CinemaKarnatakaLatestMain PostSandalwood

ಜೋಗಿ ಪ್ರೇಮ್- ಧ್ರುವ ಸರ್ಜಾ ಚಿತ್ರದ ಟೈಟಲ್ ಟೀಸರ್ ಕಾರ್ಯಕ್ರಮಕ್ಕೆ ಮೋಹನ್ ಲಾಲ್

ಜೋಗಿ ಪ್ರೇಮ್ ಮತ್ತು ಧ್ರುವ ಸರ್ಜಾ (Dhruva Sarja) ಕಾಂಬಿನೇಷನ್ ನ ಹೊಸ ಸಿನಿಮಾದ ಟೈಟಲ್ ಟೀಸರ್ (Title Teaser) ಬಿಡುಗಡೆ ಕಾರ್ಯಕ್ರಮವನ್ನು ಇದೇ ಅಕ್ಟೋಬರ್ 20 ರಂದು ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿದ್ದು, ಈ ಕಾರ್ಯಕ್ರಮಕ್ಕೆ ಅತಿಥಿಯಾಗಿ ಮೋಹನ್ ಲಾಲ್ (Mohanlal) ಬರಲಿದ್ದಾರೆ. ಇದೊಂದು ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು, ನಾನಾ ಸಿನಿಮಾ ರಂಗದ ಕಲಾವಿದರು ಕೂಡ ಕಾರ್ಯಕ್ರಮದಲ್ಲಿ ಹಾಜರಿರಲಿದ್ದಾರೆ.

ಮೋಹನ್ ಲಾಲ್ ಅವರನ್ನು ಭೇಟಿ ಮಾಡಿರುವ ಫೋಟೋವನ್ನು ಪ್ರೇಮ್ (Jogi Prem) ಹಂಚಿಕೊಂಡಿದ್ದು, ಇದೊಂದು ಅಪರೂಪದ ಭೇಟಿ ಆಗಿತ್ತು ಎಂದು ಬರೆದುಕೊಂಡಿದ್ದಾರೆ. ಇಂತಹ ಮಹಾನ್ ಕಲಾವಿದನನ್ನು ಭೇಟಿ ಮಾಡಿದ್ದು ಸಂಭ್ರಮ ತಂದಿದೆ ಎಂದಿರುವ ಪ್ರೇಮ್, ಅಕ್ಟೋಬರ್ 20ರ ಕಾರ್ಯಕ್ರಮಕ್ಕೆ ತಮ್ಮೆಲ್ಲರ ಸಹಕಾರವಿರಲಿ ಎಂದೂ ಅವರು ಕೋರಿದ್ದಾರೆ. ಇದನ್ನೂ ಓದಿ:ಅಮ್ಜಾದ್ ಖಾನ್ ಧರ್ಮಕ್ಕೆ ಮತಾಂತರ ಆಗಿ ಮದುವೆ ಆಗಿರುವೆ: ನಟಿ ದಿವ್ಯಾ ಶ್ರೀಧರ್

ಕೆವಿಎನ್ (KVN) ಪ್ರೊಡಕ್ಷನ್ ಲಾಂಛನದಲ್ಲಿ ಈ ಸಿನಿಮಾ ಮೂಡಿ ಬರಲಿದ್ದು, ಈಗಾಗಲೇ ಚಿತ್ರಕ್ಕೆ ಮುಹೂರ್ತ ಮಾಡಲಾಗಿದೆ. ಮೈಸೂರಿನಲ್ಲಿ ಸಿನಿಮಾದ ಮುಹೂರ್ತವಾಗಿದ್ದು, ಅರ್ಜುನ್ ಜನ್ಯ ಈ ಸಿನಿಮಾಗಾಗಿ ಸಂಗೀತ ಸಂಯೋಜನೆಯ ಕೆಲಸವನ್ನೂ ಆರಂಭಿಸಿದ್ದಾರೆ. ಈ ಸಿನಿಮಾದ ಹಾಡುಗಳು ಈಗಾಗಲೇ ದಾಖಲೆಯ ಮೊತ್ತಕ್ಕೆ ಮಾರಾಟವಾಗಿದೆ ಎನ್ನುವ ಮಾತೂ ಇದೆ.

Live Tv

Leave a Reply

Your email address will not be published. Required fields are marked *

Back to top button