ಪ್ರೆಗ್ನೆನ್ಸಿ ಬೆನ್ನಲ್ಲೇ ಶೂಟಿಂಗ್‌ಗಾಗಿ ವಿದೇಶಕ್ಕೆ ಹಾರಿದ ಆಲಿಯಾ ಭಟ್

Public TV
1 Min Read
alia bhat 6

ಬಾಲಿವುಡ್ ಬ್ಯೂಟಿ ಆಲಿಯಾ ಭಟ್ ಇತ್ತೀಚೆಗೆ ತಾವು ತಾಯಿಯಾಗುತ್ತಿರುವ ವಿಚಾರ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದರು. ಈ ಬೆನ್ನಲ್ಲೇ ನಟಿ ಆಲಿಯಾ ಶೂಟಿಂಗ್‌ಗಾಗಿ ವಿದೇಶಕ್ಕೆ ಹಾರಿದ್ದಾರೆ. ಈ ಫೋಟೋ ಈಗ ಸಖತ್ ವೈರಲ್ ಆಗಿದೆ.

ಚಿತ್ರರಂಗದಲ್ಲಿ ಬೇಡಿಕೆಯಿರುವಾಗಲೇ ನಟಿ ಆಲಿಯಾ ಹಸೆಮಣೆ ಏರಿದ್ದರು. ಬಳಿಕ ಎರಡುವರೆ ತಿಂಗಳ ನಂತರ ಈಗ ಅಮ್ಮನಾಗುತ್ತಿರುವ ಆಲಿಯಾ ಒಪ್ಪಿಕೊಂಡಿದ್ದ ಸಿನಿಮಾಗಳತ್ತ ಮುಖ ಮಾಡಿದ್ದಾರೆ. ಹಾಲಿವುಡ್‌ನ `ಹಾರ್ಟ್ ಆಫ್ ಸ್ಟೋನ್’ ಚಿತ್ರಕ್ಕಾಗಿ ಲಂಡನ್‌ಗೆ ಹೋಗಿದ್ದಾರೆ. ಈ ವೇಳೆ ಕರಣ್ ಜೋಹರ್ ಮತ್ತು ಫ್ಯಾಷನ್ ಡಿಸೈನರ್ ಮನೀಷ್ ಮಲ್ಹೋತ್ರಾ ಅವರನ್ನು ಲಂಡನ್‌ನಲ್ಲಿ ಭೇಟಿಯಾಗಿರುವ ಫೋಟೋವನ್ನು ಶೇರ್ ಮಾಡಿದ್ದಾರೆ. ಇದನ್ನೂ ಓದಿ:ಅಸ್ಸಾಂ ಪ್ರವಾಹ ಪೀಡಿತರ ಸಂಕಷ್ಟಕ್ಕೆ ಮಿಡಿದ ಆಮೀರ್ ಖಾನ್

aliya bhat

ಆಲಿಯಾ ಮದುವೆಗೂ ಮುಂಚೆನೇ ಸಾಲು ಸಾಲು ಸಿನಿಮಾಗಳಿಗೆ ಓಕೆ ಅಂದಿದ್ರು. ಅದರಲ್ಲಿ ಹಾಲಿವುಡ್‌ನ ಚಿತ್ರ `ಹಾರ್ಟ್ ಆಫ್ ಸ್ಟೋನ್’ ಚಿತ್ರಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದರು. ಈಗ ಶೂಟಿಂಗ್‌ಗಾಗಿ ಆಲಿಯಾ ಲಂಡನ್‌ಗೆ ತೆರಳಿದ್ದಾರೆ. ಈ ವೇಳೆ ಆಲಿಯಾ ಜತೆ ಕರಣ್ ಜೋಹರ್ ಮತ್ತು ಮನೀಷ್ ಬಿಸಿಲಿಗೆ ಮುಖ ಕೊಟ್ಟು ಕ್ಯಾಮೆರಾ ಪೋಸ್ ಮಾಡಿರುವ ಫೋಟೋ ವೈರಲ್ ಆಗಿದೆ.

Live Tv

Share This Article
Leave a Comment

Leave a Reply

Your email address will not be published. Required fields are marked *