ನವದೆಹಲಿ : ಅಕ್ರಮ ಹಣ ವರ್ಗಾವಣೆ(Money Laundering Case) ಪ್ರಕರಣದಲ್ಲಿ ಆರೋಪಿಯಾಗಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್(DK Shivakumar) ಇಂದು ದೆಹಲಿ ರೋಸ್ ಅವೆನ್ಯೂ ಸಂಕೀರ್ಣದಲ್ಲಿರುವ ಇಡಿ(ED) ವಿಶೇಷ ನ್ಯಾಯಲಯದ ಮುಂದೆ ವಿಚಾರಣೆಗೆ ಹಾಜರಾದರು.
ಇಡಿ ಅಧಿಕಾರಿಗಳು ಸೂಕ್ತ ದಾಖಲೆಗಳು ನೀಡದ ಕಾರಣ ಪ್ರತಿ ವಾದ ಮಂಡಿಸಲು ಇನ್ನಷ್ಟು ಸಮಯ ಬೇಕು ಎಂದು ಡಿ.ಕೆ ಶಿವಕುಮಾರ್ ಪರ ವಕೀಲರು ಮನವಿ ಮಾಡಿದರು. ಮನವಿಗೆ ಸ್ಪಂದಿಸಿದ ಕೋರ್ಟ್ ಜನವರಿ 18ಕ್ಕೆ ವಿಚಾರಣೆ ಮುಂದೂಡಿತು. ಇದನ್ನೂ ಓದಿ: ಸದ್ಯಕ್ಕೆ ಡಿಕೆ ಶಿವಕುಮಾರ್ ಬಂಧಿಸಲ್ಲ: ಇಡಿ
Advertisement
ಇದೇ ವೇಳೆ ಡಿ.ಕೆ ಶಿವಕುಮಾರ್ ದುಬೈ(Dubai) ತೆರಳಲು ಅನುಮತಿ ಕೇಳಿದರು. ದುಬೈನಲ್ಲಿ ಡಿಸೆಂಬರ್ 1 ರಿಂದ 8 ವರೆಗೂ ಕಾರ್ಯಕ್ರಮವೊಂದು ನಡೆಯುತ್ತಿದ್ದು ಅದರಲ್ಲಿ ಭಾಗಿಯಾಗಬೇಕಿದೆ. ಈ ಕಾರ್ಯಕ್ರಮಕ್ಕೆ ತೆರಳಲು ಅನುಮತಿ ನೀಡಬೇಕು ಎಂದು ಮನವಿ ಮಾಡಿದರು. ಇದಕ್ಕೆ ಸೂಕ್ತ ದಾಖಲೆಗಳನ್ನು ಸಲ್ಲಿಸಬೇಕು ಎಂದು ಸೂಚಿಸಿದ ಕೋರ್ಟ್ ನವೆಂಬರ್ 26 ರಂದು ವಿಚಾರಣೆ ನಡೆಸಲಾಗುವುದು ಎಂದು ತಿಳಿಸಿತು.
Advertisement
ವಿಚಾರಣೆ ಬಳಿಕ ಮಾತನಾಡಿದ ಡಿ.ಕೆ ಶಿವಕುಮಾರ್, ಕೋರ್ಟ್ ವಿಚಾರದಲ್ಲಿ ಏನು ಮಾತನಾಡಲು ಸಾಧ್ಯವಿಲ್ಲ ಜಡ್ಜ್ ಏನ್ ಹೇಳ್ತಾರೆ ಅದನ್ನು ಕೇಳಬೇಕು, ಅವರು ಏನ್ ಕೊಟ್ಟರೂ ಪ್ರಸಾದನೇ. ಹಿಂದೆಯೂ ವಿದೇಶಕ್ಕೆ ತೆರಳಲು ಅನುಮತಿ ಕೇಳಿದ್ದೆ. ಕಡೆಯ ಕ್ಷಣದಲ್ಲಿ ಅನುಮತಿ ನೀಡಿದ್ದರುಂದ ತೆರಳಲು ಸಾಧ್ಯವಾಗಲಿಲ್ಲ. ಹೀಗಾಗಿ ಮುಂಚಿತವಾಗಿ ಗಮನಕ್ಕೆ ತಂದಿದ್ದೇವೆ. ಕೋರ್ಟ್ ಏನು ಹೇಳಿಲಿದೆ ನೋಡಬೇಕು ಎಂದರು.
Advertisement
Live Tv
[brid partner=56869869 player=32851 video=960834 autoplay=true]