ಮಾಲಿವುಡ್ ಸ್ಟಾರ್ ನಟ ಪೃಥ್ವಿರಾಜ್ ಸುಕುಮಾರನ್ (Prithviraj Sukumaran) ಸದ್ಯ ‘ಸಲಾರ್’, ‘ಆಡುಜೀವಿತಂ’ ಸಿನಿಮಾದ ಮೂಲಕ ಜನರ ಮನಗೆದ್ದಿದ್ದಾರೆ. ಹೀಗಿರುವಾಗ ಅವರ ಮುಂದಿನ ಸಿನಿಮಾದ ಅಪ್‌ಡೇಟ್‌ವೊಂದು ಸಿಕ್ಕಿದೆ. ತೆಲುಗಿನ ನಟ ಮಹೇಶ್ ಬಾಬು ಮುಂಬರುವ ಸಿನಿಮಾದಲ್ಲಿ ಪೃಥ್ವಿರಾಜ್ ಸುಕುಮಾರನ್ ಅಬ್ಬರಿಸಲಿದ್ದಾರೆ.
ಮಲಯಾಳಂ ಸಿನಿಮಾರಂಗದ ಪ್ರತಿಭಾನ್ವಿತ ನಟ ಪೃಥ್ವಿರಾಜ್ ಸುಕುಮಾರನ್ ಯಾವುದೇ ಪಾತ್ರ ಕೊಟ್ಟರೂ ಆ ಪಾತ್ರವೇ ತಾವಾಗಿ ನಟಿಸುವ ಕಲಾವಿದ. ವಿಭಿನ್ನ ಕಂಟೆಂಟ್‌ಗಳ ಮೂಲಕ ಪೃಥ್ವಿರಾಜ್ ಸುಕುಮಾರನ್ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಹಾಗಾಗಿ ಮಲಯಾಳಂನಲ್ಲಿ ಸೀಮಿತವಾಗದೇ ಬೇರೆ ಬೇರೆ ಭಾಷೆಗಳಲ್ಲಿ ಕೂಡ ಗಮನ ಸೆಳೆದಿದ್ದಾರೆ. ಈಗ ಮಹೇಶ್ ಬಾಬು ಜೊತೆಗಿನ ಸಿನಿಮಾ ಮೂಲಕ ‘ಸಲಾರ್’ ನಟ ಸುದ್ದಿಯಲ್ಲಿದ್ದಾರೆ. ಇದನ್ನೂ ಓದಿ:ಸಣ್ಣ ವಯಸ್ಸಿನಲ್ಲಿಯೇ ನನ್ನ ಫೋಟೋ ಅಶ್ಲೀಲ ವೆಬ್‌ಸೈಟ್‌ಗೆ ಹಾಕಿದ್ರು ಎಂದ ಜಾನ್ವಿ ಕಪೂರ್

ಒಂದು ವೇಳೆ, ಈ ಸುದ್ದಿ ನಿಜವಾಗಿದ್ದಲ್ಲಿ ಪೃಥ್ವಿರಾಜ್ ಮತ್ತು ಮಹೇಶ್ ಬಾಬು ಕಾಂಬಿನೇಷನ್ ಸಿನಿಮಾ ಪ್ರೇಕ್ಷಕರಿಗೆ ಮನರಂಜನೆ ಕೊಡೋದು ಗ್ಯಾರಂಟಿ.


