LatestMain PostNational

ಶ್ರೀಲಂಕಾದಲ್ಲಿ 50 ಪೆಟ್ರೋಲ್‌ ಬಂಕ್‌ ತೆರೆಯಲಿದೆ ಐಒಸಿ

ಕೊಲಂಬೋ: ದೇಶದಲ್ಲಿ 50 ಬಂಕ್‌ಗಳನ್ನು ತೆರೆಯಲು ಇಂಡಿಯನ್‌ ಆಯಿಲ್‌ ಕಂಪನಿಗೆ  ಶ್ರೀಲಂಕಾ ಸರ್ಕಾರ ಅನುಮತಿ ನೀಡಿದೆ.

ಇಂಧನ ಸಮಸ್ಯೆಯನ್ನು ಪರಿಹರಿಸಲು ಲಂಕಾ ಇಂಡಿಯನ್ ಆಯಿಲ್ ಕಾರ್ಪೊರೇಷನ್‌ಗೆ (LIOC) 50 ಹೊಸ ಇಂಧನ ಕೇಂದ್ರಗಳನ್ನು ತೆರೆಯಲು ಶ್ರೀಲಂಕಾ ಅನುಮೋದನೆ ನೀಡಿದೆ ಎಂದು ಕಂಪನಿಯ ಅಧಿಕಾರಿಯೊಬ್ಬರು ಸೋಮವಾರ ಹೇಳಿದ್ದಾರೆ.

LIOC ಭಾರತದ ಇಂಡಿಯನ್ ಆಯಿಲ್ ಕಾರ್ಪೊರೇಶನ್‌ನ ಅಂಗ ಸಂಸ್ಥೆಯಾಗಿದೆ ಮತ್ತು ಕೊಲಂಬೋ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ ಲಿಸ್ಟ್‌ ಮಾಡಲಾಗಿದೆ.

ಶ್ರೀಲಂಕಾದ ಅತಿ ದೊಡ್ಡ ಸರ್ಕಾರಿ ನಿಯಂತ್ರಣದಲ್ಲಿರುವ ಸಿಲೋನ್ ಪೆಟ್ರೋಲಿಯಂ ಕಾರ್ಪೊರೇಷನ್ (CPC) ದೇಶದಲ್ಲಿ ಸುಮಾರು 1,190 ಇಂಧನ ಕೇಂದ್ರಗಳನ್ನು ನಿರ್ವಹಿಸುತ್ತದೆ.  ಇದನ್ನೂ ಓದಿ: ಸಿಬಲ್‌ ವಿರುದ್ದ ನ್ಯಾಯಾಂಗ ನಿಂದನೆ ಕೇಸ್‌: ಅಟಾರ್ನಿ ಜನರಲ್‌ಗೆ ಮನವಿ

ಎಲ್‌ಐಒಸಿ ಶ್ರೀಲಂಕಾದಲ್ಲಿರುವ ಸಣ್ಣ ಕಂಪನಿಯಾಗಿದ್ದು 216 ಇಂಧನ ಕೇಂದ್ರಗಳನ್ನು ಹೊಂದಿದೆ. ಮುಂದೆ 2 ಶತಕೋಟಿ ರೂ. ಬಂಡವಾಳವನ್ನು ಹೂಡಲಿದೆ ಎಂದು ಕಂಪನಿಯ ನಿರ್ದೇಶಕ ಮನೋಜ್‌ ಗುಪ್ತಾ ಹೇಳಿದ್ದಾರೆ. ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟು ಸೃಷ್ಟಿಯಾದ ಬಳಿಕ ಸಿಪಿಸಿಗೆ ಎಲ್‌ಐಒಸಿ ಇಂಧನವನ್ನು ಸರಬರಾಜು ಮಾಡಿತ್ತು.

ಇಂಧನ, ಆಹಾರ, ರಸಗೊಬ್ಬರ ಖರೀದಿ ಸಂಬಂಧ ಭಾರತ ಶ್ರೀಲಂಕಾಗೆ  ಈ ವರ್ಷ  ಒಟ್ಟು 4 ಶತಕೋಟಿ ಡಾಲರ್‌ ಹಣವನ್ನು ನೀಡಿದೆ. ಆರ್ಥಿಕ ಸಮಸ್ಯೆಯಿಂದ ಪಾರಾಗಲು 3 ಶತಕೋಟಿ ಡಾಲರ್‌ ಪ್ಯಾಕೇಜ್‌ ನೀಡುವಂತೆ ಅಂತರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್‌) ಬಳಿ ಶ್ರೀಲಂಕಾ ಮನವಿ ಮಾಡಿದೆ.

Live Tv

Leave a Reply

Your email address will not be published.

Back to top button