ಢಾಕಾ: ಭಾರತ (India) ಹಾಗೂ ಬಾಂಗ್ಲಾದೇಶ (Bangladesh) ನಡುವಿನ ಏಕದಿನ ಸರಣಿ ಆರಂಭಕ್ಕೂ ಮುನ್ನ ಬಾಂಗ್ಲಾದ ನಾಯಕ ತಮೀಮ್ ಇಕ್ಬಾಲ್ (Tamim Iqbal) ಮತ್ತು ಭಾರತದ ಬೌಲರ್ ಮೊಹಮ್ಮದ್ ಶಮಿ (Mohammed Shami) ಗಾಯಗೊಂಡು ಸರಣಿಯಿಂದ ಹೊರಬಿದ್ದಿದ್ದಾರೆ.
Advertisement
ತಮೀಮ್ ಇಕ್ಬಾಲ್ ಬಾಂಗ್ಲಾದೇಶದ ನಾಯಕರಾಗಿದ್ದೂ ಸರಣಿ ಆರಂಭಕ್ಕೂ ಮುನ್ನ ಅಭ್ಯಾಸದ ವೇಳೆ ಗಾಯಗೊಂಡು ಸರಣಿಯಿಂದ ಹೊರಬಿದ್ದಿದ್ದಾರೆ. ಟೆಸ್ಟ್ (Test) ಸರಣಿ ವೇಳೆ ತಂಡದೊಂದಿಗೆ ಸೇರಿಕೊಳ್ಳುವ ಸಾಧ್ಯತೆ ಇದೆ ಎಂದು ತಿಳಿಸಿದೆ. ಇದನ್ನೂ ಓದಿ: ಐಪಿಎಲ್‍ಗೆ ನಿವೃತ್ತಿ ಘೋಷಿಸಿದ ಬ್ರಾವೋ – ಚೆನ್ನೈ ತಂಡದಲ್ಲಿ ಮುಂದುವರಿಕೆ
Advertisement
Advertisement
ತಮೀಮ್ ಇಕ್ಬಾಲ್ ಹೊರಬಿದ್ದ ಬಳಿಕ ಇದೀಗ ಭಾರತಕ್ಕೂ ಗಾಯ ಸಮಸ್ಯೆ ಕಾಡುತ್ತಿದ್ದು, ವೇಗಿ ಮೊಹಮ್ಮದ್ ಶಮಿ ಕೈಗೆ ಗಾಯಮಾಡಿಕೊಂಡು ಸರಣಿಯಿಂದ ಹೊರಗುಳಿದಿದ್ದಾರೆ. ಶಮಿ ಟಿ20 ವಿಶ್ವಕಪ್ (T20 World Cup) ವೇಳೆ ಗಾಯದಿಂದ ಚೇತರಿಕೆ ಕಂಡು ತಂಡ ಸೇರಿಕೊಂಡಿದ್ದರು. ಇದೀಗ ಮತ್ತೆ ಗಾಯಗೊಂಡು ಹೊರನಡೆದಿದ್ದಾರೆ. ಏಕದಿನ ಸರಣಿ (ODI) ಜೊತೆ ಟೆಸ್ಟ್ ಸರಣಿಯಿಂದಲು ಶಮಿ ಹೊರಬೀಳುವ ಸಾಧ್ಯತೆ ಇದೆ. ಈಗಾಗಲೇ ಪುನರ್‌ಶ್ಚೇತನ ಶಿಬಿರಕ್ಕಾಗಿ ಬೆಂಗಳೂರಿಗೆ ಎನ್‍ಸಿಎಗೆ ಕಳುಹಿಸಲು ಟೀಂ ಮ್ಯಾನೇಚ್‍ಮೆಂಟ್ ಪ್ಲಾನ್ ಹಾಕಿಕೊಂಡಿದೆ ಎಂದು ವರದಿಯಾಗಿದೆ. ಶಮಿ ಬದಲು ಉಮ್ರಾನ್ ಮಲಿಕ್‌ರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಇದನ್ನೂ ಓದಿ: ದೇವರ ನಾಡಲ್ಲಿ ಐಪಿಎಲ್ ಮಿನಿ ಹರಾಜು – ಭಾರತದ 714 ಸೇರಿ ಒಟ್ಟು 991 ಆಟಗಾರರು ನೋಂದಣಿ
Advertisement
ಬಾಂಗ್ಲಾದೇಶ ಮತ್ತು ಭಾರತ ನಡುವೆ 3 ಏಕದಿನ ಪಂದ್ಯ ಮತ್ತು 2 ಟೆಸ್ಟ್ ಪಂದ್ಯಗಳ ಸರಣಿ ನಡೆಯಲಿದೆ. ಡಿ.4 ರಿಂದ ಏಕದಿನ ಸರಣಿ ಆರಂಭವಾಗುತ್ತಿದೆ. ಡಿ.14 ರಿಂದ ಟೆಸ್ಟ್ ಸರಣಿ ಆರಂಭವಾಗಲಿದೆ.