ನವದೆಹಲಿ: ಅಜರ್ಬೈಜಾನ್ನ ಬಾಕುವಿನಲ್ಲಿ ನಡೆದ ಚೆಸ್ ವಿಶ್ವಕಪ್-2023 ಫೈನಲ್ (Chess World Cup Final 2023)ನ ಟೈ ಬ್ರೇಕರ್ನಲ್ಲಿ ಅಮೋಘ ಪ್ರದರ್ಶನದ ಹೊರತಾಗಿಯೂ ವಿರೋಚಿತ ಸೋಲನುಭವಿಸಿದ ಚೆಸ್ ಯುವ ಗ್ರ್ಯಾಂಡ್ ಮಾಸ್ಟರ್ ಭಾರತದ ಆರ್.ಪ್ರಜ್ಞಾನಂದ (Praggnanandhaa) ಅವರನ್ನ ಪ್ರಧಾನಿ ನರೇಂದ್ರ ಮೋದಿ (Narendra Modi) ಶ್ಲಾಘಿಸಿದ್ದಾರೆ. ಜೊತೆಗೆ ಪ್ರಜ್ಞಾನಂದನ ಮುಂದಿನ ಭವಿಷ್ಯ ಇನ್ನಷ್ಟು ಉಜ್ವಲವಾಗಿರಲಿ ಎಂದೂ ಶುಭ ಹಾರೈಸಿದ್ದಾರೆ.
We are proud of Praggnanandhaa for his remarkable performance at the FIDE World Cup! He showcased his exceptional skills and gave a tough fight to the formidable Magnus Carlsen in the finals. This is no small feat. Wishing him the very best for his upcoming tournaments. pic.twitter.com/KXYcFRGYTO
— Narendra Modi (@narendramodi) August 24, 2023
Advertisement
ಚೆಸ್ ವಿಶ್ವಕಪ್ನ ಫೈನಲ್ ಟೈ ಬ್ರೇಕರ್‌ನ 2ನೇ ಸುತ್ತಿನಲ್ಲಿ 5 ಬಾರಿ ವಿಶ್ವ ಚಾಂಪಿಯನ್ ಆಗಿದ್ದ ಮ್ಯಾಗ್ನಸ್ ಕಾರ್ಲ್‌ಸೆನ್ ಗೆಲುವು ಸಾಧಿಸಿ 6ನೇ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿದ್ದಾರೆ. ಭಾರತೀಯ ಚೆಸ್ ಪಟು ಪ್ರಜ್ಞಾನಂದಗೆ ಸೋಲಾಗಿದ್ದು, ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿದ್ದಾರೆ. ಇದನ್ನೂ ಓದಿ: ಭಾರತದ ಪ್ರಜ್ಞಾನಂದಗೆ ಸೋಲು – 6ನೇ ಬಾರಿಗೆ ವಿಶ್ವಚಾಂಪಿಯನ್ ಆದ ಮ್ಯಾಗ್ನಸ್ ಕಾರ್ಲ್‌ಸನ್
Advertisement
Advertisement
ಪ್ರಜ್ಞಾನಂದ ಅವರ ಸಾಧನೆಯನ್ನ ಕೊಂಡಾಡಿರುವ ಭಾರತದ ಪ್ರಧಾನಿ, ಎಕ್ಸ್ (ಟ್ವೀಟರ್) ಮೂಲಕ ಹೆಮ್ಮ ವ್ಯಕ್ತಪಡಿಸಿದ್ದಾರೆ. ಜೊತೆಗೆ ಅವರ ಅಸಾಧಾರಣ ಪ್ರತಿಭಾ ಕೌಶಲ್ಯವನ್ನ ಗುಣಗಾನ ಮಾಡಿದ್ದಾರೆ. ಫೈನಲ್ನಲ್ಲಿ ವಿಶ್ವದ ನಂ.1 ಚೆಸ್ ಆಟಗಾರ ಮ್ಯಾಗ್ನಸ್ ಕಾರ್ಲ್‌ಸನ್ ಎದುರು ಪ್ರಜ್ಞಾನಂದ ಸೋಲನುಭವಿಸಿದ್ದ ಬೆನ್ನಲ್ಲೇ ಟ್ವೀಟ್ ಮಾಡಿರುವ ಮೋದಿ ಯುವ ಚೆಸ್ ಪಟುವನ್ನು ಹುರಿದುಂಬಿಸಿದ್ದಾರೆ. ಇದನ್ನೂ ಓದಿ: ಏಷ್ಯಾಕಪ್ ಗೆಲ್ಲುವ ಉತ್ಸಾಹ – ಟೀಂ ಇಂಡಿಯಾಕ್ಕೆ ಬೆಂಗಳೂರಿನಲ್ಲಿ ಫಿಟ್‍ನೆಸ್ ಟ್ರೈನಿಂಗ್
Advertisement
ಎಫ್‌ಐಡಿಇ (ಫಿಡೆ) ಚೆಸ್ ವಿಶ್ವಕಪ್ನಲ್ಲಿ ನೀಡಿದ ಗಮನಾರ್ಹ ಪ್ರದರ್ಶನಕ್ಕೆ ಪ್ರಜ್ಞಾನಂದ ಅವರ ಬಗ್ಗೆ ನಮಗೆ ಹೆಮ್ಮೆ ಇದೆ. ಪ್ರಜ್ಞಾನಂದ ಅವರು ತಮ್ಮ ಅಸಾಧಾರಣ ಕೌಶಲ್ಯಗಳನ್ನ ಜಗತ್ತಿಗೆ ತೋರಿಸಿದ್ದಾರೆ. ಅಲ್ಲದೆ ಫೈನಲ್ನಲ್ಲಿ ನಿಮ್ಮ ಅಸಾಧಾರಣ ಸಾಮರ್ಥ್ಯದ ಮೂಲಕ ವಿಶ್ವದ ನಂ.1 ಆಟಗಾರನಿಗೆ ಕಠಿಣ ಹೋರಾಟ ನೀಡಿದ್ದೀರಿ. ಇದು ಸಣ್ಣ ಸಾಧನೆಯಲ್ಲ. ನಿಮ್ಮ ಮುಂದಿನ ಎಲ್ಲಾ ಪಂದ್ಯಗಳಿಗೆ ಶುಭ ಹಾರೈಸುತ್ತೇನೆ ಎಂದು ಟ್ವೀಟ್ ಮೂಲಕ ಶುಭಕೋರಿದ್ದಾರೆ.
Web Stories