ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣ (Renuka Swamy Murder) ಮುಚ್ಚಿ ಹಾಕಲು ದರ್ಶನ್ (Darshan) ಏನೆಲ್ಲಾ ಮಾಡಲು ಯತ್ನಿಸಿದ್ದರು ಎಂಬ ಸ್ಪೋಟಕ ವಿಚಾರ ಬಯಲಾಗಿದೆ. ಮೊನ್ನೆಯಷ್ಟೇ ದರ್ಶನ್ ಮನೆಯಲ್ಲಿ 37 ಲಕ್ಷ ರೂ., ಪತ್ನಿ ವಿಜಯಲಕ್ಷ್ಮಿ ಬಳಿಯಿಂದ 3 ಲಕ್ಷ ರೂ. ನಗದು ವಶಕ್ಕೆ ಪಡೆಯಲಾಗಿತ್ತು.
ಈ ಮೊತ್ತದ ಬೆನ್ನತ್ತಿದ್ದ ಪೊಲೀಸರಿಗೆ, ಶಾಸಕರೊಬ್ಬರ ಆಪ್ತನ ಲಿಂಕ್ ಪತ್ತೆಯಾಗಿದೆ. ತಮ್ಮ ಆಪ್ತ ಮೋಹನ್‌ರಾಜ್ (Mohan Raj) ಎನ್ನುವವರ ಬಳಿ ದರ್ಶನ್ 40 ಲಕ್ಷ ರೂ. ಕೈಸಾಲ ಮಾಡಿದ್ದರು ಎನ್ನುವುದು ಗೊತ್ತಾಗಿದೆ. ಈ ಬೆನ್ನಲ್ಲೇ ಪೊಲೀಸರು ವಿಚಾರಣೆಗೆ ಮುಂದಾಗಿದ್ದಾರೆ. ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆಗೆ ಸಂಚು ರೂಪಿಸಿದ್ದೇ ಪವಿತ್ರಾಗೌಡ – ಹೊಸ ರಿಮ್ಯಾಂಡ್ ಕಾಪಿಯಲ್ಲಿ ಏನಿದೆ?
- Advertisement -
- Advertisement -
ವಿಚಾರಣೆ ಮುಂದಾಗುತ್ತಿದ್ದಂತೆ ಮೋಹನ್‌ರಾಜ್ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದಾರೆ. ದರ್ಶನ್‌ಗೆ ಈ ಹಣ ನೀಡುವಾಗ ಮೋಹನ್‌ರಾಜ್‌ಗೆ ಕೊಲೆ ವಿಚಾರ ಗೊತ್ತಾಗಿತ್ತಾ ಇಲ್ವಾ ಎನ್ನುವುದು ಇನ್ನೂ ತಿಳಿದು ಬಂದಿಲ್ಲ. ಒಂದೊಮ್ಮೆ ಕೊಲೆ ಪ್ರಕರಣ ಮೊದಲೇ ಗೊತ್ತಿತ್ತು ಎನ್ನುವುದಾದ್ರೆ ಮೋಹನ್‌ರಾಜ್‌ಗೂ ಸಂಕಷ್ಟ ಎದುರಾಗುವ ಸಾಧ್ಯತೆಯಿದೆ.
- Advertisement -
ದರ್ಶನ್ ಹಣದ ವಹಿವಾಟುಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಪೊಲೀಸರು ಐಟಿ ಇಲಾಖೆಗೆ ಪತ್ರ ಬರೆಯಲು ಚಿಂತನೆ ನಡೆಸಿದ್ದಾರೆ.
- Advertisement -