CricketLatestMain PostSports

ಐಪಿಎಲ್‍ಗೆ ನಿವೃತ್ತಿ ಘೋಷಿಸಿದ ಬ್ರಾವೋ – ಚೆನ್ನೈ ತಂಡದಲ್ಲಿ ಮುಂದುವರಿಕೆ

ಚೆನ್ನೈ: ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ತಂಡದಲ್ಲಿದ್ದ ಸ್ಟಾರ್ ಆಲ್‍ರೌಂಡರ್ ಡ್ವೇನ್ ಬ್ರಾವೋ (Dwayne Bravo) ಐಪಿಎಲ್‍ಗೆ (IPL) ನಿವೃತ್ತಿ ಘೋಷಿಸಿದ್ದಾರೆ. ಆದರೂ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಹೊಸ ರೋಲ್‍ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಐಪಿಎಲ್‍ಗೆ ನಿವೃತ್ತಿ ಘೋಷಿಸಿದ ಬ್ರಾವೋ - ಚೆನ್ನೈ ತಂಡದಲ್ಲಿ ಮುಂದುವರಿಕೆ

2022ರ ಐಪಿಎಲ್‍ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ಪರ ಆಡಿದ್ದ ಬ್ರಾವೋ ಅವರನ್ನು 2023ರ ಐಪಿಎಲ್ ಮಿನಿ ಹರಾಜಿಗೆ (IPLAuction) ಸಿಎಸ್‍ಕೆ ತಂಡ ಬಿಟ್ಟುಕೊಟ್ಟಿತ್ತು. ಇದೀಗ ಬ್ರಾವೋ ಐಪಿಎಲ್‍ಗೆ ನಿವೃತ್ತಿ ಘೋಷಿಸಿದ್ದಾರೆ. ಈ ಬೆನ್ನಲ್ಲೇ ಸಿಎಸ್‍ಕೆ ತಂಡ ಬ್ರಾವೋರನ್ನು ತಂಡದ ನೂತನ ಬೌಲಿಂಗ್ ಕೋಚ್ ಆಗಿ ಆಯ್ಕೆ ಮಾಡಿದೆ. ಇದನ್ನೂ ಓದಿ: ರಿಕಿ ಪಾಂಟಿಂಗ್ ಆರೋಗ್ಯದಲ್ಲಿ ಏರುಪೇರು – ಆಸ್ಪತ್ರೆಗೆ ದಾಖಲು

ಐಪಿಎಲ್‍ಗೆ ನಿವೃತ್ತಿ ಘೋಷಿಸಿದ ಬ್ರಾವೋ - ಚೆನ್ನೈ ತಂಡದಲ್ಲಿ ಮುಂದುವರಿಕೆ

ನಾನು ಈವರೆಗೆ ಸಿಎಸ್‍ಕೆ ಪರ ಆಡಿದ್ದೆ ಇದೀಗ ಹೊಸ ಜವಾಬ್ದಾರಿಯೊಂದಿಗೆ ಕಾಣಿಸಿಕೊಳ್ಳುತ್ತಿದ್ದೇನೆ. ಈವರೆಗೆ ಇದ್ದ ಹಾಗೆ ತಂಡದ ಜೊತೆ ಇರುತ್ತೇನೆ. ಆದರೆ ನಾನು ಮೈದಾನದ ಒಳಭಾಗದಲ್ಲಿ ಮಾತ್ರ ಕಾಣಿಸಿಕೊಳ್ಳುವುದಿಲ್ಲ ಅಷ್ಟೇ ಎಂದಿದ್ದಾರೆ. ಇದನ್ನೂ ಓದಿ: ದೇವರ ನಾಡಲ್ಲಿ ಐಪಿಎಲ್ ಮಿನಿ ಹರಾಜು – ಭಾರತದ 714 ಸೇರಿ ಒಟ್ಟು 991 ಆಟಗಾರರು ನೋಂದಣಿ

KKR

ಬ್ರಾವೋ 161 ಪಂದ್ಯಗಳಿಂದ 183 ವಿಕೆಟ್‍ಗಳೊಂದಿಗೆ ಐಪಿಎಲ್‍ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ದಾಖಲೆ ವೀರರಾಗಿದ್ದಾರೆ. ಆಲ್‍ರೌಂಡರ್ ಆಗಿ ಬ್ರಾವೋ 130ರ ಸ್ಟ್ರೈಕ್‍ರೇಟ್‍ನಲ್ಲಿ ಈವರೆಗೆ 1,560 ರನ್ ಬಾರಿಸಿದ್ದು, ಚೆನ್ನೈ ಸೂಪರ್ ಕಿಂಗ್ಸ್‌ನ ಅನೇಕ ರೋಚಕ ಜಯಗಳಲ್ಲಿ ಬ್ರಾವೋ ಪ್ರಮುಖ ಪಾತ್ರ ವಹಿಸಿದ್ದಾರೆ.

ಬ್ರಾವೋ 2011 ರಿಂದ ಸಿಎಸ್‍ಕೆ ಪರ ಆಡುತ್ತಿದ್ದು, ಐಪಿಎಲ್‍ನಲ್ಲಿ 2011, 2018 ಮತ್ತು 2021ರಲ್ಲಿ ಮತ್ತು 2014ರ ಚಾಂಪಿಯನ್ಸ್ ಲೀಗ್ ಚಾಂಪಿಯನ್ ಆಗಿದ್ದಾಗ ಬ್ರಾವೋ ತಂಡದ ಪ್ರಮುಖ ಅಸ್ತ್ರವಾಗಿದ್ದರು. ಜೊತೆಗೆ 2013 ಮತ್ತು 2015ರಲ್ಲಿ ಎರಡು ಬಾರಿ ಸಿಎಸ್‍ಕೆ ಪರ ಅತಿ ಹೆಚ್ಚು ವಿಕೆಟ್ ಕಿತ್ತು ಪರ್ಪಲ್ ಕ್ಯಾಪ್ ಪಡೆದಿದ್ದರು. ಬ್ರಾವೋ ಈವರೆಗೆ ಚೆನ್ನೈ ಸೂಪರ್ ಕಿಂಗ್ಸ್ ಪರ 144 ಪಂದ್ಯಗಳನ್ನು ಆಡಿ 168 ವಿಕೆಟ್ ಮತ್ತು 1,556 ರನ್ ಸಿಡಿಸಿದ್ದಾರೆ. ಇದಲ್ಲದೆ ಬ್ರಾವೋ ಅದ್ಭುತ ಫೀಲ್ಡರ್ ಆಗಿದ್ದೂ ಕ್ಯಾಚ್ ಹಿಡಿದ ಬಳಿಕ ಮೈದಾನಲ್ಲೇ ನೃತ್ಯದ ಮೂಲಕ ರಂಜಿಸುತ್ತಿದ್ದರು.

Live Tv

Leave a Reply

Your email address will not be published. Required fields are marked *

Back to top button