ಬಾಗಲಕೋಟೆ: ಕೋತಿಯೊಂದು ನಿರ್ಮಾಣ ಹಂತದ ಹನುಮಾನ ದೇವಸ್ಥಾನದ ಮುಂದೆ ಬಂದು ಮೃತಪಟ್ಟ ಅಚ್ಚರಿಯ ಘಟನೆ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಬಾಡಗಿ ಗ್ರಾಮದಲ್ಲಿ ನಡೆದಿದೆ.
ಇದು ಆಂಜನೇಯನ ಪವಾಡ ಎಂದ ಗ್ರಾಮಸ್ಥರು, ಮೃತ ಕರಿಮಂಗನಿಗೆ ಪೂಜೆ, ಆರತಿ ಹಾಗೂ ಉದ್ದಿನ ಕಡ್ಡಿ ಬೆಳಗಿ ಬಳಿಕ ಭಜನಾಪದದ ಮೂಲಕ ಗೌರವ ಸಲ್ಲಿಕೆ ಮಾಡಿದರು. ಅಲ್ಲದೆ ಗ್ರಾಮದ ತುಂಬಾ ಮಂಗನ ಪಾರ್ಥಿವ ಶರೀರ ಮೆರವಣಿಗೆ ಮಾಡಲಾಯಿತು. ನಂತರ ದೇವಸ್ಥಾನದ ಗರ್ಭಗುಡಿ ಸ್ಥಳದಲ್ಲಿ ಅಂತ್ಯಸಂಸ್ಕಾರ ನಡೆಸಲಾಯಿತು. ಇದನ್ನೂ ಓದಿ: ಬೆಂಗ್ಳೂರಲ್ಲಿ ನಿಲ್ಲದ ಪ್ಲಾಸ್ಟಿಕ್ ಬಳಕೆ- ದಂಡದ ರೂಪದಲ್ಲಿ ಪಾಲಿಕೆ ಖಜಾನೆಗೆ ಹರಿದು ಬಂತು 21,48,600 ರೂ.!
ಹನುಮಂತ ದೇವಸ್ಥಾನದ ಬಾಗಿಲು ಬಳಿಯೇ ಮಂಗ ಮೃತಪಟ್ಟಿದೆ. ಇದು ಆಂಜನೇಯನ ಶಕ್ತಿ, ಆಂಜನೇಯನ ಮಹಿಮೆ. ಬಾಡಗಿ ಪುನರ್ವಸತಿ ಕೇಂದ್ರ, ನಮ್ಮ ಊರು ಈಗ ನಿರ್ಮಾಣವಾಗುತ್ತಿದೆ. ನಮ್ಮ ಊರ ಮೇಲೆ ಆಂಜನೇಯನ ಕೃಪೆ ಇದೆ. ಹನುಮಂತ ದೇವರ ದೇವಸ್ಥಾನ ಕಟ್ಟಿಸುತ್ತಿದ್ದೇವೆ. ಆದರೆ ಇದೀಗ ಸಾಕ್ಷಾತ್ ಆಂಜನೇಯನೆ ಇಲ್ಲಿ ಐಕ್ಯವಾಗಿದ್ದಾನೆ. ನಾವು ಆರು ತಿಂಗಳ ನಂತರ ಮೂರ್ತಿ ಪ್ರತಿಷ್ಟಾಪನೆ ಮಾಡುವವರಿದ್ದೆವು. ಆದರೆ ಇದೀಗ ಸಾಕ್ಷಾತ್ ಆಂಜನೇಯನೇ ಮಂಗನ ರೂಪದಲ್ಲಿ ಬಂದಿದ್ದಾನೆ ಎಂದು ಗ್ರಾಮಸ್ಥರು ನಂಬಿದ್ದಾರೆ.