ಮೈಸೂರು: ಮೊಳಕಾಲ್ಮೂರು ಕ್ಷೇತ್ರದ ಬಿಜೆಪಿ ಶಾಸಕ ತಿಪ್ಪೇಸ್ವಾಮಿಯವರು ಇಂದು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದಾರೆ.
ಸಂಸದ ಶ್ರೀರಾಮುಲು ವಿರುದ್ಧ ಸಿಡಿದೆದ್ದಿರುವ ತಿಪ್ಪೇಸ್ವಾಮಿ ಅವರು ಮೈಸೂರಿನ ಸಿಎಂ ನಿವಾಸದಲ್ಲಿ ಸಿದ್ದರಾಮಯ್ಯ ಜೊತೆ ಮಾತುಕತೆ ನಡೆಸಿದ್ದಾರೆ. ಈ ಮೂಲಕ ಅವರು ಕಾಂಗ್ರೆಸ್ ಸೇರುವ ಸಾಧ್ಯತೆಗಳಿವೆ ಎನ್ನಲಾಗಿದೆ. ಇದನ್ನೂ ಓದಿ: ನೀನು ಗಂಡಸಾಗಿದ್ರೆ, ಮೊಳಕಾಲ್ಮೂರಲ್ಲಿ ಗೆದ್ದು ತೋರ್ಸು ನಾನು ನೋಡ್ತಿನಿ-ಶ್ರೀರಾಮುಲುಗೆ ಸವಾಲೆಸೆದ ಶಾಸಕ ತಿಪ್ಪೇಸ್ವಾಮಿ
Advertisement
ಸಿಎಂ ಅವರನ್ನು ಭೇಟಿ ಮಾಡಿದ ಹಿನ್ನೆಲೆಯಲ್ಲಿ ತಿಪ್ಪೇಸ್ವಾಮಿ ಅವರು ಮೊಳಕಾಲ್ಮೂರಿನ ಕಾಂಗ್ರೆಸ್ ಅಭ್ಯರ್ಥಿ ಆಗ್ತಾರಾ ಅನ್ನೋ ಪ್ರಶ್ನೆಯೊಂದು ರಾಜಕೀಯ ವಲಯದಲ್ಲಿ ಮೂಡಿದೆ. ಇದೇ ವೇಳೆ ಸಿರಗುಪ್ಪ ಶಾಸಕ ಬಿ.ಎಂ ನಾಗರಾಜ್ ಬೆಂಬಲಿಗರು ಕೂಡ ಮೈಸೂರಿನ ಟಿ.ಕೆ ಬಡಾವಣೆಯಲ್ಲಿರೋ ಸಿಎಂ ಸಿದ್ದರಾಮಯ್ಯ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಇದನ್ನೂ ಓದಿ: ಶಾಸಕ ತಿಪ್ಪೇಸ್ವಾಮಿಗೆ ಬಹಿರಂಗ ಸವಾಲೆಸೆದ ಶ್ರೀರಾಮುಲು
Advertisement
Advertisement
ಶಾಸಕರು ಸೋಮವಾರ ಸಚಿವ ಡಿಕೆ ಶಿವಕುಮಾರ್ ಅವರನ್ನು ಕೂಡ ಭೇಟಿಯಾಗಿದ್ದಾರೆ. ಈ ಕುರಿತು ಮಾತನಾಡಿದ ಡಿಕೆಶಿ, ಶಾಸಕ ತಿಪ್ಪೇಸ್ವಾಮಿ ಅವರು ನನ್ನನ್ನು ಭೇಟಿಯಾಗಿದ್ದಾರೆ. ತಿಪ್ಪೇಸ್ವಾಮಿ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಬಿಜೆಪಿ ಶಾಸಕರಾಗಿದ್ದಾರೆ. ಶಾಸಕರ ಭೇಟಿ ವಿಚಾರವನ್ನ ವರಿಷ್ಠರ ಬಳಿ ಪ್ರಸ್ತಾಪ ಮಾಡುತ್ತೇನೆ. ಪಕ್ಷಕ್ಕೆ ಕರೆದುಕೊಳ್ಳುವುದರ ಬಗ್ಗೆ ವರಿಷ್ಠರು ತಿರ್ಮಾನಿಸುತ್ತಾರೆ. ಏ.19ರಂದು ಕನಕಪುರದಲ್ಲಿ ನಾಮಪತ್ರ ಸಲ್ಲಿಕೆ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ. ಇಂದಿನಿಂದ ಅಭ್ಯರ್ತಿಗಳಿಗೆ ಬಿ ಫಾರಂ ಕೊಡಲಾಗುತ್ತದೆ. ಪಕ್ಷದಲ್ಲಿರುವ ಅಸಮಾಧಾನವನ್ನು ಎರಡು ಮೂರು ದಿನಗಳಲ್ಲಿ ಶಮನ ಮಾಡಲಾಗುತ್ತದೆ. ಅಸಮಾಧಾನ ಯಾವ ಪಕ್ಷದಲ್ಲಿ ಇಲ್ಲ ಹೇಳಿ. ಅದನ್ನು ಬಗೆಹರಿಸುವ ಕೆಲಸ ವರಿಷ್ಠರು ಮಾಡುತ್ತಾರೆ ಅಂತ ಹೇಳಿದ್ದಾರೆ. ಇದನ್ನೂ ಓದಿ: ಬಿಜೆಪಿ ಭಿನ್ನಮತೀಯರಿಂದ ಶ್ರೀರಾಮುಲು ಕಾರಿಗೆ ಕಲ್ಲು ತೂರಾಟ – ಪೊಲೀಸರಿಂದ ಲಾಠಿ ಚಾರ್ಜ್