ಬೆಂಗಳೂರು: ಶ್ರೀಕಿ ನನಗೆ ಪರಿಚಯ ಇರುವುದು ನಿಜ ಎಂದು ಶಾಸಕ ಹ್ಯಾರೀಸ್ ಪುತ್ರ ಮೊಹಮ್ಮದ್ ನಲಪಾಡ್ ಹೇಳಿದ್ದಾರೆ.
ಬಿಟ್ ಕಾಯಿನ್ ವಿಚಾರವಾಗಿ ಶ್ರೀಕಿಗೂ ಹ್ಯಾರೀಸ್ ಪುತ್ರರಿಗೂ ನಂಟಿದೆ ಎಂಬುದರ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದರು. ಫರ್ಜಿ ಕೆಫೆ ಕೇಸ್ ಸಂಬಂಧ ಅದೊಂದು ಲೇಟರ್ ಮೇಲೆ ನೀವು ಮಾತನಾಡ್ತಾ ಇದ್ದೀರಾ. ಪ್ರೈಮಿನಿಸ್ಟರ್ ಗೆ ಬರೆದಿರೋ ಪತ್ರದಲ್ಲಿ ಬೇರೆಯವರ ಹೆಸರು ಇದೆ ಅದನ್ನ ಯಾಕೆ ಹೇಳ್ತಾ ಇಲ್ಲಾ ನೀವು..?. ಫರ್ಜಿ ಕೆಫೆ ಕೇಸ್ ನಡೆದಾಗ ಶ್ರೀಕಿ ನನ್ನ ಜೊತೆ ಇದ್ದ. ಶ್ರೀಕಿ ನನಗೆ ಗೊತ್ತಿಲ್ಲ ಅನ್ನೋದು ತಪ್ಪು. ಶ್ರೀಕಿ ನನ್ನ ತಮ್ಮನಿಗೆ ಗೊತ್ತಿದ್ದ. ಅದನ್ನ ನಾವು ಮರೆಮಾಚೋದಕ್ಕೆ ಆಗಲ್ಲ ಎಂದರು.
Advertisement
Advertisement
ಹೇಳಿಕೆಯಲ್ಲಿ ನಲಪಾಡ್ ಹಾಗೂ ಉಮರ್ ನಲಪಾಡ್ ಹ್ಯಾಕ್ ಮಾಡಿದ್ದಾರೆ ಅಂತ ಎಲ್ಲಿಯಾದರೂ ಇದೆಯಾ..? ಆ ಸ್ಟೆಟ್ಮೆಂಟ್ ನಲ್ಲಿ ಮನೀಶ್ ಬಗ್ಗೆ ಬರೆದಿದ್ದಾರೆ. ಲೇಟರ್ ನಲ್ಲಿ ಶ್ರೀಕಿಯನ್ನು ಬಳಸಿಕೊಂಡು ಬೇರೆ ಬೇರೆಯವರು ಹ್ಯಾಕ್ ಮಾಡಿದ್ದಾರೆ ಅಂತ ಇದೆ. ಮಾಜಿ ಮಖ್ಯಮಂತ್ರಿಗಳ ಮಗನ ಹೆಸರಿದೆ. ಮುಖ್ಯಮಂತ್ರಿಗಳ ಹೆಸರಿದೆ. ದೊಡ್ಡ ದೊಡ್ಡ ಪೊಲೀಸ್ ಅಧಿಕಾರಿಗಳ ಹೆಸರಿದೆ. ಯಾಕೆ ತೆಗೆದುಕೊಳ್ತಿಲ್ಲ ಯಾಕೆ ನೀವು ಉಮರ್ ನಲಪಾಡ್ ಹಾಗೂ ನನ್ನ ಹೆಸರನ್ನು ಮಾತ್ರ ಬಳಸಿಕೊಳ್ಳುತ್ತಿದ್ದೀರಾ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಹ್ಯಾಕರ್ ಶ್ರೀಕಿಯಿಂದ 9 ಕೋಟಿ ಮೌಲ್ಯದ 31 ಬಿಟ್ ಕಾಯಿನ್ ಜಪ್ತಿ
