ನವದೆಹಲಿ: ರಷ್ಯಾ ಆಕ್ರಮಣದ ಬಳಿಕ ಉಕ್ರೇನ್‌ಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಈ ತಿಂಗಳ ಅಂತ್ಯಕ್ಕೆ ಭೇಟಿ ನೀಡಲಿದ್ದಾರೆ.
ರಷ್ಯಾ (Russia) ಜೊತೆಗಿನ ಯುದ್ಧದ ನಂತರ ಉಕ್ರೇನ್‌ಗೆ (Ukraine) ನೀಡುತ್ತಿರುವ ಮೊದಲ ಭೇಟಿ ಇದಾಗಿದೆ. ಆ.22 ಅಥವಾ ಆ.23 ರಂದು ಮೋದಿ ಉಕ್ರೇನ್‌ಗೆ ಭೇಟಿ ನೀಡುವ ಸಾಧ್ಯತೆಯಿದೆ. ಉಕ್ರೇನ್ ಭೇಟಿಯನ್ನು ವಿದೇಶಾಂಗ ಸಚಿವಾಲಯ (External Affairs Ministry) ಅಧಿಕೃತವಾಗಿ ತಿಳಿಸಿದ್ದು ದಿನಾಂಕ ಇನ್ನಷ್ಟೇ ಪ್ರಕಟವಾಗಬೇಕಿದೆ. ಪ್ರವಾಸದ ವಿವರಗಳನ್ನು ನಂತರ ತಿಳಿಸಲಾಗುವುದು ಎಂದು ವಿದೇಶಾಂಗ ಸಚಿವಾಲಯ ಉಲ್ಲೇಖಿಸಿದೆ.ಇದನ್ನೂ ಓದಿ: ತ್ರಿವಳಿ ತಲಾಖ್ ಪದ್ಧತಿಯಿಂದ ಮುಸ್ಲಿಂ ಮಹಿಳೆಯರ ಸ್ಥಿತಿ ದಯನೀಯವಾಗಿದೆ: ಕೇಂದ್ರ
ಮಾಸ್ಕೋದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಅವರನ್ನು ಭೇಟಿಯಾದ ಸುಮಾರು ಒಂದು ತಿಂಗಳ ನಂತರ ಉಕ್ರೇನ್‌ಗೆ ಭೇಟಿ ನೀಡುತ್ತಿದ್ದಾರೆ. ಉಕ್ರೇನ್‌ಗೆ ಭೇಟಿ ನೀಡಿದ ಬಳಿಕ ಮೋದಿ ಪೋಲೆಂಡ್‌ಗೆ ಭೇಟಿ ನೀಡಲಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು 22ನೇ ಭಾರತ-ರಷ್ಯಾ ವಾರ್ಷಿಕ ಶೃಂಗಸಭೆಗಾಗಿ ಪುಟಿನ್ ಅವರ ಆಹ್ವಾನದ ಮೇರೆಗೆ ಜುಲೈ 8 ರಂದು ಎರಡು ದಿನಗಳ ಭೇಟಿಗಾಗಿ ಮಾಸ್ಕೋಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ, ಪರಮಾಣು ಶಕ್ತಿ ಮತ್ತು ಹಡಗು ನಿರ್ಮಾಣ ಸೇರಿದಂತೆ ವಿವಿಧ ವಲಯಗಳಲ್ಲಿ ಸಹಕಾರವನ್ನು ಹೆಚ್ಚಿಸಲು ಎರಡೂ ದೇಶಗಳು ಒಪ್ಪಿಕೊಂಡಿದ್ದವು.ಇದನ್ನೂ ಓದಿ: ವಯನಾಡು ದುರಂತ ಹೇಗಾಯ್ತು? – ಭಯಾನಕ ಜಲಪ್ರಳಯದ ಸಿಸಿಟಿವಿ ದೃಶ್ಯ ನೋಡಿ
ಭೇಟಿ ವೇಳೆ ಮೋದಿಯವರಿಗೆ ರಷ್ಯಾದ ಅತ್ಯುನ್ನತ ನಾಗರಿಕ ಗೌರವವಾದ ಆರ್ಡರ್ ಆಫ್ ಸೇಂಟ್ ಆಂಡ್ರ‍್ಯೂ ದಿ ಅಪೊಸ್ಟಲ್ ಗೌರವವನ್ನು ಪುಟಿನ್ ನೀಡಿ ಗೌರವಿಸಿದ್ದರು.