಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಅಲ್ಲದೆ, ಬಾಳೆಹಣ್ಣುಗಳು ನೈಸರ್ಗಿಕ ಸಕ್ಕರೆ ಮತ್ತು ಪ್ರಿಬಯಾಟಿಕ್ ಫೈಬರ್‍ನ ಉತ್ತಮ ಮೂಲವಾಗಿದೆ. ಇದು ಆರೋಗ್ಯಕರ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳುತ್ತದೆ ಮತ್ತು ನಿಮ್ಮ ಮನಸ್ಥಿತಿಯನ್ನು ಸ್ಥಿರವಾಗಿರಿಸುತ್ತದೆ. ಇದನ್ನೂ ಓದಿ: PCOD ನಿವಾರಣೆಗೆ ಇಲ್ಲಿವೆ ಕೆಲವು ಮನೆ ಮದ್ದುಗಳು