ಕೋಮುಲ್ ಚುನಾವಣೆಯಲ್ಲಿ ಹಣದ ಹೊಳೆ – ಒಂದೊಂದು ಮತಕ್ಕೆ 5 ರಿಂದ 7 ಲಕ್ಷ ಸಂದಾಯ

Public TV
1 Min Read
KOMUL ELECTION

– ಮತದಾನ ಮಾಡಿದ ಬಳಿಕ ಮಿಕ್ಸಿ, ಗ್ರೈಂಡರ್ ಗಿಫ್ಟ್
– ಮುಂಬೈ, ಗೋವಾ, ಹೈದರಾಬಾದ್ ಟೂರ್ ಆಫರ್

ಕೋಲಾರ: ಕೋಲಾರ ಹಾಲು ಒಕ್ಕೂಟದ ಆಡಳಿತ ಮಂಡಳಿ (KOMUL) ಚುನಾವಣೆಯಲ್ಲಿ ರೈತರ ಬದಲಾಗಿ ಶ್ರೀಮಂತರು, ರಿಯಲ್ ಎಸ್ಟೇಟ್ ಉದ್ಯಮಿಗಳು, ರಾಜಕೀಯ ಪ್ರವೇಶ ಮಾಡಿರುವ ಪರಿಣಾಮ ಹಣದ ಹೊಳೆ ಹರಿದಿದೆ.

KOMUL

ಮತದಾರರಿಗೆ ಹಣದ ಆಮಿಷ, ಚಿನ್ನ, ಬೆಳ್ಳಿ ಉಡುಗೊರೆಗಳ ಜೊತೆಗೆ ಮಿಕ್ಸಿ, ಗ್ರೈಂಡರ್, ಉಡುಗೊರೆ ನೀಡಲಾಗಿದೆ. 855 ಜನ ಮತದಾರರಿದ್ದು, 1 ಮತಕ್ಕೆ 15 ಗ್ರಾಂ ಚಿನ್ನದ ಉಂಗರ, 1 ಕೆಜಿ ಬೆಳ್ಳಿಯ ಆಭರಣ, 2 ಲಕ್ಷ ಹಣ ಸೇರಿ ಒಬ್ಬ ಮತದಾರರಿಗೆ ಸರಾಸರಿ 5 ಲಕ್ಷ ಕೊಟ್ಟಿದ್ದಾರೆ. ಜಿದ್ದಾಜಿದ್ದಿ ಇರುವ ಸ್ಥಳಗಳಲ್ಲಿ ಕೆಲವು ಮತದಾರರಿಗೆ 10 ಲಕ್ಷದವರೆಗೂ ಕೊಟ್ಟಿದ್ದಾರೆ. ಜೊತೆಗೆ ಮುಂಬೈ, ಗೋವಾ, ಹೈದರಾಬಾದ್ ಪ್ರವಾಸದ ಆಫರ್ ಕೊಟ್ಟಿದ್ದಾರೆ. ಇದನ್ನೂ ಓದಿ: ಹಿಮಾಚಲದಲ್ಲಿ ಮೇಘಸ್ಫೋಟ; ರಣಪ್ರವಾಹಕ್ಕೆ ಇಬ್ಬರು ಬಲಿ, 15-20 ಕಾರ್ಮಿಕರು ಕೊಚ್ಚಿ ಹೋಗಿರುವ ಶಂಕೆ

ಕೋಮುಲ್ ಆಡಳಿತ ಮಂಡಳಿಗೆ ಒಟ್ಟು 13 ನಿರ್ದೇಶಕರ ಆಯ್ಕೆಯಾಗಬೇಕು. ಈ ಪೈಕಿ ಈಗಾಗಲೇ ಮಾಲೂರು ಶಾಸಕ ನಂಜೇಗೌಡ ಅವರು ಅವಿರೋಧ ಆಯ್ಕೆಯಾಗಿರುವ ಹಿನ್ನೆಲೆ 12 ಸ್ಥಾನಗಳಿಗೆ ಚುನಾವಣೆ ನಡೆದು, ಒಟ್ಟು 29 ಅಭ್ಯರ್ಥಿಗಳು ಕಣದ್ದಲ್ಲಿದ್ದರು. 13 ನಿರ್ದೇಶಕರ ಸ್ಥಾನಗಳ ಪೈಕಿ 9ರಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ಗೆಲುವು ಸಾಧಿಸಿದ್ದಾರೆ. ಇದರಲ್ಲಿ ಬಂಗಾರಪೇಟೆ ಶಾಸಕ ಎಸ್‌ಎನ್ ನಾರಾಯಣಸ್ವಾಮಿ, ಮಾಲೂರು ಶಾಸಕ ಕೆವೈ ನಂಜೇಗೌಡ ಆಯ್ಕೆ ಆಗಿದ್ದಾರೆ. 4 ಸ್ಥಾನಗಳಲ್ಲಿ ಎನ್‌ಡಿಎ ಬೆಂಬಲಿತ ಅಭ್ಯರ್ಥಿಗಳು ಗೆದ್ದಿದ್ದಾರೆ. ಇದನ್ನೂ ಓದಿ: ಇಸ್ರೇಲ್ ಜೊತೆ ಸಂಪರ್ಕದಲ್ಲಿದ್ದ 700ಕ್ಕೂ ಅಧಿಕ ಜನರನ್ನು ಬಂಧಿಸಿದ ಇರಾನ್

Share This Article