– ಯುಎಸ್ ಸೇನಾ ನೆಲೆಗಳ ಮೇಲೆ ದಾಳಿ ಮುಂದುವರಿಯುತ್ತೆ ಅಂತ ವಾರ್ನಿಂಗ್
ಟೆಹ್ರಾನ್: ಇರಾನ್‌ನ (Iran) ಹೊಸ ಸರ್ವೋಚ್ಚ ನಾಯಕನಾದ ಬಳಿಕ ಮೊಜ್ತಬಾ ಖಮೇನಿ (Mojtaba Khamenei) ಮೊದಲ ಹೇಳಿಕೆ ನೀಡಿದ್ದಾರೆ. ಹಾರ್ಮುಜ್ ಜಲಸಂಧಿ ಮಾರ್ಗವನ್ನು ತೆರೆಯುವುದಿಲ್ಲ. ಮಧ್ಯಪ್ರಾಚ್ಯದ ನೆರೆಹೊರೆಯವರ ಮೇಲಿನ ದಾಳಿಗಳು ಮುಂದುವರಿಯುತ್ತವೆ ಎಂದು ತಿಳಿಸಿದ್ದಾರೆ.
ಖಮೇನಿಯವರ ಹೇಳಿಕೆಯನ್ನು ಗುರುವಾರ ರಾಜ್ಯ ದೂರದರ್ಶನದಲ್ಲಿ ಸುದ್ದಿ ನಿರೂಪಕರೊಬ್ಬರು ಓದಿದ್ದಾರೆ. ಅವರು ಕ್ಯಾಮೆರಾ ಮುಂದೆ ಕಾಣಿಸಿಕೊಳ್ಳಲಿಲ್ಲ. ಅಮೆರಿಕದ ಸೇನಾ ನೆಲೆಗಳು ಕಾರ್ಯಾಚರಣೆ ಮುಂದುವರಿಸಿದರೆ, ಅವುಗಳ ಮೇಲೆ ದಾಳಿ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ. ಈ ಪ್ರದೇಶದಲ್ಲಿನ ಎಲ್ಲಾ ಅಮೆರಿಕದ ನೆಲೆಗಳನ್ನು ತಕ್ಷಣವೇ ಮುಚ್ಚಬೇಕು ಎಂದು ವಾರ್ನಿಂಗ್ ಮಾಡಿದ್ದಾರೆ. ಇದನ್ನೂ ಓದಿ: ಇರಾನ್ ದಾಳಿಗೆ ಹೊತ್ತಿ ಉರಿದ ಅಮೆರಿಕದ ಟ್ಯಾಂಕರ್
ಪ್ರತಿ ಸಾವಿಗೂ ಪ್ರತೀಕಾರವನ್ನು ತೀರಿಸಿಕೊಳ್ಳುತ್ತೇವೆ. ಯುಎಸ್ ಸೇನಾ ನೆಲೆಗಳ ಮೇಲೆ ದಾಳಿ ಮುಂದುವರಿಯುತ್ತದೆ ಎಂದು ಇರಾನ್ ನಾಯಕ ಪ್ರತಿಜ್ಞೆ ಮಾಡಿದ್ದಾರೆ.
ಇದಕ್ಕೂ ಮೊದಲು, ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್, ಅಮೆರಿಕ ಮತ್ತು ಇಸ್ರೇಲ್ ಜೊತೆಗಿನ ಇರಾನ್‌ನ ಸಂಘರ್ಷವನ್ನು ಕೊನೆಗೊಳಿಸಲು ಮೂರು ಷರತ್ತುಗಳನ್ನು ಹಾಕಿದ್ದಾರೆ. ಯಾವುದೇ ನಿರ್ಣಯವು ಇರಾನ್‌ನ ಕಾನೂನುಬದ್ಧ ಹಕ್ಕುಗಳನ್ನು ಗುರುತಿಸಬೇಕು. ದೇಶವು ಭವಿಷ್ಯದಲ್ಲಿ ದಾಳಿಗಳನ್ನು ಎದುರಿಸುವುದಿಲ್ಲ ಎಂದು ಖಾತರಿಪಡಿಸಬೇಕು ಎಂದು ಕೇಳಿದ್ದಾರೆ. ಯುದ್ಧದಿಂದ ಉಂಟಾಗಿರುವ ಹಾನಿಗೆ ಪರಿಹಾರ ಕೂಡ ಕೇಳಿದ್ದಾರೆ. ಇದನ್ನೂ ಓದಿ: US-Iran War| 3 ಷರತ್ತನ್ನು ಒಪ್ಪಿಕೊಳ್ಳಿ, ಯದ್ಧ ಕೊನೆಗೊಳಿಸುತ್ತೇವೆ: ಇರಾನ್
ರಷ್ಯಾ ಮತ್ತು ಪಾಕಿಸ್ತಾನದ ನಾಯಕರೊಂದಿಗೆ ಮಾತನಾಡುತ್ತಾ, ಈ ಪ್ರದೇಶದಲ್ಲಿ ಶಾಂತಿಗೆ ಇರಾನ್‌ನ ಬದ್ಧತೆಯನ್ನು ನಾನು ಪುನರುಚ್ಚರಿಸಿದ್ದೇನೆ. ಜಿಯೋನಿಸ್ಟ್ ಆಡಳಿತ ಮತ್ತು ಅಮೆರಿಕದಿಂದ ಹೊತ್ತಿಸಲ್ಪಟ್ಟ ಈ ಯುದ್ಧವನ್ನು ಕೊನೆಗೊಳಿಸಲು ಏಕೈಕ ಮಾರ್ಗವೆಂದರೆ ಇರಾನ್‌ನ ಕಾನೂನುಬದ್ಧ ಹಕ್ಕುಗಳನ್ನು ಗುರುತಿಸುವುದು, ಪರಿಹಾರ ನೀಡುವುದು ಮತ್ತು ಭವಿಷ್ಯದ ಆಕ್ರಮಣದ ವಿರುದ್ಧ ದೃಢವಾದ ಅಂತರರಾಷ್ಟ್ರೀಯ ಖಾತರಿಗಳು ಬೇಕೆಂದು ತಿಳಿಸಿದ್ದಾರೆ.

