ಬೆಂಗಳೂರು: ಮಂಗಳೂರಿಗೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರಿಂದು ಸುಮಾರು 3,800 ಕೋಟಿ ಮೊತ್ತದ 8 ಯೋಜನೆಗಳನ್ನು ಲೋಕಾರ್ಪಣೆಗೊಳಿಸಿದ್ದಾರೆ. ಈ ವೇಳೆ ಕರ್ನಾಟಕದಲ್ಲಿ ಡಬಲ್ ಇಂಜಿನ್ ಸರ್ಕಾರದಿಂದ ಅಭಿವೃದ್ಧಿಯ ಹೊಸ ಯುಗಕ್ಕೆ ನಾಂದಿ ಹಾಡುತ್ತಿದೆ ಎಂಬ ವಿಶ್ವಾಸದ ಮಾತುಗಳನ್ನಾಡಿದ್ದಾರೆ.
https://twitter.com/ckchetanck/status/1565584119681130497
Advertisement
ಈ ಬೆನ್ನಲ್ಲೇ ಜಾಲತಾಣದಲ್ಲಿ ಪ್ರಧಾನಿ ಹಾಗೂ ಕೇಂದ್ರ ಸರ್ಕಾರದ ಆಡಳಿತದ ವಿರುದ್ಧ ಅಭಿಯಾನ ಶುರುವಾಗಿದೆ. ಟ್ವಿಟ್ಟರ್‌ನಲ್ಲಿ `ಮೋದಿ ಮೋಸ, ಗೋಬ್ಯಾಕ್ ಮೋದಿ’ ಹೆಸರಿನ ಅಭಿಯಾನ ಆರಂಭಿಸಿದ್ದು, ಪ್ರತಿ ಪಕ್ಷದ ನಾಯಕರು ಸರಣೀ ಟ್ವೀಟ್‌ಗಳ ಮೂಲಕ ಆಕ್ರೋಶ ಹೊರಹಾಕಿದ್ದಾರೆ. ಕಾಂಗ್ರೆಸ್ ಸಹ `ಉತ್ತರ ಕೊಡಿ ಮೋದಿ’ ಅಭಿಯಾನ ಆರಂಭಿಸಿದೆ. ಹಿಂದೆ ನೀಡಿದ ಭರವಸೆ ಹಾಗೂ ಇಡೇರದ ಭರವಸೆಗಳ ಬಗ್ಗೆ ಟೀಕಿಸಿದೆ. ಇದನ್ನೂ ಓದಿ: ಬಾಯ್ ಫ್ರೆಂಡ್ ಜೊತೆ ಲಾಡ್ಜ್‌ಗೆ ಹೋಗಿದ್ದ ವಿದ್ಯಾರ್ಥಿನಿ ಹೆಣವಾದ್ಲು – ಕಾರಣ ಮಾತ್ರ ಸಸ್ಪೆನ್ಸ್
Advertisement
2018ರಲ್ಲಿ ಮೈಸೂರನ್ನು ಪ್ಯಾರಿಸ್ ಮಾಡುತ್ತೇವೆ ಅಂದಿದ್ದರು ಆದರೆ 2022ರಲ್ಲೂ ಪ್ಯಾರಿಸ್ ಬದಲು ವೆನಿಸ್ ಆಗಿದೆ. ಸರ್ಕಾರಿ ಉದ್ಯೋಗಗಳು ಸೇಲ್ ಆಗುತ್ತಿವೆ, ಡಬಲ್ ಇಂಜಿನ್ ಸರ್ಕಾರದಲ್ಲಿ 40 ಪರ್ಸೆಂಟ್ ಕಮಿಷನ್ ಅಭಿವೃದ್ಧಿಪಡಿಸುವುದೇ ಹೊಸ ಯುಗದ ಆರಂಭವಾಗಿದೆ ಎಂದು ಆಕ್ರೋಶ ವ್ಯಕ್ತವಾಗಿದೆ.
Advertisement
Dear PM Modi,
Let’s hear you address:
– Contractors on 40% commission
– Schools on rampant bribery in the state
– Widespread protests amongst your own BJP party workers
– Bengaluru’s flooding issue
– Mangalore’s Hindu / Muslim killings
Welcome to Karnataka
#ModiMosa pic.twitter.com/wf2MI5BN4U
— Dhruv Jatti (@dhruv_jatti) September 2, 2022
Advertisement
ಮೋದಿ ಕಾರ್ಯಕ್ರಮಕ್ಕೆ ಸರ್ಕಾರಿ ಆಡಳಿತ ಯಂತ್ರವನ್ನು ದುರುಪಯೋಗಪಡಿಸಿಕೊಂಡು ಬಲವಂತದಿಂದ ಜನರನ್ನು ಸೇರಿಸುವ ದುರ್ಗತಿ ಕರ್ನಾಟಕ ಬಿಜೆಪಿ ಸರ್ಕಾರಕ್ಕೆ ಬಂದಿದೆ. ಈ ಬಲವಂತವೇ ಸರ್ಕಾರದ ದುರಾಡಳಿತಕ್ಕೆ, ಜನವಿರೋಧಕ್ಕೆ ಸಾಕ್ಷಿಯಾಗಿ ನಿಂತಿದೆ. ಡಬಲ್ ಇಂಜಿನ್ ಸರ್ಕಾರದಿಂದ `ಫಲ’ವೇ ಇಲ್ಲದಿರುವಾಗ ಫಲಾನುಭವಿಗಳು ಎಲ್ಲಿ ಸಿಗುತ್ತಾರೆ ಎಂದು ಪ್ರಶ್ನಿಸಿದ್ದಾರೆ.
