ಸ್ಯಾಂಡಲ್ವುಡ್ ಸಿಂಡ್ರೆಲ್ಲಾ ರಾಧಿಕಾ ಪಂಡಿತ್ ಬಣ್ಣದ ಲೋಕದಿಂದ ಅಂತರ ಕಾಯ್ದುಕೊಂಡಿದ್ದಾರೆ. ಮಕ್ಕಳ ಪೋಷಣೆಯಲ್ಲಿ ಬ್ಯುಸಿಯಿರುವ ರಾಧಿಕಾ, ಸದ್ಯ ಗಣಪತಿ ಹಬ್ಬದ ಆಚರಣೆಯಲ್ಲಿ ಹೇಗಿತ್ತು ಎಂಬುದನ್ನ ಫೋಟೋ ಮೂಲಕ ತಿಳಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ರಾಧಿಕಾ ಶೇರ್ ಮಾಡಿದ್ದಾರೆ.
ಚಂದನವನದ ಟಾಪ್ ನಟಿಯರಲ್ಲಿ ಒಬ್ಬರಾಗಿ ಮಿಂಚಿದ್ದ ನಟಿ ರಾಧಿಕಾ ಪಂಡಿತ್ ಸದ್ಯ ತಮ್ಮ ವೈಯಕ್ತಿಕ ಜೀವನದಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಗಣಪತಿ ಹಬ್ಬವನ್ನ ರಾಧಿಕಾ ಪಂಡಿತ್ ಅದ್ದೂರಿಯಾಗಿ ಆಚರಿಸಿದ್ದಾರೆ. ಹಬ್ಬದ ಸಂಭ್ರಮದ ಕ್ಷಣವನ್ನ ಸಾಮಾಜಿಕ ಜಾಲತಾಣದಲ್ಲಿ ನಟಿ ಹಂಚಿಕೊಂಡಿದ್ದಾರೆ. ಬಹಳ ವರ್ಷಗಳ ನಂತರ ಅಜ್ಜಿ ಮನೆಯಲ್ಲಿ ಗಣಪತಿ ಹಬ್ಬವನ್ನ ರಾಧಿಕಾ ಪಂಡಿತ್ ಆಚರಿಸಿರುವುದು ವಿಶೇಷ. ಇದನ್ನೂ ಓದಿ:ಹೂವುಗಳನ್ನ ದೇಹಕ್ಕೆ ಅಂಟಿಸಿ, ಪ್ಲಾಸ್ಟಿಕ್ ಕವರ್ನಲ್ಲಿ ಮೈಮುಚ್ಚಿಕೊಂಡು ಬಂದ ಉರ್ಫಿ
View this post on Instagram
ಅಜ್ಜಿ ಮನೆಯಲ್ಲಿ ಗಣೇಶನ ಹಬ್ಬವನ್ನ ಅದ್ದೂರಿಯಾಗಿ ರಾಧಿಕಾ ಸೆಲೆಬ್ರೇಟ್ ಮಾಡಿದ್ದಾರೆ. ಐರಾ ಮುದ್ದು ತಮ್ಮ ಯಥರ್ವ್ಗೆ ಅರಿಶಿನ ದಾರ ಕಟ್ಟುತ್ತಿರುವ ಫೋಟೋವನ್ನ ಶೇರ್ ಮಾಡಿ, ಎಲ್ಲರೂ ಗಣೇಶ ಹಬ್ಬವನ್ನು ಚೆನ್ನಾಗಿ ಆಚರಿಸಿದ್ರಿ ಎಂದು ಭಾವಿಸುತ್ತೇನೆ. ಚೆನ್ನಾಗಿ ಮೋದಕ, ಕಡಬು ತಿಂದ್ರಾ ಎಂದು ನಟಿ ಪ್ರಶ್ನಿಸಿದ್ದಾರೆ. ಸದ್ಯ ರಾಧಿಕಾ ಜತೆಯಿರುವ ಐರಾ ಮತ್ತು ಯಥರ್ವ್ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳ ಗಮನ ಸೆಳೆಯುತ್ತಿದೆ.