40 ಸಾವಿರ ವರ್ಷಗಳಿಂದ ಭಾರತೀಯರ ಡಿಎನ್‌ಎ ಒಂದೇ ಆಗಿದೆ: ಆರ್‌ಎಸ್‌ಎಸ್‌ ಮುಖ್ಯಸ್ಥ

Public TV
1 Min Read
Mohan Bhagwat

ಶಿಮ್ಲಾ: 40 ಸಾವಿರ ವರ್ಷಗಳಿಂದ ಭಾರತದ ಎಲ್ಲ ಜನರ ಡಿಎನ್‌ಎ ಒಂದೇ ಆಗಿದೆ ಎಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಅಭಿಪ್ರಾಯಪಟ್ಟರು.

is dna one in a million 327116

ಹಿಮಾಚಲ ಪ್ರದೇಶದ ಧರ್ಮಶಾಲದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಮಾತನಾಡಿದ ಅವರು, 40 ಸಾವಿರ ವರ್ಷಗಳಿಂದಲೂ ಭಾರತೀಯರ ಡಿಎನ್‌ಎ ಒಂದೇ ಆಗಿದೆ. ಪೂರ್ವಜರೆಲ್ಲ ನಮ್ಮ ಕುಲದವರು. ಆ ಪೂರ್ವಜರಿಂದಾಗಿ ನಮ್ಮ ದೇಶ ಅಭಿವೃದ್ಧಿ ಸಾಧಿಸಿದೆ. ನಮ್ಮ ಸಂಸ್ಕೃತಿ ಮುಂದುವರಿದಿದೆ ಎಂದು ತಿಳಿಸಿದರು. ಇದನ್ನೂ ಓದಿ: ಉಪಯೋಗಿ ಅಲ್ಲ, ನಿರುಪಯೋಗಿ: ಮೋದಿ ಬಣ್ಣನೆಗೆ ಅಖಿಲೇಶ್‌ ಯಾದವ್‌ ಲೇವಡಿ

ಬಿಜೆಪಿ ಕುರಿತು ಮಾತನಾಡಿದ ಅವರು, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವನ್ನು ಆರ್‌ಎಸ್‌ಎಸ್‌ ನಿಯಂತ್ರಿಸುತ್ತಿಲ್ಲ. ಬಿಜೆಪಿಯವರು ತಮ್ಮದೇ ಆದ ವಿಭಿನ್ನ ನಿಯಮಗಳು, ಕಾರ್ಯವಿಧಾನಗಳನ್ನು ಅಳವಡಿಸಿಕೊಂಡಿದ್ದಾರೆ. ನಮ್ಮ ಸಂಘದ ಆಲೋಚನೆ, ಸಂಸ್ಕೃತಿ ಪರಿಣಾಮಕಾರಿಯಾಗಿದೆ. ಸಂಘಕ್ಕೆ ಸೇರಿದ ಕೆಲವು ಮುಖ್ಯ ವ್ಯಕ್ತಿಗಳು ಸರ್ಕಾರದಲ್ಲಿ ಕೆಲಸ ಮಾಡುತ್ತಿರಬಹುದು. ಅವರು ಸಂಘಕ್ಕೆ ಋಣಿಯಾಗಿದ್ದಾರಷ್ಟೆ. ರಿಮೇಟ್‌ ಕಂಟ್ರೋಲ್‌ ಎನ್ನುವಂತೆ ಸರ್ಕಾರದ ಮೇಲೆ ಸಂಘದ ಯಾವುದೇ ನಿಯಂತ್ರಣವಿಲ್ಲ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಅಲಪ್ಪುಳದಲ್ಲಿ SDPI ನಾಯಕ, ಬಿಜೆಪಿ ಮುಖಂಡನ ಹತ್ಯೆ – ಸೆಕ್ಷನ್ 144 ಜಾರಿ

bhagwat

ಎಷ್ಟೋ ಸರ್ಕಾರಗಳು ಸಂಘದ ವಿರುದ್ಧ ಇದ್ದವು. ಸಂಘವು ಅಂತಹ ಎಲ್ಲ ಅಡೆತಡೆಗಳನ್ನು ದಾಳಿ 96 ವರ್ಷಗಳಿಂದಲೂ ನಡೆದುಕೊಂಡು ಬರುತ್ತಿದೆ. ಸಂಘದಲ್ಲಿರುವ ಸ್ವಯಂ ಸೇವಕರು ಸುಮ್ಮನೆ ಮನೆಯಲ್ಲಿ ಕೂರುವುದಿಲ್ಲ. ಸಮಾಜದಲ್ಲಿ ಅಗತ್ಯ ಇರುವ ಕಡೆ ನಮ್ಮ ಸ್ವಯಂಸೇವಕರು ಸದಾ ಇರುತ್ತಾರೆ. ಸಮಾಜದ ಜನರನ್ನು ತಮ್ಮೊಟ್ಟಿಗೆ ಕರೆದೊಯ್ಯುತ್ತಾರೆ. ಅವರು ಸ್ವತಂತ್ರರು ಎಂಬುದನ್ನು ಸಾಬೀತುಪಡಿಸಿದ್ದಾರೆಂದು ಭಾಗವತ್‌ ಬಣ್ಣಿಸಿದರು.

Share This Article
Leave a Comment

Leave a Reply

Your email address will not be published. Required fields are marked *