ಬೆಂಗಳೂರು: ಸಾವನ್ನಪ್ಪಿದ್ದ ಕೋತಿಯ ಅಂತ್ಯಕ್ರಿಯೆಯನ್ನು ಶಾಸ್ತ್ರೋಕ್ತವಾಗಿ ನಡೆಸಿ ನೆಲಮಂಗಲ ಪಟ್ಟಣದ ದಾದಾಪೀರ್ ಲೇಔಟ್‍ನ ಯುವಕರು ಮಾನವೀಯತೆ ಮೆರೆದಿದ್ದಾರೆ.
ವಯೋಸಹಜ ರೀತಿಯಲ್ಲಿ ಸಾವನ್ನಪ್ಪಿದ್ದ ಕೋತಿಯನ್ನು ಯುವಕರ ಗುಂಪೊಂದು ಅಂತ್ಯಕ್ರಿಯೆ ಮಾಡಿ ವಾನರನಿಗಾಗಿ ಮಾನವಿಯತೆ ತೋರಿದ್ದಾರೆ. ಮನುಷ್ಯ ಮೃತಪಟ್ಟರೆ ಯಾವೆಲ್ಲಾ ವಿಧಿವಿಧಾನಗಳನ್ನು ಮಾಡಿ ಶಾಸ್ತ್ರೋಕ್ತವಾಗಿ ಅಂತ್ಯ ಸಂಸ್ಕಾರ ಮಾಡುತ್ತಾರೋ, ಅದೇ ರೀತಿಯಲ್ಲಿ ಕೋತಿಯ ಅಂತ್ಯಕ್ರಿಯೆಯನ್ನು ಯವಕರು ಮಾಡಿದ್ದಾರೆ.
ಕೋತಿಯ ಅಂತ್ಯಕ್ರಿಯೆಯಲ್ಲಿ ಬಡಾವಣೆಯ ಜನರು ಕೂಡ ಭಾಗಿಯಾಗಿದ್ದರು. ಮಾನವೀಯತೆಗೆ ಮರುಗಿದ ಜನರು ಒಂದು ಪ್ರಾಣಿಯ ಜೀವಕ್ಕೂ ಬೆಲೆ ಇದೆ ಎಂದು ಅಂತ್ಯಕ್ರಿಯೆ ಮಾಡಿರುವುದು ನಿಜಕ್ಕೂ ಶ್ಲಾಘನೀಯ ವಿಷಯ. ಅಲ್ಲದೆ ಈಗಿನ ಕಾಲದಲ್ಲಿ ಕೆಲವರು ಸಾವನ್ನಪ್ಪಿದರೆ ಅವರ ಅಂತ್ಯಕ್ರಿಯೆ ಮಾಡಲು ಕೂಡ ಜನರು ಇರೋಲ್ಲ, ಅಂತದ್ರಲ್ಲಿ ಕೋತಿಯ ಅಂತ್ಯಸಂಸ್ಕಾರವನ್ನು ಮಾಡಿ ಮಾವವೀಯತೆ ಮೆರೆದ ಯುವಕರ ಕೆಲಸವನ್ನು ಮೆಚ್ಚಲೇಬೇಕು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv