LatestLeading NewsMain PostNational

ಒಂದು ಟ್ವೀಟ್‌ಗೆ 12 ಲಕ್ಷ, ಇನ್ನೊಂದಕ್ಕೆ 2 ಕೋಟಿ: ಜುಬೇರ್‌ ವಿರುದ್ಧ ಯುಪಿ ಸರ್ಕಾರ ಸ್ಫೋಟಕ ಆರೋಪ

ನವದೆಹಲಿ: ಆಲ್ಟ್‌ ನ್ಯೂಸ್‌ ಸಂಸ್ಥಾಪಕ ಮೊಹಮ್ಮದ್‌ ಜುಬೇರ್‌ ಪತ್ರಕರ್ತನಲ್ಲ. ಟ್ವೀಟ್‌ಗಳನ್ನು ಮಾಡಿ 2 ಕೋಟಿ ರೂ. ಹಣವನ್ನು ಪಡೆದಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಉತ್ತರ ಪ್ರದೇಶ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಿದೆ.

ಉತ್ತರ ಪ್ರದೇಶದಲ್ಲಿ ತನ್ನ ವಿರುದ್ಧ ದಾಖಲಾಗಿರುವ ಅನೇಕ ಎಫ್‌ಐಆರ್‌ಗಳನ್ನು ರದ್ದುಗೊಳಿಸುವಂತೆ ಕೋರಿ ಜುಬೇರ್ ಸಲ್ಲಿಸಿರುವ ಅರ್ಜಿಯ ವಿಚಾರಣೆ ಇಂದು ನ್ಯಾ. ಚಂದ್ರಚೂಡ್‌ ನೇತೃತ್ವದ ಪೀಠದಲ್ಲಿ ನಡೆಯಿತು.

ವಿಚಾರಣೆ ನಡೆಸಿದ ಪೀಠ 6 ಪ್ರಕರಣದಲ್ಲಿ ಜಾಮೀನು ಮಂಜೂರು ಮಾಡಿದೆ. 20 ಸಾವಿರ ರೂ. ವೈಯಕ್ತಿಕ ಬಾಂಡ್‌, ತನಿಖೆಗೆ ಸಹಕರಿಸಬೇಕು ಎಂದು ಷರತ್ತು  ವಿಧಿಸಿದೆ.  ಜಾಮೀನು ಮಂಜೂರು ಮಾಡಿದ್ದರಿಂದ ಜುಬೇರ್‌ ಈಗ ಜೈಲಿನಿಂದ ಹೊರ ಬರಬಹುದಾಗಿದೆ.

ನಾವು ಎಫ್‌ಐಆರ್‌ ರದ್ದು ಮಾಡಿಲ್ಲ. ಎಫ್‌ಐಆರ್‌ ರದ್ದು ಸಂಬಂಧ ಜುಬೇರ್‌ ದೆಹಲಿ ಹೈಕೋರ್ಟ್‌ ಮೊರೆ ಹೋಗಬಹುದು ಎಂದು ನ್ಯಾ. ಚಂದ್ರಚೂಡ್‌ ನೇತೃತ್ವದ ಪೀಠ ಸೂಚಿಸಿತು.

ಜಾಮೀನು ನೀಡುವ ಸಂದರ್ಭದಲ್ಲಿ ಎಎಜಿ ಜುಬೇರ್‌ ಮುಂದೆ ಯಾವುದೇ ಟ್ವೀಟ್‌ ಮಾಡದಂತೆ ನಿರ್ದೇಶನ ನೀಡಬೇಕೆಂದು ಮನವಿ ಮಾಡಿದರು. ಇದಕ್ಕೆ ಪೀಠ, ಅವರು ಟ್ವೀಟ್ ಮಾಡುವುದನ್ನು ತಡೆಯಲು ಸಾಧ್ಯವಿಲ್ಲ. ಅವರ ವಾಕ್ ಸ್ವಾತಂತ್ರ್ಯದ ಹಕ್ಕನ್ನು ಚಲಾಯಿಸುವುದನ್ನು ನಾವು ತಡೆಯಲು ಸಾಧ್ಯವಿಲ್ಲ ಎಂದು ಹೇಳಿತು.

SUPREME COURT

ಜಾಮೀನು ಅರ್ಜಿ ವಿಚಾರಣೆ ನಡೆಸುತ್ತಿರುವ ಸಂದರ್ಭದಲ್ಲಿ ಯುಪಿ ಸರ್ಕಾರದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಗರಿಮಾ ಪ್ರಸಾದ್, ಜುಬೇರ್‌ ಅವರು1 ಟ್ವೀಟ್‌ ಮಾಡಿದ್ದಕ್ಕೆ 12 ಲಕ್ಷ ರೂ. ಪಡೆದಿದ್ದಾರೆ. ಮತ್ತು ಟ್ವೀಟ್‌ ಮಾಡಲೆಂದೇ 2 ಕೋಟಿ ರೂ. ಪಡೆದಿದ್ದಾರೆ ಎಂದು ಕೋರ್ಟ್‌ಗೆ ತಿಳಿಸಿದರು. ಇದನ್ನೂ ಓದಿ: ದಕ್ಷಿಣ ಆಫ್ರಿಕಾ ಟಿ 20 ಲೀಗ್‌ – ಎಲ್ಲಾ 6 ತಂಡಗಳು ಐಪಿಎಲ್‌ ಫ್ರಾಂಚೈಸಿ ಪಾಲು

