ಅವನು ತುಂಬಾ ಅದೃಷ್ಟಶಾಲಿ- ಅಪಘಾತಕ್ಕೀಡಾದವನನ್ನು ರಕ್ಷಿಸಿದ ಶಮಿ!

Public TV
1 Min Read
SHAMI 1

ನವದೆಹಲಿ: ಟೀಂ ಇಂಡಿಯಾದ (Team India) ಫಾಸ್ಟ್ ಬೌಲರ್ ಮೊಹಮ್ಮದ್ ಶಮಿಯವರು (Mohammad Shami) ಅಪಘಾತಕ್ಕೀಡಾದ ವ್ಯಕ್ತಿಯನ್ನು ರಕ್ಷಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಈ ಘಟನೆ ನೈನಿತಾಲ್‍ನಲ್ಲಿ ನಡೆದಿದ್ದು, ಇದರ ವೀಡಿಯೋವನ್ನು ಶಮಿಯವರು ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಇನ್‍ಸ್ಟಾಗ್ರಾಮ್‍ನಲ್ಲಿ (Instagram) ವೀಡಿಯೋವನ್ನು ಪೋಸ್ಟ್ ಮಾಡಿದ್ದು, ಅದರಲ್ಲಿ ಶಮಿಯವರು ರಸ್ತೆ ಅಪಘಾತಕ್ಕೊಳಗಾದ ಸಂತ್ರಸ್ತರಿಗೆ ಸಹಾಯ ಮಾಡುವುದನ್ನು ಕಾಣಬಹುದಾಗಿದೆ. ಅಲ್ಲದೆ, ಅವನು ತುಂಬಾ ಅದೃಷ್ಟಶಾಲಿ. ದೇವರು ಅವನಿಗೆ 2 ನೇ ಜೀವನವನ್ನು ಕೊಟ್ಟನು. ಅವರ ಕಾರು ನೈನಿತಾಲ್ ಬಳಿಯ ಬೆಟ್ಟದ ರಸ್ತೆಯಿಂದ ನನ್ನ ಕಾರಿನ ಮುಂದೆ ಬಿದ್ದಿತು. ನಾವು ಅವರನ್ನು ಸುರಕ್ಷಿತವಾಗಿ ರಕ್ಷಣೆ ಮಾಡಿದ್ದೇವೆ. ಇಂದು ಒಬ್ಬರ ಜೀವವನ್ನು ರಕ್ಷಿಸಿದ ಖುಷಿ ನನಗಿದೆ ಎಂದು ಶಮಿ ವೀಡಿಯೋ ಜೊತೆಗೆ ಬರೆದುಕೊಂಡಿದ್ದಾರೆ.

ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ (World Cup Cricket) ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾ (Team India) ಸೋತ ಬಳಿಕ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಡ್ರೆಸ್ಸಿಂಗ್‌ ರೂಮ್‌ಗೆ (Dressing Room) ತೆರಳಿ ಆಟಗಾರರಿಗೆ ಸಮಾಧಾನ ಹೇಳಿದ್ದರು. ಪ್ರಧಾನಿ ಡ್ರೆಸ್ಸಿಂಗ್‌ ರೂಮ್‌ಗೆ ಬಂದ ವಿಚಾರವನ್ನು ಬೌಲರ್‌ ಮೊಹಮ್ಮದ್‌ ಶಮಿ ಮತ್ತು ಆಲ್‌ರೌಂಡರ್‌ ರವೀಂದ್ರ ಜಡೇಜಾ (Ravindra Jadeja) ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿ ತಿಳಿಸಿದ್ದರು.

ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ ಶಮಿ, ದುರದೃಷ್ಟವಶಾತ್ ನಿನ್ನೆಯ ದಿನ ನಮ್ಮದಾಗಿರಲಿಲ್ಲ. ಪಂದ್ಯಾವಳಿಯುದ್ದಕ್ಕೂ ನಮ್ಮ ತಂಡ ಮತ್ತು ನನ್ನನ್ನು ಬೆಂಬಲಿಸಿದ್ದಕ್ಕಾಗಿ ನಾನು ಎಲ್ಲಾ ಭಾರತೀಯರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ವಿಶೇಷವಾಗಿ ಡ್ರೆಸ್ಸಿಂಗ್ ಕೋಣೆಗೆ ಬಂದು ನಮ್ಮ ಉತ್ಸಾಹವನ್ನು ಹೆಚ್ಚಿಸಿದ್ದಕ್ಕೆ ಪ್ರಧಾನಿ ಮೋದಿ ಅವರಿಗೆ ಧನ್ಯವಾದ ಹೇಳುತ್ತೇನೆ. ನಾವು ಮತ್ತೆ ಪುಟಿದೇಳುತ್ತೇವೆ ಎಂದು ಬರೆದುಕೊಂಡಿದ್ದರು.

Share This Article