‘ಆಪರೇಷನ್ ಸಿಂಧೂರ’ (Operation Sindoora) ಕಾರ್ಯಾಚರಣೆಯಲ್ಲಿ ಉಗ್ರರ 9 ಅಡಗುತಾಣಗಳ ಮೇಲೆ ಭಾರತೀಯ ಸೇನೆ ದಾಳಿ ನಡೆಸಿದ ಬಗ್ಗೆ ರಜನಿಕಾಂತ್, ಮೋಹನ್ ಲಾಲ್ ಪ್ರತಿಕ್ರಿಯೆ ನೀಡಿದ ಬೆನ್ನಲ್ಲೇ ನಟ ಮಮ್ಮುಟ್ಟಿ (Mammootty) ಕೂಡ ರಿಯಾಕ್ಟ್ ಮಾಡಿದ್ದಾರೆ. ನೀವು ನಮ್ಮ ರಿಯಲ್ ಹೀರೋಗಳು ಅಂತ ವೀರ ಯೋಧರನ್ನ ಕೊಂಡಾಡಿದ್ದಾರೆ. ಇದನ್ನೂ ಓದಿ:ಸಿಂಧೂರ ಕೇವಲ ಸಂಪ್ರದಾಯವಲ್ಲ, ಅದು ಸಂಕೇತ- ಭಾರತೀಯ ಸೇನೆ ಕೊಂಡಾಡಿದ ಮೋಹನ್ ಲಾಲ್
‘ನಿಜವಾದ ವೀರ ಯೋಧರಿಗೆ ನಮ್ಮ ನಮನಗಳು… ಈ ರಾಷ್ಟ್ರ ಕರೆದಾಗ ಭಾರತೀಯ ಸೇನೆಯು ತಕ್ಕ ಉತ್ತರ ನೀಡುತ್ತದೆ ಅನ್ನೋದು ಆಪರೇಷನ್ ಸಿಂಧೂರದ ಮೂಲಕ ಮತ್ತೊಮ್ಮೆ ಸಾಬೀತಾಗಿದೆ. ಜೀವಗಳನ್ನು ಉಳಿಸಿದ್ದಕ್ಕಾಗಿ ಮತ್ತು ಭರವಸೆಯನ್ನು ಮರುಸ್ಥಾಪಿಸಿದ್ದಕ್ಕಾಗಿ ಧನ್ಯವಾದಗಳು. ನೀವು ರಾಷ್ಟ್ರವನ್ನು ಹೆಮ್ಮೆಪಡುವಂತೆ ಮಾಡಿದ್ದೀರಿ. ಜೈ ಹಿಂದ್!’ ಎಂದು ತಮ್ಮ ಸೋಷಿಯಲ್ ಮೀಡಿಯಾ ಎಕ್ಸ್ ಖಾತೆಯಲ್ಲಿ ಮಮ್ಮುಟ್ಟಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ:ಯೋಧರ ಹೋರಾಟ ಶುರುವಾಗಿದೆ: ‘ಆಪರೇಷನ್ ಸಿಂಧೂರ’ಗೆ ಜೈ ಎಂದ ತಲೈವಾ
Salute to our Real heroes !#OperationSindoor proved again , When the nation calls, The #IndianArmy answers.
Thank you for saving lives and restoring hope.
You Make The Nation Proud. Jai Hind !
— Mammootty (@mammukka) May 7, 2025
ಏ.22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಗೆ 26 ಮಂದಿ ಬಲಿಯಾಗಿದ್ದರು. ಅದಕ್ಕೆ ಪ್ರತೀಕಾರವಾಗಿ ಭಾರತೀಯ ಸೇನೆ ನಡೆಸಿದ ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ 100ಕ್ಕೂ ಹೆಚ್ಚು ಉಗ್ರರು ಸಾವನ್ನಪ್ಪಿರುವುದಾಗಿ ವರದಿಗಳಿಂದ ತಿಳಿದುಬಂದಿದೆ.