ದುಬೈ: ಐಸಿಸಿ ಏಕದಿನ ಕ್ರಿಕೆಟ್‌ನಲ್ಲಿ ಕಡಿಮೆ ಎಸೆತಗಳಲ್ಲಿ 200 ವಿಕೆಟ್ ಪಡೆದ ದಾಖಲೆಯನ್ನು ಭಾರತೀಯ ಬೌಲರ್ ಮೊಹಮ್ಮದ್ ಶಮಿ (Mohammed Shami) ಬರೆದಿದ್ದಾರೆ. ಅಷ್ಟೇ ಅಲ್ಲದೇ, ಮಿಚೆಲ್ ಸ್ಟಾರ್ಕ್ ವಿಶ್ವ ದಾಖಲೆಯನ್ನೂ ಪುಡಿಗಟ್ಟಿದ್ದಾರೆ.
ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಬಾಂಗ್ಲಾದೇಶ ವಿರುದ್ಧದ ಚಾಂಪಿಯನ್ಸ್ ಟ್ರೋಫಿಯ ಪಂದ್ಯದಲ್ಲಿ ವೇಗಿ ಶಮಿ 5 ವಿಕೆಟ್ ಕಿತ್ತು ಈ ವಿಶೇಷ ಸಾಧನೆ ಮಾಡಿದ್ದಾರೆ. 2023 ರಲ್ಲಿ ನಡೆದ ODI ವಿಶ್ವಕಪ್ ಫೈನಲ್ ನಂತರ ತಮ್ಮ ಮೊದಲ ICC ಟೂರ್ನಮೆಂಟನ್ನು ಇಂದು ಶಮಿ ಆಡಿದರು. ಇದನ್ನೂ ಓದಿ: ಶಮಿಗೆ 5 ವಿಕೆಟ್; ಬಾಂಗ್ಲಾ ಆಲೌಟ್ – ಟೀಂ ಇಂಡಿಯಾಗೆ 229 ರನ್‌ಗಳ ಗುರಿ
Advertisement
Advertisement
ಏಕದಿನ ಕ್ರಿಕೆಟ್‌ನಲ್ಲಿ ವೇಗವಾಗಿ 200 ವಿಕೆಟ್‌ಗಳನ್ನು ಕಿತ್ತ ವಿಶ್ವ ದಾಖಲೆ ಮಿಚೆಲ್ ಸ್ಟಾರ್ಕ್ ಹೆಸರಿನಲ್ಲಿತ್ತು. ಆ ರೆಕಾರ್ಡ್‌ನ್ನು ಶಮಿ ಮುರಿದಿದ್ದಾರೆ. ಗುರುವಾರ ನಡೆದ ಪಂದ್ಯದ 43 ನೇ ಓವರ್‌ನಲ್ಲಿ ಬಾಂಗ್ಲಾದೇಶದ ಜಾಕರ್ ಅಲಿಯನ್ನು 68 ರನ್‌ಗಳಿಗೆ ಔಟ್ ಮಾಡುವ ಮೂಲಕ ಶಮಿ ಈ ಮೈಲಿಗಲ್ಲು ಸಾಧಿಸಿದ್ದಾರೆ.
Advertisement
ವೇಗಿ ಶಮಿ 104 ಏಕದಿನ ಪಂದ್ಯಗಳಲ್ಲಿ 200 ವಿಕೆಟ್‌ಗಳನ್ನು ಪಡೆದಿದ್ದಾರೆ. ಭಾರತದ ಪರ ಈ ಹಿಂದಿನ ದಾಖಲೆ ಹೊಂದಿದ್ದ ಅಗರ್ಕರ್ 133 ಪಂದ್ಯಗಳಿಗೆ ಈ ಸಾಧನೆ ಮಾಡಿದ್ದರು. ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್ ಎಡಗೈ ವೇಗಿ 102 ಏಕದಿನ ಪಂದ್ಯಗಳಲ್ಲಿ ಈ ಮೈಲಿಗಲ್ಲು ತಲುಪಿದ್ದಾರೆ. ಇದನ್ನೂ ಓದಿ: Champions Trophy 2025 | ಇಂದು ಭಾರತ-ಬಾಂಗ್ಲಾ ಮುಖಾಮುಖಿ – ಹಿಟ್‌ಮ್ಯಾನ್ ಪಡೆಗೆ ಗೆಲುವಿನ ತವಕ
Advertisement
ಕಡಿಮೆ ಎಸೆತಗಳಿಗೆ 200 ವಿಕೆಟ್ ಕಿತ್ತ ಬೌಲರ್‌ಗಳು
ಮೊಹಮ್ಮದ್ ಶಮಿ: 5126 ಬಾಲ್
ಮಿಚೆಲ್ ಸ್ಟಾರ್ಕ್: 5240
ಸಕ್ಲೇನ್ ಮುಷ್ತಾಕ್: 5451
ಬ್ರೆಟ್ ಲೀ: 5640
ಟ್ರೆಂಟ್ ಬೌಲ್ಟ್: 5783
ವಕಾರ್ ಯೂನಿಸ್: 5883