ರಾಯಚೂರು: ಸಾರ್ವಜನಿಕರ ಕುಡಿಯುವ ನೀರಿನ ಟ್ಯಾಂಕಿನಲ್ಲಿ ಕೋತಿಗಳು ಬಿದ್ದು ಸಾವನ್ನಪ್ಪಿರುವ ಘಟನೆ ರಾಯಚೂರು ತಾಲೂಕಿನ ಜೆ. ಮಲ್ಲಾಪುರದಲ್ಲಿ ನಡೆದಿದೆ.
ಬೀಸಿಲಿನ ಝಳಕ್ಕೆ ಬಾಯಾರಿಕೆಯಾಗಿ ಜೆ ಮಲ್ಲಾಪುರ ಗ್ರಾಮದಲ್ಲಿ ಇದ್ದ ಕುಡಿಯುವ ನೀರಿನ ಟ್ಯಾಂಕಿನಲ್ಲಿ ಕೋತಿಗಳು ಇಳಿದಿವೆ. ನೀರು ಕುಡಿಯಲು ಒಟ್ಟು 10 ಕೋತಿಗಳು ಟ್ಯಾಂಕಿನಲ್ಲಿ ಇಳಿದಿದ್ದವು, ಆದರೆ ಅದರಲ್ಲಿ ನಾಲ್ಕು ಕೋತಿಗಳು ಸಾವನ್ನಪ್ಪಿವೆ. ಈ ವಿಷಯ ಊರಿನ ಜನಕ್ಕೆ ತಿಳಿದಿರಲಿಲ್ಲ. ಇದನ್ನೂ ಓದಿ: ನೀರು ಅರಸಿ ಖಾಲಿ ಟ್ಯಾಂಕ್‍ಗೆ ಇಳಿದ ವಾನರ ಸೇನೆ, ಮೇಲೆ ಬರಲಾರದೆ 15 ದಿನ ಆಹಾರವಿಲ್ಲದೇ ನರಳಾಡಿ ಪ್ರಾಣಬಿಟ್ಟ ಮಂಗಗಳು-ಗ್ರಾಮಸ್ಥರಿಂದ ಅಂತ್ಯ ಸಂಸ್ಕಾರ
Advertisement
Advertisement
ಗ್ರಾಮಸ್ಥರು ಕುಡಿಯಲು ಈ ಟ್ಯಾಂಕಿನ ನೀರನ್ನೇ ಉಪಯೋಗಿಸುತ್ತಾರೆ. ಆದರೆ ಕಳೆದ ಎರಡು ದಿನಗಳಿಂದ ಈ ನೀರು ಬಳಸಿದ ಮಂದಿಗೆ ವಾಂತಿ ಬೇಧಿ ಕಾಣಿಸಿಕೊಂಡಿತ್ತು. ಆದ್ದರಿಂದ ಅನುಮಾನಗೊಂಡ ಗ್ರಾಮಸ್ಥರು ನೀರಿನ ಟ್ಯಾಂಕಿನಲ್ಲಿ ಇಣುಕಿದಾಗ ಸತ್ಯಾಂಶ ತಿಳಿದಿದೆ.
Advertisement
ಟ್ಯಾಂಕಿನಲ್ಲಿ ಕೆಲವು ಕೋತಿಗಳು ಸಾವನ್ನಪ್ಪಿದ್ದವು, ಇನ್ನೂ ಕೆಲವು ಟ್ಯಾಂಕಿನಿಂದ ಮೇಲೆ ಬರಲಾಗದೆ ಒದ್ದಾಡುತ್ತಿದ್ದವು. ಇದನ್ನು ಕಂಡ ಗ್ರಾಮಸ್ಥರು ತಾವೇ ಖುದ್ದಾಗಿ ಟ್ಯಾಂಕಿನಲ್ಲಿ ಇಳಿದು ಬದುಕುಳಿದಿದ್ದ ಕೋತಿಗಳನ್ನು ರಕ್ಷಿಸಿದ್ದಾರೆ. ಹಾಗೆಯೇ ಸಾವನ್ನಪ್ಪಿದ್ದ ಕೋತಿಗಳ ಮೃತದೇಹಗಳನ್ನು ಹೊರ ತೆಗೆದು ಟ್ಯಾಂಕ್ ಸ್ವಚ್ಛಗೊಳಿಸುತ್ತಿದ್ದಾರೆ.