ಉತ್ತರ ಪ್ರದೇಶ ಸರ್ಕಾರ ಹೇಳಿದ್ದೇನು?
ಆರೋಪಿ ಜುಬೇರ್ ಪತ್ರಕರ್ತನಲ್ಲ. ಅವರು ತನ್ನನ್ನು ತಾನು ಫ್ಯಾಕ್ಟ್‌ ಚೆಕ್ಕರ್‌ ಎಂದು ಕರೆದುಕೊಳ್ಳುತ್ತಾರೆ. ಆದರೆ ಅವರು ಸತ್ಯವನ್ನು ಪರಿಶೀಲಿಸುವ ಬದಲು, ವೈರಲ್ ಆಗುತ್ತಿರುವ ಮತ್ತು ವಿಷವನ್ನು ಹರಡುವ ಟ್ವೀಟ್‌ಗಳನ್ನು ಪೋಸ್ಟ್ ಮಾಡುತ್ತಾರೆ. ಈ ಟ್ವೀಟ್‌ಗಳಿಗೆ ಹಣವನ್ನು ಪಡೆದಿದ್ದಾರೆ ಮತ್ತು ದುರುದ್ದೇಶಪೂರಿತ ಟ್ವೀಟ್‌ಗಳಿಗೆ ಹೆಚ್ಚಿನ ಹಣವನ್ನು ಪಡೆಯುತ್ತಿದ್ದಾರೆ.

ಅವರು ಒಂದು ಟ್ವೀಟ್ ಪೋಸ್ಟ್ ಮಾಡಲು 12 ಲಕ್ಷ ರೂಪಾಯಿ ಮತ್ತು ಇನ್ನೊಂದಕ್ಕೆ 2 ಕೋಟಿ ರೂಪಾಯಿ ಪಡೆದಿದ್ದಾರೆ ಇದನ್ನು ತನಿಖೆಯಲ್ಲಿ ಒಪ್ಪಿಕೊಂಡಿದ್ದಾರೆ. ಟ್ವೀಟ್‌ಹೆಚ್ಚು ಪ್ರಚೋದನಕಾರಿಯಾದಷ್ಟು ಹೆಚ್ಚು ಹಣ ಜುಬೇರ್ ಗೆ ಸಂದಾಯವಾಗುತ್ತಿತ್ತು .

ಕೋಮು ಸೌಹಾರ್ದತೆಗೆ ದಕ್ಕೆ ಉಂಟುಮಾಡುವ ವೀಡಿಯೋಗಳು ಮತ್ತು ಭಾಷಣಗಳ ಲಾಭವನ್ನು ಜುಬೇರ್‌ ಪಡೆಯುತ್ತಿದ್ದಾರೆ. ಸೋಶಿಯಲ್ ಮಿಡಿಯಾದಲ್ಲಿ ಲಕ್ಷಗಟ್ಟಲೇ ಅನುಯಾಯಿಗಳನ್ನು ಹೊಂದಿದ್ದು, ಇಂತಹ ವಿಡಿಯೋ ಪೋಸ್ಟ್ ಮಾಡುವ ಮೂಲಕ ದೇಶಾದ್ಯಂತ ಜನರ ಭಾವನೆಗಳನ್ನು ಕೆರಳಿಸಲು ಪ್ರಯತ್ನ ಮಾಡುತ್ತಿದ್ದಾರೆ .

ಇದಕ್ಕೆ ಪ್ರತಿವಾದ ಮಂಡಿಸಿದ ಮೊಹಮ್ಮದ್ ಜುಬೇರ್ ಪರ ವಕೀಲವಕೀಲ ಗ್ರೋವರ್, ಜುಬೇರ್ ಫ್ಯಾಕ್ಟ್‌ ಚೆಕ್ಕರ್‌ ಆಗಿದ್ದು ತಪ್ಪು ಮಾಹಿತಿಗಳನ್ನು ಬಹಿರಂಗ ಮಾಡುತ್ತಾರೆ. ತಪ್ಪು ಮಾಹಿತಿಗಳನ್ನು ಸರಿಪಡಿಸಲು ಪೊಲೀಸರಿಗೆ ಟ್ಯಾಗ್ ಮಾಡುತ್ತಾರೆ. ಸದ್ಯ ಪತ್ರಕರ್ತರನ್ನು ಗುರಿಯಾಗಿಸುವ ಬೆಳವಣಿಗೆ ನಡೆದಿದೆ. ಅವರಿಗೆ ಜೀವ ಬೆದರಿಕೆ ಇದೆ. ಹೀಗಾಗಿ ನ್ಯಾಯಾಲಯ ರಕ್ಷಣೆ ನೀಡಬೇಕು ಎಂದು ಮನವಿ ಮಾಡಿದರು‌.

Live Tv

Leave a Reply

Your email address will not be published. Required fields are marked *

Back to top button