ನಿಧನರಾದ ಮೋಹನ್ ಜುನೇಜಾ ಹೂವಿನ ಹಾದಿಯಲ್ಲಿ ನಡೆದು ಬಂದವರಲ್ಲ

Public TV
2 Min Read
FotoJet 30

ಕೆಜಿಎಫ್ ಸೇರಿದಂತೆ ಐನೂರಕ್ಕೂ ಹೆಚ್ಚು ಸಿನಿಮಾಗಳು, ಹಲವು ಕಿರುತೆರೆ ಧಾರಾವಾಹಿಗಳು ಮತ್ತು ರಂಗಭೂಮಿಯಲ್ಲಿ ಅನೇಕ ನಾಟಕಗಳಲ್ಲಿ ನಟಿಸಿರುವ ಹಾಸ್ಯ ಕಲಾವಿದ ಮೋಹನ್ ಜುನೇಜಾ ಅವರು ನಡೆದು ಬಂದ ಹಾದಿ, ಹೂವಿನದಾರಿ ಆಗಿರಲಿಲ್ಲ. ಸ್ಥಿತಿವಂತ ಕುಟುಂಬದಲ್ಲಿ ಬೆಳೆದು ಬಂದರೂ, ಮೋಹನ್ ಮಾತ್ರ ಕಷ್ಟದ ಹಾದಿಯನ್ನೇ ಆಯ್ಕೆ ಮಾಡಿಕೊಂಡರು. ಇದನ್ನೂ ಓದಿ : ಪ್ರಶಾಂತ್ ನೀಲ್ -ಜ್ಯೂ.ಎನ್‌ಟಿಆರ್ ವಿವಾಹ ವಾರ್ಷಿಕೋತ್ಸವ ಸಂಭ್ರಮ ಹೇಗಿತ್ತು ಗೊತ್ತಾ?

FotoJet 5 3

ಶಾಲಾ ದಿನಗಳಲ್ಲಿ ಉತ್ತಮ ಅಂಕಗಳನ್ನೇ ಪಡೆಯುತ್ತಿದ್ದ ಮೋಹನ್ ಜುನೇಜಾ ಅವರ ತಂದೆಗೆ ಮಗನು ಇಂಜಿನಿಯರ್ ಆಗಬೇಕು ಎನ್ನುವುದು ಆಸೆಯಾಗಿತ್ತಂತೆ. ಆದರೆ, ಮೋಹನ್ ಕಂಡ ಕನಸೇ ಬೇರೆ. ಶಾಲಾ ಕಾಲೇಜುಗಳ ಹತ್ತಿರದಲ್ಲೇ ಇರುತ್ತಿದ್ದ ಚಿತ್ರಮಂದಿರಗಳಿಗೆ ಸಿನಿಮಾ ನೋಡಲು ಹೋಗುತ್ತಿದ್ದರು. ಮಗನು ತನ್ನ ಕನಸಿನಂತೆ ಇಂಜಿನಿಯರ್ ಆಗಲ್ಲ ಎಂದು ಗೊತ್ತಾಗುತ್ತಿದ್ದಂತೆಯೇ ಅವರ ತಂದೆಯು ಹಣ ಕೊಡುವುದನ್ನೇ ನಿಲ್ಲಿಸಿದ್ದರಂತೆ. ಹಾಗಾಗಿ ಅವರು ಹಣಕ್ಕಾಗಿ ಬೇರೆ ಬೇರೆ ಕೆಲಸಗಳನ್ನು ಮಾಡಬೇಕಾಗಿ ಬಂದಿತ್ತು. ಇದನ್ನೂ ಓದಿ : ಯಶ್ ಮುಂದಿನ ಚಿತ್ರ ಯಾರ ಜೊತೆ? ಹೊರಬಿತ್ತು ಬಿಗ್ ನ್ಯೂಸ್

FotoJet 3 7

ಕೆಲಸ ಹುಡುಕಿಕೊಂಡು ಗೋವಾಗೂ ಹೋಗಿದ್ದರಂತೆ ಮೋಹನ್, ಅಲ್ಲಿ ಕೆಲ ತಿಂಗಳ ಕಾಲ ಸೆಕ್ಯೂರಿಟಿ ಗಾಡ್ ಆಗಿಯೂ ಕೆಲಸ ಮಾಡಿದ್ದಾರೆ. ಫೋಟೋಗ್ರಾಫರ್ ಹಾಗೂ ಟ್ರೈಲರ್ ಅಂಗಡಿಯಲ್ಲಿ ಗುಂಡಿ ಹೊಲಿಯುವುದಕ್ಕೂ ಹೋಗಿದ್ದುಂಟು. ಹಾಗೇ ರಂಗಭೂಮಿಯತ್ತ ಆಸಕ್ತಿವಹಿಸಿ ಅದರತ್ತ ನಡೆದು ಹೋದರು. ಬಿ.ಸುರೇಶ ಸೇರಿದಂತೆ ಹಲವು ನಿರ್ದೇಶಕರ ಬಳಿ ನಾಟಕಗಳನ್ನೂ ಮಾಡಿದ್ದಾರೆ. ಇದನ್ನೂ ಓದಿ : ಹೆಸರಾಂತ ಹಾಸ್ಯ ಕಲಾವಿದ ಮೋಹನ್ ಜೂನೇಜ ಇನ್ನಿಲ್ಲ

FotoJet 4 4

ಮುಂದೆ ವಠಾರ ಧಾರಾವಾಹಿಯ ಮೂಲಕ ಸೀರಿಯಲ್ ಪ್ರಪಂಚಕ್ಕೂ ಕಾಲಿಟ್ಟರು. ವಠಾರ ಧಾರಾವಾಹಿ ಅವರಿಗೆ ಹೆಸರು ತಂದುಕೊಟ್ಟಿತ್ತು. ಅಲ್ಲಿಂದ ಅನೇಕ ಧಾರಾವಾಹಿಗಳಲ್ಲಿ ಅವರು ನಟಿಸಿದ್ದಾರೆ. ಸಾವಿರಾರು ಕಂತುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕಿರುತೆರೆಯಲ್ಲಿ ನಟಿಸುತ್ತಲೇ ಸಿನಿಮಾ ರಂಗದತ್ತಲೂ ಮುಖ ಮಾಡಿದರು.

FotoJet 2 13

ವಾಲ್ ಪೋಸ್ಟರ್ ಸಿನಿಮಾದ ಮೂಲಕ ಸಿನಿ ರಂಗಕ್ಕೆ ಎಂಟ್ರಿ ಕೊಟ್ಟ ಅವರು ಗಣೇಶ್ ನಟನೆಯ ಚೆಲ್ಲಾಟ ಚಿತ್ರದಿಂದ ಫೇಮಸ್ ಆದರು. ಜೋಗಿ, ಕಬ್ಜ, ಜೇಮ್ಸ್ ಹೀಗೆ ಐನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗಷ್ಟೇ ಬಿಡುಗಡೆ ಆಗಿರುವ ಕೆಜಿಎಫ್ ಚಿತ್ರದಲ್ಲೂ ಅವರು ಗುರುತಿಸಿಕೊಳ್ಳುವಂತಹ ಪಾತ್ರ ಮಾಡಿದ್ದರು. ಕಿರುತೆರೆ ಮತ್ತು ಸಿನಿಮಾ ಎರಡೂ ರಂಗದಲ್ಲೂ ಸಕ್ರೀಯರಾಗಿದ್ದರು.

Share This Article
Leave a Comment

Leave a Reply

Your email address will not be published. Required fields are marked *