ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಆಸ್ತಿ ವಿವರ ಘೋಷಿಸಿದ್ದಾರೆ. ಮೋದಿ ಅವರ ಚರಾಸ್ತಿಯು ಒಂದು ವರ್ಷದಲ್ಲಿ 26.13 ಲಕ್ಷದಷ್ಟು ಏರಿಕೆಯಾಗಿದ್ದು, ಅವರ ಬಳಿ ಒಟ್ಟು 2.23 ಕೋಟಿ ಮೌಲ್ಯದ ಆಸ್ತಿ ಇದೆ.
ಗುಜರಾತ್‌ನ ಗಾಂಧಿನಗರದಲ್ಲಿರುವ ಭೂಮಿಯನ್ನು ದಾನ ಮಾಡಿರುವುದರಿಂದ ಅವರ ಬಳಿ ಯಾವುದೇ ಸ್ಥಿರಾಸ್ತಿ ಇಲ್ಲ. 2022ರ ಮಾರ್ಚ್ 31ರ ವೇಳೆಗೆ ಮೋದಿ ಅವರ ಒಟ್ಟು ಆಸ್ತಿ ಮೌಲ್ಯ 2,23,82,504 ರೂ. ಆಗಿದೆ. ಇದನ್ನೂ ಓದಿ: ಶ್ರೀಲಂಕಾದಲ್ಲಿ 50 ಪೆಟ್ರೋಲ್ ಬಂಕ್ ತೆರೆಯಲಿದೆ ಐಒಸಿ
Advertisement
Advertisement
ಕಳೆದ ವರ್ಷ ಪ್ರಧಾನಿ ಮೋದಿ ಬಳಿಯಿದ್ದ ನಗದು ಮೊತ್ತ 36,900 ರೂ.ನಿಂದ 35,250 ರೂ.ಗೆ ಇಳಿದಿತ್ತು. 2021ರ ಮಾರ್ಚ್ 31, 2021 ರವರೆಗೆ ಅವರ ಬ್ಯಾಂಕ್ ಖಾತೆಯಲ್ಲಿ 1,52,480 ರೂ. ಇದ್ದ ಹಣ 46,555 ರೂ.ಗೆ ಕಡಿಮೆಯಾಗಿದೆ ರಿಂದ ಕಡಿಮೆಯಾಗಿದೆ.
Advertisement
ಮೋದಿ ಅವರು ಯಾವುದೇ ಬಾಂಡ್, ಷೇರು ಅಥವಾ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಿಲ್ಲ. ವಾಹನ ಕೂಡ ಹೊಂದಿಲ್ಲ. 1.73 ಲಕ್ಷ ರೂ. ಮೌಲ್ಯದ ನಾಲ್ಕು ಚಿನ್ನದ ಉಂಗುರಗಳನ್ನು ಹೊಂದಿದ್ದಾರೆ ಎಂದು ಆಸ್ತಿ ವಿವರದಲ್ಲಿ ಉಲ್ಲೇಖಿಸಲಾಗಿದೆ. ಇದನ್ನೂ ಓದಿ: ಬಿಜೆಪಿ- ಜೆಡಿಯು ಮೈತ್ರಿಗೆ ಗುಡ್‌ಬೈ – ನಿತೀಶ್ ರಾಜೀನಾಮೆಗೆ ಕಾರಣ ಏನು?
Advertisement
ಅಟಲ್ ಬಿಹಾರಿ ವಾಜಪೇಯಿ ಅವರ ಅವಧಿಯಲ್ಲಿ, ಸಾರ್ವಜನಿಕ ಜೀವನದಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳಲು ಪ್ರತಿ ಹಣಕಾಸು ವರ್ಷದ ಅಂತ್ಯದೊಳಗೆ ಎಲ್ಲಾ ಕೇಂದ್ರ ಸಚಿವರು ತಮ್ಮ ಆಸ್ತಿಯನ್ನು ಘೋಷಿಸಲು ನಿರ್ಧರಿಸಲಾಗಿತ್ತು.