ನವದೆಹಲಿ: ಆರ್‍ಎಸ್‍ಎಸ್ ಸಂಘಚಾಲಕ ಮೋಹನ್ ಭಾಗ್ವತ್ ಅವ್ರನ್ನ ಬಾಂಬ್ ಸ್ಫೋಟ ಪ್ರಕರಣದಲ್ಲಿ ಸಿಲುಕಿಸಲು 2014ರಲ್ಲಿ ಯುಪಿಎ ಸರ್ಕಾರ ರಾಷ್ಟ್ರೀಯ ತನಿಖಾ ತಂಡದ ಮೇಲೆ ಒತ್ತಡ ಹಾಕಿತ್ತು ಎಂದು ತಿಳಿದುಬಂದಿರುವುದಾಗಿ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
Advertisement
ಅಜ್ಮೀರ್ ಹಾಗೂ ಮೆಲೆಗಾಂವ್ ಬ್ಲಾಸ್ಟ್ ಬಳಿಕ ಹಿಂದೂ ಉಗ್ರರು ಎಂಬ ಪದವನ್ನ ಬಳಸಿದ್ದ ಯುಪಿಎ ಸರ್ಕಾರ, ಭಾಗವತ್ ಅವ್ರನ್ನ ಕಸ್ಟಡಿಗೆ ತೆಗೆದುಕೊಂಡು ವಿಚಾರಣೆಗೆ ಒಳಪಡಿಸುವಂತೆ ಒತ್ತಡ ಹಾಕಿತ್ತು ಎನ್ನಲಾಗಿದೆ. 2014ರ ಫೆಬ್ರವರಿಯಲ್ಲಿ ಕಾರವಾನ್ ಮ್ಯಾಗಜೀನ್‍ಗೆ ಸಂದರ್ಶನ ನೀಡಿದ್ದ ಬಾಂಬ್ ಸ್ಫೋಟದ ಆರೋಪಿ ಸ್ವಾಮಿ ಅಸೀಮಾನಂದ, ಬಾಂಬ್ ಸ್ಫೋಟ ನಡೆಸಲು ಭಾಗವತ್ ಮುಖ್ಯ ಪ್ರಚೋದಕರು ಅಂತ ಹೇಳಿದ್ದರು.
Advertisement
Advertisement
ಹೀಗಾಗಿ ಅಂದು ಗೃಹ ಸಚಿವರಾಗಿದ್ದ ಸುಶೀಲ್ ಕುಮಾರ್ ಶಿಂಧೆ ಹಾಗೂ ಕೆಲ ಕೆಂದ್ರ ಸಚಿವರು ಭಾಗವತ್ ಅವ್ರನ್ನ ಅಜ್ಮೀರ್ ಹಾಗೂ ಮಲೆಗಾಂವ್ ಬಾಂಬ್ ಸ್ಫೋಟದ ಪ್ರಕರಣದಲ್ಲಿ ವಿಚಾರಣೆ ನಡೆಸುವಂತೆ ಎನ್‍ಐಎ ಮೇಲೆ ಒತ್ತಡ ಹಾಕಿತ್ತು. ಆದ್ರೆ ಯುಪಿಎ ಸರ್ಕಾರದ ಒತ್ತಡಕ್ಕೆ ಮಣಿಯದಿದ್ದ ಎನ್‍ಐಎ, ಭಾಗವತ್ ವಿರುದ್ಧ ಯಾವುದೇ ಸಾಕ್ಷಿ ಇಲ್ಲದೇ ಇರೋದ್ರಿಂದ ಅವ್ರನ್ನ ವಿಚಾರಣೆ ನಡೆಸಲು ನಿರಾಕರಿಸಿತ್ತು. ಈ ಬಗ್ಗೆ ಪ್ರತಿಕ್ರಿಯೆ ನೀಡಿರೋ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್, ಬಹಿರಂಗವಾಗಿರೋ ಮಾಹಿತಿಯನ್ನ ಒಪ್ಪುತ್ತೇನೆ. ಎಲ್ಲಾ ಮಾಹಿತಿಗಳು ಹೊರಗೆ ಬರಬೇಕು ಅಂತ ಹೇಳಿದ್ದಾರೆ.
Advertisement