ಮುಂಬೈ: ಪತ್ರಾ ಚಾಲ್ ಯೋಜನೆಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ (Money Laundering Case) ಬಂಧನಕ್ಕೊಳಗಾಗಿದ್ದ ಶಿವಸೇನಾ (Shiv Sena) ನಾಯಕ ಸಂಜಯ್ ರಾವತ್‌ಗೆ (Sanjay Raut) ಬುಧವಾರ ಜಾಮೀನು (Bail) ದೊರಕಿದೆ. ಈ ಹಿಂದೆ ರಾವತ್ ಅವರನ್ನು ಜಾರಿ ನಿರ್ದೇಶನಾಲಯ (ED) 6 ಗಂಟೆಗಳ ಕಾಲ ವಿಚಾರಣೆ ನಡೆಸಿ, ಬಳಿಕ ಅವರನ್ನು ಬಂಧಿಸಿತ್ತು.
ಸಂಜಯ್ ರಾವತ್ ಅವರೊಂದಿಗೆ ಅವರ ಸಹಾಯಕ ಹಾಗೂ ಪ್ರಮುಖ ಆರೋಪಿಯಾಗಿರುವ ಪ್ರವೀಣ್ ರಾವತ್ ಅವರನ್ನೂ ಇಡಿ ಬಂಧಿಸಿದ್ದು, ಮುಂಬೈನ ವಿಶೇಷ ನ್ಯಾಯಾಲಯದಿಂದ ಅವರು ಕೂಡಾ ಜಾಮೀನು ಪಡೆದಿದ್ದಾರೆ. ಇದನ್ನೂ ಓದಿ: ನಕಲಿ ಪಿಸ್ತೂಲ್ ತೋರಿಸಿ ಲಕ್ಷಾಂತರ ರೂ. ದರೋಡೆ
ತಮ್ಮ ವಿರುದ್ಧದ ಪ್ರಕರಣ ಅಧಿಕಾರದ ದುರುಪಯೋಗ ಹಾಗೂ ರಾಜಕೀಯ ಸೇಡಿನ ಒಂದು ಪರಿಪೂರ್ಣ ಉದಾಹರಣೆ ಎಂದು ಜಾಮೀನು ಅರ್ಜಿಯಲ್ಲಿ ಉಲ್ಲೇಖಿಸಿದ್ದರು. ಪ್ರಸ್ತುತ ಅವರು ನ್ಯಾಯಾಂಗ ಬಂಧನದಲ್ಲಿದ್ದು, ಮುಂಬೈನ ಆರ್ಥರ್ ರೋಡ್ ಜೈಲಿನಲ್ಲಿದ್ದಾರೆ. ಇದನ್ನೂ ಓದಿ: ಮಳಲಿ ಮಸೀದಿ ವಿವಾದ – ವಿಹೆಚ್‌ಪಿ ಅರ್ಜಿ ವಿಚಾರಣೆಗೆ ಕೋರ್ಟ್ ಅಸ್ತು
ಪತ್ರಾ ಚಾಲ್ ಪುನರಾಭಿವೃದ್ಧಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ ಹಾಗೂ ಅವರು ಕೇಸ್‌ನಿಂದ ತಪ್ಪಿಸಲು ಗುಪ್ತವಾಗಿ ಕಾರ್ಯನಿರ್ವಹಿಸಿದ್ದಾರೆ ಎಂದು ಹೇಳಿ ರಾವತ್ ಅವರಿಗೆ ಜಾಮೀನು ಮಂಜೂರು ಮಾಡದಂತೆ ಇಡಿ ಮನವಿ ಮಾಡಿತ್ತು.