ಬಿಜೆಪಿ ಸರ್ಕಾರದ ಭ್ರಷ್ಟಾಚಾರ, ಅನಾಚಾರ ಹಾಗೂ ಮೋದಿ ಮೋಸದಿಂದ ಜನತೆ ಆಕ್ರೋಶಗೊಂಡಿರುವುದು ಕರ್ನಾಟಕ ಬಿಜೆಪಿ ಗಮನಕ್ಕೆ ಬಂದಿದೆ. ಮೋದಿ ಎದುರು ಖಾಲಿ ಕುರ್ಚಿಗಳ ಮೂಲಕ ಜನಾಕ್ರೋಶ ವ್ಯಕ್ತವಾಗುವ ಭಯದಲ್ಲಿ ಜನ ಸೇರಿಸಲು ತಿಪ್ಪರಲಾಗಾ ಹಾಕುತ್ತಿದೆ. ಜನ ಸೇರಿಸಲು ನೋಡಲ್ ಅಧಿಕಾರಿಗಳನ್ನು ನೇಮಿಸಿದ್ದು ಸರ್ಕಾರದ ದಿವಾಳಿತನದ ಪರಮಾವಧಿಗೆ ಸಾಕ್ಷಿಯಾಗಿದೆ ಎಂದು ಟೀಕಿಸಿದೆ. ಇದನ್ನೂ ಓದಿ: ಮುದ್ದು ಮಕ್ಕಳ ಜೊತೆ ಗಣಪತಿ ಹಬ್ಬ ಆಚರಿಸಿದ ರಾಧಿಕಾ ಪಂಡಿತ್
PM Modi had promised to provide a house to every poor person by 2022. The country is waiting for this promise to be fulfilled – but where are the houses? Does the PM have an answer?#ModiMosa pic.twitter.com/2TFqcd4V2k
— Dr. Ajay Dharam Singh / ಡಾ. ಅಜಯ ಸಿಂಗ್ (@Dr_Ajay_Singh) September 2, 2022
ಮಂಡ್ಯದಲ್ಲಿ `ಖಾಲಿ ಕುರ್ಚಿ ಉತ್ಸವ’ದಿಂದ ಕಂಗೆಟ್ಟ ಬಸವರಾಜ್ ಬೊಮ್ಮಾಯಿ ಅವರು, ಪ್ರಧಾನಿ ಎದುರು ಮಾನ ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ. ಹಾಗಾಗಿಯೇ ಜನ ಸೇರಿಸಲು ನೂಡಲ್ ಆಫೀಸರ್ಸ್ ನೇಮಕ ಮಾಡಿದ್ದಾರೆ. ಸ್ತ್ರೀ ಶಕ್ತಿ ಸಂಘಗಳ ಮಹಿಳೆಯರಿಗೆ ಕಿರುಕುಳ ನೀಡಿ ಕರೆತರುವ ಈ ಬಲವಂತವು ಸರ್ವಾಧಿಕಾರಿಯನ್ನು ಮೆಚ್ಚಿಸಲು ಮುಖ್ಯಮಂತ್ರಿಗಳ ಸರ್ವಾಧಿಕಾರಿ ನಡೆಯನ್ನ ಸೂಚಿಸಿದೆ.
Unable to fight politically, BJP has resorted to dirty politics by roping in ED and CBI who have become mere #PuppetsOfBJP #ModiMosa pic.twitter.com/sTJwsN5788
— REMO (@remo24x7) September 2, 2022
ಬಿಜೆಪಿ ಸರ್ಕಾರದಿಂದ ಜನರಿಗೆ ಫಲವೇ ಸಿಕ್ಕಿಲ್ಲ, ಈ ಸರ್ಕಾರದಲ್ಲಿ 40 ಪರ್ಸೆಂಟ್ ಕಮಿಷನ್ ಲೂಟಿ ಮಾಡಿದವರು, ನೇಮಕಾತಿ ಅಕ್ರಮಗಳನ್ನು ನಡೆಸಿದವರು, ಅರ್ಹತೆ ಇಲ್ಲದೆಯೇ ಅಧಿಕಾರ ಪಡೆದವರೇ ಫಲಾನುಭವಿಗಳಾಗಿದ್ದಾರೆ. ಮೋದಿಯವರೇ ಈ ಫಲಾನುಭವಿಗಳನ್ನು ಭೇಟಿಯಾಗಲು ಮೈದಾನ ಬೇಡ, ಬಿಜೆಪಿ ಕಚೇರಿಯೇ ಸಾಕಿತ್ತು ಎಂದು ಕುಟುಕಿದೆ.