ನವದೆಹಲಿ: ಅಕ್ರಮ ಹಣ ವರ್ಗಾವಣೆ (Money Laundering Case) ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣ ರದ್ದು ಕೋರಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ (D.K Shivakumar) ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್ (Delhi HighCourt) ಜಾರಿ ನಿರ್ದೇಶನಾಲಯ (ED) ಗೆ ನೋಟಿಸ್ ನೀಡಿದೆ.
Advertisement
ಇಂದು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಮುಕ್ತಾ ಗುಪ್ತಾ ಮತ್ತು ನ್ಯಾ.ಅನೀಶ್ ದಯಾಳ್ ಪೀಠ ಪ್ರಕರಣ ಬಗ್ಗೆ ಉತ್ತರಿಸುವಂತೆ ನೋಟಿಸ್ ನಲ್ಲಿ ತಿಳಿಸಿದೆ. ಡಿಸೆಂಬರ್ 15ಕ್ಕೆ ಪ್ರಕರಣದ ಹೆಚ್ಚುವರಿ ವಿಚಾರಣೆಗಾಗಿ ಮುಂದೂಡಲಾಗಿದೆ. ಪ್ರಕರಣದ ರದ್ದು ಕೋರಿರುವ ಡಿ.ಕೆ ಶಿವಕುಮಾರ್, ಅರ್ಜಿಯಲ್ಲಿ ಪಿಎಂಎಲ್‍ಎ ಸೆಕ್ಷನ್ 13 ರ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಇಂದಿರಾ ಗಾಂಧಿ ಪುಣ್ಯಸ್ಮರಣೆ – ಅನ್ನಸಂತರ್ಪಣೆ ವೇಳೆ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಬಿಜೆಪಿ ಬೆಂಬಲಿಗರಿಂದ ಹಲ್ಲೆ
Advertisement
Advertisement
ಯಾವೆಲ್ಲ ಕೇಸ್ ದಾಖಲಾಗಿದೆ?
ಕೇಸ್ ನಂ 1: ಈಗಲ್‍ಟನ್ ರೆಸಾರ್ಟ್ ನಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿದಾಗ ಪೇಪರ್ ಹರಿದು ಹಾಕಿದ್ದರಿಂದ, ಐಟಿ ಅಧಿಕಾರಿಗಳು ಸಾಕ್ಷ್ಯ ನಾಶ ಆರೋಪದಡಿ ಪ್ರಕರಣ ದಾಖಲಿಸಿದ್ದರು.
Advertisement
ಕೇಸ್ ನಂ 2:
ಡಿಕೆಶಿಯವರು ಅಕ್ರಮವಾಗಿ ಕೋಟ್ಯಂತರ ರೂಪಾಯಿಯನ್ನು ಹವಾಲಾ ಮೂಲಕ ಬೆಂಗಳೂರಿನಿಂದ ದೆಹಲಿಗೆ ರವಾನಿದ್ದಾರೆ ಎನ್ನುವ ಆರೋಪದ ಮೇಲೆ ಹವಾಲಾ ಪ್ರಕರಣ ದಾಖಲಾಗಿತ್ತು.
ಕೇಸ್ ನಂ 3:
ಡಿಕೆಶಿಯವರಿಗೆ ಸೇರಿರುವ ದೆಹಲಿಯ ಅಪಾರ್ಟ್‍ಮೆಂಟ್‍ವೊಂದರಲ್ಲಿ ದಾಖಲೆ ರಹಿತ 8.50 ಕೋಟಿ ರೂಪಾಯಿ ಹಣ ಪತ್ತೆಯಾಗಿತ್ತು. ಇದರ ವಿರುದ್ಧ ಐಟಿ ಅಧಿಕಾರಿಗಳು ದಾಖಲೆ ರಹಿತ ಹಣ ಸಂಗ್ರಹ ಆರೋಪದಡಿ ಪ್ರಕರಣ ದಾಖಲಿಸಿದ್ದರು.
ಡಿಕೆಶಿ ವಿರುದ್ಧದ `ಚಾರ್ಜ್‍ಶೀಟ್’ ಏನು?
1. 800 ಕೋಟಿ ರೂ. ಮೌಲ್ಯದ ಬೇನಾಮಿ ಆಸ್ತಿ
2. ಕುಟುಂಬಸ್ಥರ ಹೆಸರಿನಲ್ಲಿ 200 ಕೋಟಿ ರೂ. ಠೇವಣಿ
3. 20 ಬ್ಯಾಂಕ್, 317 ಖಾತೆ ಮೂಲಕ ಹಣ ವರ್ಗಾವಣೆ
4. ವಿದೇಶಿ ಬ್ಯಾಂಕ್ ಖಾತೆ ಮೂಲಕ ಹಣಕಾಸು ವ್ಯವಹಾರ
5. ಪುತ್ರಿ ಹೆಸರಿನಲ್ಲಿ 108 ಕೋಟಿ ರೂ. ಅಕ್ರಮ ವ್ಯವಹಾರ
6. ಪುತ್ರಿಯ 48 ಕೋಟಿ ರೂ. ಸಾಲಕ್ಕೆ ಮೂಲ ಇಲ್ಲ
7. ದೆಹಲಿ ನಿವಾಸದಲ್ಲಿ ಸಿಕ್ಕ 8.59 ಕೋಟಿ ರೂ.ಗೆ ಲೆಕ್ಕ ಕೊಟ್ಟಿಲ್ಲ
8. ಡಿ.ಕೆ ಕುಟುಂಬ ಹೆಸರಲ್ಲಿ 300 ಆಸ್ತಿ (ಡಿಕೆಶಿ-24, ಸುರೇಶ್-27, ತಾಯಿ ಹೆಸರಲ್ಲಿ 38 ಆಸ್ತಿ)
9. 7 ವರ್ಷದಲ್ಲಿ ಕೃಷಿಯಿಂದ 120 ಕೋಟಿ ರೂ. ಆದಾಯ