– ಧಾರವಾಡದಲ್ಲಿ ಹಳ್ಳದಲ್ಲಿ ಕೊಚ್ಚಿ ಹೋಗ್ತಿದ್ದವನ ರಕ್ಷಣೆ
ಬೆಂಗಳೂರು: ರಾಜ್ಯದ ಹಲವು ಕಡೆ ಮಳೆ (Rain) ಮುಂದುವರಿದಿದೆ. ಮಹಾರಾಷ್ಟ್ರ (Maharastra) ಗಡಿಯ ಪಶ್ಚಿಮಘಟ್ಟಗಳಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಪರಿಣಾಮ ಬೆಳಗಾವಿ (Belagavi) ಜಿಲ್ಲೆಯ ನದಿಗಳು ಉಕ್ಕಿ ಹರಿಯುತ್ತಿವೆ.
ಚಿಕ್ಕೋಡಿ ಹಾಗೂ ನಿಪ್ಪಾಣಿ ತಾಲೂಕಿನ 7 ಕೆಳ ಹಂತದ ಸೇತುವೆಗಳು ಜಲಾವೃತಗೊಂಡಿದೆ. ಖಾನಾಪುರದ 40ಕ್ಕೂ ಹೆಚ್ಚು ಗ್ರಾಮಗಳು ಮೂರು ದಿನಗಳಿಂದ ಕತ್ತಲಲ್ಲಿವೆ. ಗೋಕಾಕ್‍ನ ಶಿಂಗಳಾಪೂರ ಸಂಪರ್ಕಿಸುವ ಸೇತುವೆ ಮುಳುಗಡೆಯಾಗಿದೆ. ಧಾರವಾಡದ ಕುಂಬಾರಗಣವಿಯ ಹಳ್ಳದಲ್ಲಿ ಕೊಚ್ಚಿ ಹೋಗ್ತಿದ್ದ ಬೈಕ್ ಸವಾರನನ್ನು ಗ್ರಾಮಸ್ಥರು ರಕ್ಷಣೆ ಮಾಡಿದ್ದಾರೆ.
Advertisement
Advertisement
ಶಾಲೆ ಮುಗಿಸಿ ಮನೆಗೆ ಮರಳುತ್ತಿದ್ದ ಮಕ್ಕಳು ಹಳ್ಳದಾಟಲಾಗದೇ ಪರದಾಡಿದ್ದಾರೆ. ಕೊನೆಗೆ ಟ್ರ್ಯಾಕ್ಟರ್ ಮತ್ತು ಜೆಸಿಬಿ ಮೂಲಕ ಮಕ್ಕಳನ್ನು ಹಳ್ಳ ದಾಟಿಸಲಾಗಿದೆ. ಕಲಬುರಗಿ ಜಿಲ್ಲೆ ಚಿಂಚೋಳಿ ತಾಲೂಕಿನ ಹಲವೆಡೆ 30ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಸೇಡಂ, ಚಿಂಚೋಳಿ, ಚಿತ್ತಾಪುರ ತಾಲೂಕಿನಾದ್ಯಂತ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಬೀದರ್ ನಗರದಲ್ಲಿ ಶಾಲೆ, ಪ್ರವಾಸಿ ಮಂದಿರ ಸಂಪೂರ್ಣ ಜಲಾವೃತಗೊಂಡಿದೆ. ಇದನ್ನೂ ಓದಿ: ಸಾಧು ವೇಷ ಧರಿಸಿ ದೇವಸ್ಥಾನದಲ್ಲಿ ಬೀಡುಬಿಟ್ಟಿದ್ದ ಮುಸ್ಲಿಂ ವ್ಯಕ್ತಿ ಅರೆಸ್ಟ್
Advertisement
Advertisement
ಯಾದಗಿರಿ, ಬಳ್ಳಾರಿಯಲ್ಲೂ ಮಳೆ ಆಗಿದೆ. ಹಾಸನದ ಸಕಲೇಶಪುರ, ಚಿಕ್ಕಮಗಳೂರು, ಮೂಡಿಗೆರೆ ಭಾಗದಲ್ಲೂ ಭಾರಿ ಮಳೆಯಾಗ್ತಿದೆ. ಹೇಮಾವತಿ ನದಿಯ ಒಳಹರಿವು ಹೆಚ್ಚಾಗಿದೆ.ಮುಂದಿನ 4 ದಿನ ಕರಾವಳಿ, ಉತ್ತರ ಒಳನಾಡಿನಲ್ಲಿ ಜೋರು ಮಳೆ ಆಗಲಿದ್ದು, ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಪ್ರಕಟಿಸಿದೆ. ದಕ್ಷಿಣ ಒಳನಾಡಿಗೆ ಯೆಲ್ಲೋ ಅಲರ್ಟ್ ಪ್ರಕಟಿಸಿದೆ.
Web Stories