ಹುಬ್ಬಳ್ಳಿ: ಉತ್ತರ ಕರ್ನಾಟಕದ ಪ್ರಸಿದ್ಧ ಮತ್ತು ಹುಬ್ಬಳ್ಳಿ ಧಾರವಾಡ ಆರಾಧ್ಯದೈವ ಶ್ರೀಸಿದ್ಧಾರೂಢ ಮಠದಲ್ಲಿ ಒಂದೇ ತಿಂಗಳಲ್ಲಿ 27.13 ಲಕ್ಷರೂಪಾಯಿ ಕಾಣಿಕೆ ಸಂಗ್ರಹವಾಗಿದೆ.
ಏ.20 ರಿಂದ ಮೇ.25ರ ಅಂದರೆ 35 ದಿನಗಳಲ್ಲಿ ಎಲ್ಲಾ ಪೆಟ್ಟಿಗೆಯಲ್ಲಿ ಸಂಗ್ರಹವಾದ ಮೊತ್ತಯಿದಾಗಿದೆ. ಬ್ಯಾಂಕ್ ಆಫ್ ಇಂಡಿಯಾ, ಸಿದ್ಧಾರೂಢನಗರ ಶಾಖೆಯ ಮ್ಯಾನೇಜರ್ ಮತ್ತು ಸಿಬ್ಬಂದಿ, ನೂರಾರು ಭಕ್ತರ ಸಮ್ಮುಖದಲ್ಲಿ ಕಾಣಿಕೆ ಪೆಟ್ಟಿಗೆಗಳನ್ನು ತೆರೆಯಲಾಗಿದೆ. ಎಲ್ಲಾ ಪೆಟ್ಟಿಗೆಗಳಲ್ಲಿ 27.13 ಲಕ್ಷ ನಗದು ಹಣ 17,711 ರೂ ಮೌಲ್ಯದ ಬಂಗಾರ ಮತ್ತು ಬೆಳ್ಳಿ ಸಾಮಗ್ರಿಗಳನ್ನು ಭಕ್ತರು ಮಠಕ್ಕೆ ಸಮರ್ಪಣೆ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಟ್ರಸ್ಟ್ ಕಮಿಟಿಯ ಚೇರಮನ್ ಧರಣೇಂದ್ರ ಭ.ಜವಳಿ , ವೈಸ್ ಚೇರಮನ್ ಡಾ.ಗೋವಿಂದ ಜಿ.ಮಣ್ಣೂರ ಸೇರಿದಂತೆ ವಿವಿಧ ಪದಾಧಿಕಾರಿಗಳಿದ್ದರು. ಇದನ್ನೂ ಓದಿ: ಫ್ರಾನ್ಸ್‌ನಲ್ಲಿ ಸಾಧನೆ ಮಾಡಿ ಬಂದ ಧಾರವಾಡದ ಆಟಗಾರ್ತಿ