Advertisement
Advertisement
ಸಿಸಿಬಿ ಮುಂದೆ ಹೇಳಿಕೆ ಕೊಟ್ಟಿರುವ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ, ನಾನು ಸ್ವಲ್ಪವೂ ಹಣವಿಲ್ಲದೆ ಎಲ್ಲೆಲ್ಲೋ ಸುತ್ತಾಡ್ತಿದ್ದೆ. ನೆಟ್‍ವರ್ಕ್ ಹೆಚ್ಚಿಸಿಕೊಳ್ಳೋಕೆ ಸ್ವಿಟ್ಜರ್‍ಲ್ಯಾಂಡ್, ಸ್ವೀಡನ್, ಫ್ರಾನ್ಸ್, ಜರ್ಮನಿ ಸುತ್ತಾಡಿದೆ. ಒಮ್ಮೆ ‘ಬಿಟ್ ಫ್ಲಿಕ್ಸ್’ ಅನ್ನೋ ಸರ್ವರ್ ಹ್ಯಾಕ್ ಮಾಡಿದ್ದೆ. 2015ರಲ್ಲಿ ಭಾರತಕ್ಕೆ ವಾಪಸ್ ಬಂದೆ. 2015ರಲ್ಲಿ ನನ್ನ ಸ್ನೇಹಿತ ಮನಿಶ್ ಮೂಲಕ ಉಮರ್ ನಲಪಾಡ್ ಜೊತೆ ಸ್ನೇಹವಾಯಿತು. 2018ರಿಂದ ಪ್ರತಿದಿನ ಕೂಡ ಪಾರ್ಟಿಗಳಲ್ಲಿ ಭಾಗಿ ಆಗ್ತಿದ್ವಿ. ಉಮರ್ ನಲಪಾಡ್, ಅಭಿಷೇಕ್, ಗ್ಯಾರಿ ಜೊತೆ ಚಂಡೀಗಢ, ಜೈಪುರ ಸುತ್ತಾಡಿದ್ದೆ ಎಂದು ಹೇಳಿರುವುದು ಬಯಲಾಗಿದೆ. ಇದನ್ನೂ ಓದಿ: ಶ್ರೀಕಿ ಹ್ಯಾಕರ್ ಅಂತ ಗೊತ್ತಿರಲಿಲ್ಲ, ಕಾಲೇಜಿನಲ್ಲಿ ಪರಿಚಯ ಅಷ್ಟೇ: ಉಮರ್ ನಲಪಾಡ್
ಇತ್ತ ಮೊಹಮ್ಮದ್ ನಲಪಾಡ್ ಜೊತೆಗೂ ಶ್ರೀಕಿ ನಂಟು ಹೊಂದಿದ್ದ. 2018ರ ಫರ್ಜಿ ಕೆಫೆ ಗಲಾಟೆಯಲ್ಲಿ ನಲಪಾಡ್ ಆರೋಪಿ ನಂಬರ್ 1 ಆಗಿದ್ದ. ಇದೇ ಗಲಾಟೆ ಪ್ರಕರಣದಲ್ಲಿ ಶ್ರೀಕೃಷ್ಣ ನಂಬರ್ 3 ಆರೋಪಿಯಾಗಿದ್ದ. ಈ ಪ್ರಕಾರ ನಲಪಾಡ್ ಬ್ರದರ್ಸ್-ಶ್ರೀಕಿ ಸ್ನೇಹಿತರಾಗಿದ್ದಾರೆ. ಆದರೆ ಬಿಟ್ ಕಾಯಿನ್ ವ್ಯವಹಾರದಲ್ಲಿ ನಲಪಾಡ್ ಬ್ರದರ್ಸ್ ಹೆಸರಿಲ್ಲ, ಶ್ರೀಕಿ ಎಲ್ಲೂ ಹೇಳಿಲ್ಲ. ಆದರೆ ಸಿಸಿಬಿ ಮುಂದೆ ನಲಪಾಡ್ ಬದ್ರರ್ಸ್ ನನ್ನ ಫ್ರೆಂಡ್ಸ್ ಅಷ್ಟೇ ಅಂತ ಶ್ರೀಕಿ ಹೇಳಿದ್ದಾನೆ.